ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸುವರ್ಣ ಚಲನ ಚಿತ್ರ ಪ್ರಶಸ್ತಿಗೆ ಯಾರ್ಯಾರಿಗೆ ? (Suvarna Channel | Kannada Movies, Dwarakish, KFCC, R. Ashok, Puneeth, Sudeep)
PR
ಮೂರನೇ ವರ್ಷದ ಸುವರ್ಣ ಚಲನ ಚಿತ್ರ ಪ್ರಶಸ್ತಿಯ ಆಯ್ಕೆಗೆ ಚಾಲನೆ ದೊರೆತಿದೆ. ನೀವು ಕರ್ನಾಟಕದಲ್ಲಿದ್ದರೆ ನಿಮ್ಮ ನಿಮ್ಮ ಹಳ್ಳಿಗಳಿಗೆ ಸುವರ್ಣ ವಾಹಿನಿಯ ಮತದಾನ ರಥ ಬರಲಿದೆ. ಅಲ್ಲಿಗೆ ಧಾವಿಸಿ ನಿಮ್ಮ ನೆಚ್ಚಿನ ನಟರನ್ನು ಗುಪ್ತ ಮತದಾನದ ಮೂಲಕ ಆಯ್ಕೆ ಮಾಡಿ ಅವರಿಗೊಂದು ಪ್ರಶಸ್ತಿ ಕೊಡಿಸುವಲ್ಲಿ ನಿಮ್ಮ ಅಭಿಮಾನವನ್ನು ವ್ಯಕ್ತಪಡಿಸಬಹುದು. ಚಿತ್ರರಸಿಕರಿಗೆ ತಮ್ಮ ಅಭಿಮಾನ ವ್ಯಕ್ತಪಡಿಸಲು ಇದೊಂದು ಸುವರ್ಣ ಅವಕಾಶ. ಜತೆಗೆ ಚಿತ್ರನಟರಿಗೂ ತಮ್ಮ ವರ್ಚಸ್ಸು ಏನೆಂದು ತಿಳಿದುಕೊಳ್ಳಲು ಇದೊಂದು ಅಗ್ನಿ ಪರೀಕ್ಷೆ ಎನ್ನುತ್ತಿದ್ದಾರೆ ಚಿತ್ರಪಂಡಿತರು.

ಪ್ರಸಕ್ತ 2010ನೇ ವರ್ಷದಲ್ಲಿ 132 ಚಿತ್ರಗಳು ಬಿಡುಗಡೆಯಾಗಿದ್ದು, ಪ್ರಶಸ್ತಿಯ ಪರಿದಿಯೊಳಗೆ ಈ ಚಿತ್ರಗಳು ಮಾತ್ರ ಒಳಪಡುತ್ತದೆ. ಪ್ರಶಸ್ತಿ 29 ವಿಭಾಗಗಳನ್ನು ಒಳಗೊಂಡಿದ್ದು ಸಿನಿಮಾದ ಎಲ್ಲಾ ವಿಭಾಗಗಳಿಂದ 150ಮಂದಿ ಅರ್ಹರ ಹೆಸರನ್ನು ಆಯ್ಕೆ ಮಾಡಲಾಗಿದೆ.

29 ವಿಭಾಗದ ಪ್ರಶಸ್ತಿಯಲ್ಲಿ 24 ನಮೂನೆಯ ಪ್ರಶಸ್ತಿಗಳಿಗೆ ಅರ್ಹ ಕಲಾವಿದರನ್ನು ಸುವರ್ಣ ಚಲನ ಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಚುನಾಯಿಸಲಿದ್ದು ಉಳಿದ ಪ್ರಮುಖ ಐದು ವಿಭಾಗದ ಪ್ರಶಸ್ತಿಗಳನ್ನು ಸಾರ್ವಜನಿಕರಿಂದ ಮತದಾನ ಮಾಡುವ ಮೂಲಕ ಆಯ್ಕೆ ಮಾಡಲಾಗುತ್ತದೆ. ಅವುಗಳಲ್ಲಿ ಅತ್ಯುತ್ತಮ ನಟ, ನಟಿ, ನಿರ್ದೇಶಕ ಸೇರಿದಂತೆ ಅತ್ಯುತ್ತಮ ಚಿತ್ರ ಹಾಗೂ ಗೀತೆಯನ್ನು ಆಯ್ಕೆ ಮಾಡುವ ಜವಾಬ್ದಾರಿ ಸಾರ್ವಜನಿಕರದು.

