ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಮ್ಯಾದ್ದು ಐಟಂ ಅಲ್ಲ, ಡ್ರೀಮ್ ಸಾಂಗ್! (Ramya | Johny mera naam Preethi mera kaam | Vijay | Sanju weds Geetha)
PR
'ಡೋಂಟ್ ಯೂ ನೋ, ಡೋಂಟ್ ಯೂ ನೋ ಐಯಾಮ್ ವೆರಿ ಸೆಕ್ಸಿ' ಎಂಬ ಐಟಂ ಹಾಡಿಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕುಣಿದಿದ್ದಾರೆ ಎಂಬುದು ಇದೀಗ ಗಾಂಧಿನಗರದ ದೊಡ್ಡ ಸುದ್ದಿ. ರಮ್ಯಾ ಅದೃಷ್ಟವೋ ಅಥವಾ ನಿರ್ಮಾಪಕರ ಅದೃಷ್ಟವೋ ಜೂನ್ ಮೂರರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ 'ಜಾನಿ ಮೇರಾ ನಾಮ್, ಪ್ರೀತಿ ಮೇರಾ ಕಾಮ್' ಚಿತ್ರದ ಇದೇ ಹಾಡೇ ಹಿಟ್ ಆಗಿ ಬಿಟ್ಟಿದೆ.

ಈಗಷ್ಟೇ 'ಸಂಜು ವೆಡ್ಸ್ ಗೀತಾ' ಚಿತ್ರದ ಯಶಸ್ಸಿನಿಂದ ಹೊರಬರುತ್ತಿರುವ ರಮ್ಯಾ ಈ ಚಿತ್ರ ಕೂಡಾ ಯಶಸ್ಸು ಕೊಡುತ್ತದೆ ಎಂಬ ಹೆಬ್ಬಯಕೆಯಲ್ಲಿದ್ದಾರೆ. ಐಟಮ್ ಹಾಡಿನ ವದಂತಿ ಬಗ್ಗೆ ರಮ್ಯಾ ಕೂಲ್ ಆಗಿ ಪ್ರತಿಕ್ರಿಯಿಸಿದ್ದು 'ಅದು ಐಟಮ್ ಸಾಂಗ್ ಅಲ್ಲ, ಡ್ರೀಮ್ ಸಾಂಗ್' ಎಂದು ಉತ್ತರಿಸಿದ್ದಾರೆ

'ಚಿತ್ರಕ್ಕೆ ನಾನೇ ಹೀರೋಯಿನ್. ಹೀಗಿರುವಾಗ ನಾನು ಹೇಗೆ ಐಟಂ ಹಾಡಿನಲ್ಲಿ ಕುಣಿಯಲಿ? ಹೋಗಲಿ ಐಟಂ ಹಾಡಿನಲ್ಲಿ ಹಾಡಿನಲ್ಲಿ ಕುಣಿಯುವ ಅಗತ್ಯವಾದರೂ ಏನಿದೆ? ಚಿತ್ರ ನೋಡಿದ ಮೇಲೆ ನಿಮಗೇ ಗೊತ್ತಾಗುತ್ತದೆ. ಅದು ಕೇವಲ ಸಾಂದರ್ಭಿಕ ಹಾಡು' ಎಂದಿದ್ದಾರೆ ರಮ್ಯಾ.

'ಹಾಡಿಗೆ ಬ್ಯಾಂಕಾಕ್‌ನ ಅಂಡರ್ ವಾಟರ್‌ನಲ್ಲಿ ತುಂಬಾ ರಿಸ್ಕ್ ತಗೊಂಡು ಶೂಟಿಂಗ್ ಮಾಡಿದ್ದೇವೆ. ಎಲ್ಲೂ ವಲ್ಗಾರಿಟಿ, ಅಶ್ಲೀಲತೆ ಇಲ್ಲ. ಚಿತ್ರಕ್ಕೆ 'ಯು' ಸರ್ಟಿಫಿಕೇಟ್ ಸಿಕ್ಕಿರುವುದೇ ಇದಕ್ಕೆ ಸಾಕ್ಷಿ' ಎಂದಿದ್ದಾರೆ ರಮ್ಯಾ.
ಇವನ್ನೂ ಓದಿ