ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗಿರೀಶ್ ಕಾಸರವಳ್ಳಿ ಚಿತ್ರೋತ್ಸವದಲ್ಲಿ 'ಹಸೀನಾ' ಪ್ರದರ್ಶನ (Girish Kasaravalli | Haseenan | Tara | kannada Movies)
PR
ಬೆಂಗಳೂರಿನ ಕೆ.ವಿ. ಸುಬ್ಬಣ್ಣ ಆಪ್ತ ರಂಗ ಮಂದಿರದಲ್ಲಿ ನಡೆಯುತ್ತಿರುವ 'ಗಿರೀಶ್ ಕಾಸರವಳ್ಳಿ ಚಿತ್ರೋತ್ಸವ'ದಲ್ಲಿ ಜೂನ್ 16 ಗುರುವಾರ ಸಂಜೆ ಪ್ರದರ್ಶನಗೊಳ್ಳಲಿರುವ ಚಿತ್ರ 'ಹಸೀನಾ'.

ಲೇಖಕಿ ಬಾನು ಮುಷ್ತಾಕ್ ಅವರ ಸಣ್ಣ ಕಥೆ 'ಹಸೀನಾ' ಆಧರಿಸಿ ಅದೇ ಹೆಸರಿನಲ್ಲಿ ಸಿನಿಮಾ ನಿರ್ಮಿಸಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದವರು ಹಿರಿಯ ನಟಿ ತಾರಾ.

ಈ ಚಿತ್ರದಲ್ಲಿ ಮನೆಯ ಬಾಗಿಲಿಗೆ ಹಾಕಿದ ತೆರೆಯನ್ನು ಹಿಡಿದು ಯಾವುದೋ ಆತಂಕದಲ್ಲಿ ನೋಡುತ್ತಿರುವ ಹಸೀನಾಳ ಪಾತ್ರವನ್ನು ತಾರಾ ಮನೋಜ್ಞವಾಗಿ ಅಭಿನಯಿಸಿದ್ದಾರೆ.

ಆ ಮೂಲಕ ಅತ್ಯುತ್ತಮ ನಟನೆಗಾಗಿ ಸ್ವರ್ಣ ಕಮಲ ರಾಷ್ಟ್ರೀಯ ಪ್ರಶಸ್ತಿ ಪಡೆದ ಎರಡನೆ ನಟಿ ಎಂಬ ಹೆಗ್ಗಳಿಕೆಗೂ ತಾರಾ ಪಾತ್ರರಾಗಿದ್ದಾರೆ.

ಈ ಚಿತ್ರಕ್ಕೆ ಅಭಿನಯ, ವಸ್ತ್ರ ವಿನ್ಯಾಸ, ಹಾಗೂ ಸಾಮಾಜಿಕ ಪರಿಣಾಮಕ್ಕಾಗಿ ಮೂರು ರಾಷ್ಟ್ರೀಯ ಪ್ರಶಸ್ತಿಗಳು ದೊರಕಿವೆ.

ಕಾಸರವಳ್ಳಿಯವರ ಬಹುತೇಕ ಚಿತ್ರಗಳಂತೆ ಈ ಚಿತ್ರಕ್ಕೂ ಎಸ್. ರಾಮಚಂದ್ರ ಐತಾಳ್ ಅವರದೇ ಛಾಯಾಗ್ರಹಣವಿದೆ. ಈ ವಿಭಿನ್ನ ಸಿನಿಮಾ ಪ್ರದರ್ಶನಕ್ಕೊಮ್ಮೆ ಹೋಗಿ ಬನ್ನಿ. ಸ್ಥಳ: ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರ, ನಂ. 151, 7ನೇ ಕ್ರಾಸ್, ವಸುಧಾ ಭವನದ ಎದುರು, ಟೀಚರ್ಸ್ ಕಾಲೊನಿ 1ನೇ ಹಂತ, ದಯಾನಂದ್ ಸಾಗರ್ ಕಾಲೇಜ್ ಹತ್ತಿರ, ಕುಮಾರಸ್ವಾಮಿ ಲೇಓಟ್, ಬೆಂಗಳೂರು. ಸಮಯ ಸಂಜೆ ಗಂಟೆ 6.30ಕ್ಕೆ.
ಇವನ್ನೂ ಓದಿ