ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಐದು ಅಪೂರ್ವ ಕಥೆಗಳ ಸಂಗಮ 'ಪಂಚಾಮೃತ' (Panchambrutha | T.N. Nagesh | Katha Sangama | Puttanna Kanagal)
EVENT
ನಿಮಗೆ 'ಕಥಾಸಂಗಮ' ಚಿತ್ರ ನೆನಪಿದೆಯಾ? ಪುಟ್ಟಣ್ಣ ಕಣಗಾಲರು ಮ‌ೂರು ಪ್ರತ್ಯೇಕ ಕಥೆಗಳನ್ನು ಆರಿಸಿಕೊಂಡು 'ಕಥಾಸಂಗಮ' ವಾಗಿ ಚಿತ್ರರಸಿಕರಿಗೆ ಉಣಬಡಿಸಿದ್ದು. ಈಗ ಅಂಥದ್ದೇ ಮತ್ತೊಂದು ಪ್ರಯತ್ನ ಕನ್ನಡದಲ್ಲಿ ನಡೆಯುತ್ತಿದ್ದು, ಟಿ.ಎನ್‌. ನಾಗೇಶ್‌ ಇದರ ಸೂತ್ರಧಾರರಾಗಿದ್ದಾರೆ. ಇದು 'ಪಂಚಾಮೃತ' ಎಂಬ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಹೊರಬಿದ್ದ ಸಂಗತಿ.

ಈ ಕುರಿತು ನಾಗೇಶ್‌ ಮಾತನಾಡುತ್ತಾ, ಮ‌ೂಲತಃ ಇದರಲ್ಲಿ ಐದು ಕಥೆಗಳನ್ನಷ್ಟೇ ಬಳಸಿಕೊಳ್ಳಲಾಗಿತ್ತು, ಆದರೆ ನಂತರದಲ್ಲಿ ಮತ್ತೊಂದು ರೋಚಕ ಕಥೆಯನ್ನೂ ಬಳಸಿಕೊಳ್ಳಬೇಕಾಗಿ ಬಂತು ಎಂದು ಮಾಧ್ಯಮ ಮಿತ್ರರಿಗೆ ಅವರು ತಿಳಿಸಿದರು. ಈ ಚಿತ್ರದಲ್ಲಿನ ಎಲ್ಲಾ ಕಲಾವಿದರೂ ತಮ್ಮ ಅತ್ಯುತ್ತಮ ಪಾತ್ರ ನಿರ್ವಹಣೆಯನ್ನು ದಾಖಲಿಸಿದ್ದಾರೆ. ಇದು ಪ್ರೇಕ್ಷಕರಿಗೆ ವಿಭಿನ್ನ ಅನುಭವವನ್ನು ನೀಡುವುದರಲ್ಲಿ ಸಂದೇಹವಿಲ್ಲ ಎಂಬುದು ನಾಗೇಶರ ಅಭಿಮತ.

ಧ್ವನಿಸುರುಳಿ ಬಿಡುಗಡೆಯ ಸಮಾರಂಭದಲ್ಲಿ ಘಟಾನುಘಟಿಗಳೇ ಸೇರಿದ್ದರು. ಮೇಲುಕೋಟೆಯ ಶಾಸಕ ಪುಟ್ಟರಾಜು, ಮಾಜಿ ಶಾಸಕ ಹಾಗೂ ಕರ್ನಾಟಕ ಕೈಮಗ್ಗ ನಿಗಮದ ಅಧ್ಯಕ್ಷ ಲಕ್ಷ್ಮೀನಾರಾಯಣ ಇವರಲ್ಲಿ ಪ್ರಮುಖರು.

ಶ್ರೀನಗರ ಕಿಟ್ಟಿ, ಪೂಜಾ ಗಾಂಧಿ, ರವಿಶಂಕರ್‌, ನೀತು, ರಘು ಮುಖರ್ಜಿ, ರಮ್ಯಾ ಬಾರ್ನಾ, ದಿಲೀಪ್‌ರಾಜ್‌, ದೇವರಾಜ್‌, ನೀನಾಸಂ ಅಚ್ಯುತ ಹೀಗೆ ಕಲಾವಿದರ ದಂಡೇ ಸೇರಿರುವ ಈ ಚಿತ್ರವನ್ನು ಮರಿಸ್ವಾಮಿ ನಿರ್ಮಿಸುತ್ತಿದ್ದು ಆಸ್ಲೆ-ಅಭಿಲಾಶ್‌ ಎಂಬ ಯುವ ಪ್ರತಿಭೆಗಳು ಹಾಡುಗಳಿಗೆ ಸಂಗೀತವನ್ನು ನೀಡಿದ್ದಾರೆ.

ಐದು ವಿಭಿನ್ನ ಕಥೆಗಳನ್ನು ನಾಗೇಶ್‌ ದೃಶ್ಯ ಮಾಧ್ಯಮಕ್ಕೆ ಹೇಗೆ ಒಗ್ಗಿಸಲಿದ್ದಾರೆ ಎಂಬುದು ಸದ್ಯಕ್ಕೆ ಕುತೂಹಲಕರ ಸಂಗತಿ. ಅಂತೆಯೇ ಕನ್ನಡ ಚಿತ್ರರಂಗವು ಇಂಥ ಹೊಸ ಪ್ರಯೋಗಗಳಿಗೆ ಒಗ್ಗಿಕೊಳ್ಳುತ್ತಿರುವುದು ಶ್ಲಾಘನೀಯ ಅಂಶ. 'ಪಂಚಾಮೃತ' ಈ ನಿಟ್ಟಿನಲ್ಲಿ ಪಥನಿರ್ಮಾಪಕನಾಗಲಿ ಎಂದು ಹಾರೈಸೋಣ.
ಇವನ್ನೂ ಓದಿ