ಹಿರಿಯ ನಟ ದ್ವಾರಕೀಶ್, ನಟಿ ತಾರಾ, ಪತ್ರಕರ್ತ ಜೋಗಿ ಹಾಗೂ ನಿರ್ದೇಶಕ ಪ್ರಕಾಶ್ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಚಿತ್ರರಂಗದ ಕಲಾವಿದರೂ ಸೇರಿದಂತೆ ವಿವಿಧ ವಿಭಾಗಗಳ ಪರಿಣಿತರನ್ನು ಅವರ ಕೌಶಲ್ಯದ ಆಧಾರದ ಮೇಲೆ ಗುರುತಿಸಿ ಒಂದು ಪ್ರಥಮ ಪಟ್ಟಿ ಸಿದ್ಧಪಡಿಸಿದೆ.

ಅತ್ತ್ಯುತ್ತಮ ನಟ ಪ್ರಶಸ್ತಿ ಪಟ್ಟಿಯಲ್ಲಿರುವವರು...
ಡಾ. ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್, ಪುನಿತ್ ರಾಜ್‌ಕುಮಾರ್, ಸುದೀಪ್, ದರ್ಶನ್, ಗಣೇಶ್, ವಿಜಯ್.

ಅತ್ತ್ಯುತ್ತಮ ನಟಿ ಪ್ರಶಸ್ತಿ ಪಟ್ಟಿಯಲ್ಲಿರುವವರು...
ರಮ್ಯಾ, ರಾಧಿಕಾ ಪಂಡಿತ್, ಐಂದ್ರಿತಾ ರೇ, ಪ್ರಿಯಾಮಣಿ, ರಾಗಿಣಿ, ನಿಧಿ ಸುಬ್ಬಯ್ಯ ಮತ್ತು ಪೂಜಾಗಾಂಧಿ.

ವರ್ಷದ ಅತ್ತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾದ ಚಿತ್ರಗಳು...
ಆಪ್ತರಕ್ಷಕ, ಜಾಕಿ, ಸೂಪರ್, ಮೈಲಾರಿ, ಜಸ್ಟ್ ಮಾತ್ ಮಾತಲ್ಲಿ, ಪಂಚರಂಗಿ ಹಾಗೂ ಕೃಷ್ಣನ್ ಲವ್ ಸ್ಟೋರಿ.

ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಆಯ್ಕೆಯಾಗಿರುವವರು....
ಯೋಗರಾಜ್ ಭಟ್, ಸೂರಿ, ಪಿ.ವಾಸು, ಸುದೀಪ್, ಉಪೇಂದ್ರ, ಚಂದ್ರು, ಶಶಾಂಕ್, ಸಾಧುಕೋಕಿಲಾ, ದ್ವಾರ್ಕಿ

ಹಾಗೂ ವರ್ಷದ ಅತ್ಯುತ್ತಮ ಚಿತ್ರಗೀತೆಯನ್ನು ಜನರೇ ಆಯ್ಕೆಮಾಡಬೇಕು.
ಕರ್ನಾಟಕದ 15 ಜಿಲ್ಲೆಗಳಲ್ಲಿ ಸುವರ್ಣ ವಾಹಿನಿಯ ಮತದಾನ ರಥ ಸಂಚರಿಸಲಿದ್ದು ಗೃಹ ಸಚಿವ ಆರ್. ಅಶೋಕ್ ಶುಕ್ರವಾರ ಚಾಲನೆ ನೀಡಿದರು. ರಾಘವೇಂದ್ರ ರಾಜ್ ಕುಮಾರ್, ಸುವರ್ಣ ವಾಹಿನಿಯ ವ್ಯವಹಾರ ಮುಖ್ಯಸ್ತ ಚಂದ್ರಶೇಖರ್ ಹಾಗೂ ಕಾರ್ಯಕ್ರಮ ಮುಖ್ಯಸ್ತ ರಾಘವೇಂದ್ರ ಹೊಸೂರ್ ಉಪಸ್ಥಿತರಿದ್ದರು.
ಇವನ್ನೂ ಓದಿ