ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ರೇಣುಕಾಚಾರ್ಯ ಸಿನಿಮಾ (Yadiyurappa | Renukacharya | Rajendra singh babu | Kannada Movies)
PR
ಬೂಕನ ಕೆರೆಯ ರೈತ ಕುಟುಂಬದಲ್ಲಿ ಹುಟ್ಟಿದ ಯಡಿಯೂರಪ್ಪ ವಿಧ್ಯಾರ್ಥಿ ಜೀವನದಿಂದ ಹಿಡಿದು ರೈತ ಹೋರಾಟ, ರಾಜಕೀಯ ಜೀವನದಲ್ಲಿ ಎಲ್ಲೂ ಸೋಲರಿಯಲೇ ಇಲ್ಲ. ಅವರು ನಿಜವಾಗಿಯೂ ಒಬ್ಬ ಹೀರೋ. ಕರ್ನಾಟಕದ ಆರು ಕೋಟಿ ಜನಸಂಖ್ಯೆ ಒಂದಲ್ಲಾ ಒಂದು ರೀತಿಯಲ್ಲಿ ಅವರ ಅಭಿವೃದ್ಧಿ ಯೋಜನೆಗಳ ಫಲಾನುಭವಿಗಳು. ನಾನವರ ಅಭಿಮಾನಿ. ಅವರು ನನ್ನಂಥಾ ಯುವ ರಾಜಕಾರಣಿಗಳಿಗೆ ಸ್ಪೂರ್ತಿ. ಹಾಗೇ ಮತ್ತೊಬ್ಬರಿಗೂ ಸ್ಪೂರ್ತಿದಾಯಕವಾಗಲಿ ಎಂಬ ಕಾರಣದಿಂದ ನನ್ನ ನೆಚ್ಚಿನ ನಾಯಕನ ಬಗ್ಗೆ ಚಿತ್ರ ತೆಗೆಯಲು ಹೊರಟಿದ್ದೇನೆ. ಇಲ್ಲಿ ಹಣ ಮಾಡುವ ಯಾವುದೇ ಉದ್ದೇಶ ಇಲ್ಲ ಎಂದು ಸಚಿವ ರೇಣುಕಾಚಾರ್ಯ ತಿಳಿಸಿದ್ದಾರೆ.

ಅಂದಹಾಗೆ ಯಡಿಯೂರಪ್ಪ ಒಬ್ಬ ನೈಜ ಹೀರೋ ಎಂಬುದನ್ನು ತೋರಿಸಲು ರೇಣುಕಾಚಾರ್ಯ ಆಯ್ಕೆಮಾಡಿಕೊಂಡಿದ್ದು ಯಶಸ್ವಿ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರನ್ನು.

ಚಿತ್ರವನ್ನು ಯಾವ ದೃಷ್ಠಿಕೋನದಲ್ಲಿ ತೆಗೆಯಬೇಕೆಂಬ ನಿರ್ಧಾರಕ್ಕೆ ಇನ್ನೂ ಬಂದಿಲ್ಲ, ಈ ನಿಟ್ಟಿನಲ್ಲಿ ಅಧ್ಯಯನ ಕಾರ್ಯ ನಡೆಯುತ್ತಿದೆ. ಅವರು ಬೆಳೆದು ಬಂದ ದಾರಿ, ವೈಯಕ್ತಿಕ ಜೀವನ ಎಲ್ಲವನ್ನೂ ಗಮನಿಸಿ, ಆ ನಂತರ ಯಾವ ಅಂಶವನ್ನು ಮುಖ್ಯ ವಿಷಯವನ್ನಾಗಿ ತೆಗೆದುಕೊಳ್ಳಬೇಕು ಎಂದು ಚಿಂತಿಸಲಾಗುವುದು ಎಂದಿದ್ದಾರೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು.

ಭಾರತದಲ್ಲಿ ಇದೇ ಪ್ರಥಮ.....
ಅಮೇರಿಕಾ, ರಷ್ಯಾದಂತಾ ಅಂತಾರಾಷ್ಟ್ರೀಯ ಚಿತ್ರರಂಗದಲ್ಲಿ ಹಿರಿಯ ರಾಜಕಾರಣಿಗಳ ಸಾಧನೆ ಕುರಿತು ಚಲನ ಚಿತ್ರ ತೆಗೆಯುವ ಪದ್ಧತಿ ಇದೆಯಾದರೂ ಭಾರತದಲ್ಲಿ ಇಂತಹ ಪ್ರಯತ್ನ ಹೊಸದು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಿರಿಯ ಮಹನೀಯರ ನೈಜ ಜೀವನ ಕುರಿತು ಚಲನ ಚಿತ್ರ ತೆಗೆಯಲಾಗಿದೆಯಾದರೂ, ಪ್ರತ್ಯೇಕವಾಗಿ ಒಬ್ಬ ರಾಜ್ಯದ ಮುಖ್ಯಮಂತ್ರಿಯ ಜೀವನ, ಸಾಧನೆ ಆಧರಿಸಿ ಚಲನ ಚಿತ್ರ ತೆಗೆಯುತ್ತಿರುವುದು ಇದೇ ಮೊದಲು.
ಇವನ್ನೂ ಓದಿ