ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶಿವನಾಗುತ್ತಿರುವ ಶಿವಣ್ಣ (Shivaraj kumar | Om prakash rao | Shiva | Lakshmi)
PR
ನಟ ಶಿವರಾಜ್ ಕುಮಾರ್ ಇದೀಗ ಬೆಳ್ಳಿತೆರೆಯ ಮೇಲೆ 'ಶಿವ'ನಾಗುತ್ತಿದ್ದಾರೆ. ಅದಕ್ಕಾಗಿ ತಾಂಡವ ನೃತ್ಯ ಮಾಡಲು ಸಜ್ಜಾಗುತ್ತಿದ್ದಾರೆ. ಶಿವಣ್ಣ ತನ್ನ ಚಿತ್ರಗಳ ಸಂಖ್ಯೆಯನ್ನು ನೂರರ ಗಡಿ ದಾಟಿಸುತ್ತಿದ್ದಂತೆ ಅವಕಾಶಗಳ ಮೇಲೆ ಅವಕಾಶಗಳು ಅವರನ್ನು ಹುಡುಕಿಕೊಂಡು ಬರಲು ತೊಡಗಿವೆ.

'ಶಿವ' ಚಿತ್ರದಲ್ಲಿ ಶಿವರಾಜ್ ಕುಮಾರ್‌ಗೆ ನಾಯಕಿಯಾಗಿ ರಾಗಿಣಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಚಿತ್ರವನ್ನು ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಆರ್.ಎಸ್. ಪ್ರೊಡಕ್ಷನ್ ಲಾಂಛನದಡಿ ನಿರ್ಮಿಸುತ್ತಿದ್ದಾರೆ. ಓಂಪ್ರಕಾಶ್ ರಾವ್ ಚಿತ್ರದ ನಿರ್ದೇಶಕರು.

'ಶಿವ' ಚಿತ್ರದ ಮುಹೂರ್ತ ಜೂನ್ 10ರಂದು ಶುಕ್ರವಾರ ಜರುಗಲಿದೆ. ನಿರ್ದೇಶಕ ಓಂಪ್ರಕಾಶ್ ರಾವ್ ಅಂದರೆ ಅಲ್ಲಿ ಪ್ರೀತಿ, ಪ್ರೇಮ, ಆಕ್ಷನ್ ಇರುವುದರಲ್ಲಿ ಅನುಮಾನವೇ ಇಲ್ಲ.

'ಶಿವ' ದೊಂದಿಗೆ ಮತ್ತೊಂದು ಪ್ರೀತಿ ಹಾಗೂ ಆಕ್ಷನ್ ಚಿತ್ರ ಶಿವರಾಜ್ ಕುಮಾರ್ ಖಾತೆಗೆ ಸೇರ್ಪಡೆಗೊಳ್ಳುತ್ತಿದೆ.

'ಶಿವ' ಚಿತ್ರ ರೀಮೇಕಾ? ಅಥವಾ ಸ್ವಮೇಕಾ? ಈ ಪ್ರಶ್ನೆಗೆ ನಿರ್ದೇಶಕರೇ ಸೂಕ್ತ ಸಂದರ್ಭದಲ್ಲಿ ಉತ್ತರಿಸಲಿದ್ದಾರಂತೆ. 'ಲಕ್ಷ್ಮಿ' ಚಿತ್ರದ ಶೂಟಿಂಗ್‌ನಲ್ಲಿರುವ ಶಿವಣ್ಣ ತಾಂಡವ ನೃತ್ಯದ ಅಭ್ಯಾಸಕ್ಕೆ ಅಣಿಯಾಗಿದ್ದಾರಂತೆ.
ಇವನ್ನೂ ಓದಿ