ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕ್ರೇಜಿ ಸ್ಟಾರ್ ಹುಟ್ಟು ಹಬ್ಬ ಮುಂದೂಡಿಕೆ! (Ravichandran | Manjina hani | Kanasugara | Premaloka)
PR
ಕನ್ನಡ ಚಿತ್ರರಂಗ ಕಂಡ ಕನಸುಗಾರ ಕ್ರೇಜಿ ಸ್ಟಾರ್ ರವಿಚಂದ್ರನ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಈ ತಿಂಗಳ 30ರಂದು ರವಿಚಂದ್ರನ್ ಅವರ 50ನೇ ಹುಟ್ಟುಹಬ್ಬ. ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದರು. ಆದರೆ ಈಗ ಅವರ ಆಸೆಗೆ ತಣ್ಣೀರೆರಚಿದಂತಾಗಿದೆ.

ಈ ತಿಂಗಳ 30ರಂದು ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲಲ್ಲ. ಹಾಗಾಗಿ ಅಭಿಮಾನಿಗಳು ಹುಟ್ಟು ಹಬ್ಬ ಆಚರಿಸಲು ಬರುವುದು ಬೇಡ. ಬಂದರೂ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ರವಿಚಂದ್ರನ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮೇ ಮೂವತ್ತರಂದು ಅವರು 50ನೇ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಕಾರಣವೂ ಇದೆ. ಮುಂದಿನ ತಿಂಗಳು ಅವರ ಮಹತ್ವಾಕಾಂಕ್ಷೆಯ ಚಿತ್ರ 'ಮಂಜಿನ ಹನಿ' ಬಿಡುಗಡೆಯಾಗಲಿದೆ. ಈ ಚಿತ್ರ ಬಿಡುಗಡೆಯಾದಾಗಲೇ ರವಿಚಂದ್ರನ್ ತಮ್ಮ ಐವತ್ತನೇ ಹುಟ್ಟುಹಬ್ಬ ಆಚರಿಸಲು ನಿರ್ಧಸಿರುವುದರಿಂದ ಮೇ 30ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಸ್ವಯಂ ರವಿಚಂದ್ರನ್ ಅವರೇ ವಿಷಯ ಸ್ಪಷ್ಟಪಡಿಸಿದ್ದಾರೆ.

ರವಿಚಂದ್ರನ್ ಹೇಳಿಕೆಯಿಂದ ಅವರ ಅಭಿಮಾನಿಗಳಿಗೆ ಬೇಸರವಾಗಿರಬಹುದು. ಮೇ30ರಂದು ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬ ಆಚರಿಸಲು ಸಾಧ್ಯವಾಗದಿದ್ದಕ್ಕೆ ಬೇಸರಪಟ್ಟುಕೊಳ್ಳುವ ಬದಲು 'ಮಂಜಿನ ಹನಿ' ಬಿಡುಗಡೆಯಾದಾಗ ಡಬ್ಬಲ್ ಖುಷಿ, ಆನಂದ, ಸಂಭ್ರಮದಲ್ಲಿ ತೊಡಗಬಹುದು. ಆದರೆ 'ಮಂಜಿನ ಹನಿ' ಬಿಡುಗಡೆ ಯಾವತ್ತೆಂಬುದು ಇನ್ನೂ ನಿರ್ಧಾರವಾಗಿಲ್ಲ.
ಇವನ್ನೂ ಓದಿ