ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಮಂಜಿನ ಹನಿ'ಯೇ ನನ್ನ ಬರ್ತ್ ಡೇ ಗಿಫ್ಟ್! (Manjina hani | Ravi chandran | Namitha | Mallikarjuna)
PR
ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಪ್ರತಿಯೊಂದು ಹುಟ್ಟುಹಬ್ಬಕ್ಕೂ ಅಭಿಮಾನಿಗಳಿಗೆ ಒಂದೊಂದು ಸದಭಿರುಚಿಯ ಚಿತ್ರಗಳನ್ನು ಕೊಡುತ್ತಲೇ ಬಂದಿದ್ದಾರೆ. ಕಳೆದ ವರ್ಷ ಮೀರಾ ಜಾಸ್ಮಿನ್, ನಮಿತಾ ಜೊತೆಯಾಗಿ ಅಭಿನಯಿಸಿದ್ದ 'ಹೂ'ವನ್ನು ಅಭಿಮಾನಿಗಳಿಗೆ ಅರ್ಪಿಸಿದ್ದರು.

ಈ ವರ್ಷ ರವಿಚಂದ್ರನ್ ಹುಟ್ಟುಹಬ್ಬದ ಪ್ರಯುಕ್ತ 'ಮಲ್ಲಿಕಾರ್ಜುನ' ಚಿತ್ರ ಬರುತ್ತಿದೆ ಎಂಬ ಜಾಹೀರಾತು ಬರುತ್ತಿದೆಯಾದರೂ, 'ಮಂಜಿನ ಹನಿ'ಯೇ ನನ್ನ ಬರ್ತ್ ಡೇ ಗಿಫ್ಟ್ ಎಂದು ರವಿಚಂದ್ರನ್ ಸ್ಪಷ್ಟಪಡಿಸಿದ್ದಾರೆ.

ಸುಮಾರು ಮೂರು ವರ್ಷಗಳಿಂದಲೂ ಚಿತ್ರೀಕರಣ ನಡೆಯುತ್ತಿರುವ 'ಮಂಜಿನ ಹನಿ'ಗೆ ಈಗಲಾದರೂ ಬಿಡುಗಡೆಯ ಅವಕಾಶ ಸಿಕ್ಕಿದೆ. ಮೇ ಮೂವತ್ತು ರವಿಚಂದ್ರನ್ ಹುಟ್ಟುಹಬ್ಬವಾದರೂ ಅಂದು ಚಿತ್ರ ಬಿಡುಗಡೆಯಾಗುವ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ಅಂದು ಹುಟ್ಟು ಹಬ್ಬದ ಆಚರಣೆ ಇಲ್ಲವೆಂದಿದ್ದಾರೆ ರವಿಚಂದ್ರನ್.

'ಮಂಜಿನ ಹನಿ'ಯಲ್ಲಿ ಪ್ರಕಾಶ್ ರೈ, ಭಾವನಾ, ಹರಿಪ್ರಿಯಾ ಮುಂತಾದವರ ತಾರಾ ದಂಡೇ ಇದೆ. ರವಿಚಂದ್ರನ್ ಅವರ ಹಿಂದಿನ ಚಿತ್ರಗಳು ಯಶಸ್ಸು ಕಂಡಿಲ್ಲ. ಈಗಲಾದರೂ ಕನಸುಗಾರನ ಕನಸು ನನಸಾಗಲೆಂದು ಹಾರೈಸೋಣ.
ಇವನ್ನೂ ಓದಿ