ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ದುಬೈ ಬಾಬುವಿನಲ್ಲಿ ಉಪ್ಪಿಯ ವಿವಿಧ ಅವತಾರ (Dubai Babu preview)
ಸಿನಿಮಾ ಮುನ್ನೋಟ
Feedback Print Bookmark and Share
 
MOKSHENDRA
ಚಿತ್ರ: ದುಬೈ ಬಾಬು
ನಿರ್ದೇಶನ: ನಾಗಣ್ಣ
ನಿರ್ಮಾಣ: ಶೈಲೇಂದ್ರ ಬಾಬು
ತಾರಾಗಣ: ಉಪೇಂದ್ರ, ನಿಖಿತಾ, ಸಲೋನಿ, ಕುಮಾರ್ ಗೋವಿಂದ್ ಸಾಧುಕೋಕಿಲ

ಬುದ್ದಿವಂತನಾಗಿ ಮೇಲೆ ಬಂದ ಉಪೇಂದ್ರ ಈಗ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗ ವಿಶಿಷ್ಟ ಗೆಟಪ್‌ನಲ್ಲಿ ದರ್ಶನ ಕೊಡಲು ಸಿದ್ಧರಾಗಿದ್ದಾರೆ. ಅವರ ಅಭಿನಯದ ದುಬೈ ಬಾಬು ಚಿತ್ರ ಈ ವಾರ ತೆರೆ ಕಾಣುತ್ತಿದೆ.

ಚಿತ್ರವನ್ನು ಶೈಲೇಂದ್ರ ಬಾಬು ನಿರ್ಮಿಸಿದ್ದು, ನಾಗಣ್ಣ ನಿರ್ದೇಶಿಸಿದ್ದಾರೆ. ಈ ಹಿಂದೆ ಈ ಮೂವರು ಜೊತೆಯಾಗಿ ಗೌರಮ್ಮ, ಕುಟುಂಬದಂತಹ ಉತ್ತಮ ಚಿತ್ರಗಳನ್ನು ಕೊಟ್ಟಿರುವುದರಿಂದ ಸಹಜವಾಗಿಯೇ ಈ ಚಿತ್ರದ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದು ತೆಲುಗಿನ ದುಬೈ ಸೀನು ಚಿತ್ರದ ರೀಮೇಕಾಗಿದ್ದು, ಉಪೇಂದ್ರ ಇಲ್ಲಿ ನಾನಾ ಅವತಾರಗಳಲ್ಲಿ ಕಂಗೊಳಿಸಿದ್ದಾರೆ. ವಿಶಿಷ್ಟ ಗೆಟಪ್‌ಗಾಗಿ ಉಪ್ಪಿ ತಮ್ಮ ಗಡ್ಡ ಮೀಸೆಯನ್ನು ಸಂಪೂರ್ಣವಾಗಿ ಬೋಳಿಸಿದ್ದರು. ಈ ಚಿತ್ರದಲ್ಲಿ ಬಾರಿ ಸಮಯದ ನಂತರ ಕುಮಾರ್ ಗೋವಿಂದ್ ನಟಿಸಿದ್ದಾರೆ. ಇವರಿಗೆ ಉಪ್ಪಿಯ ಸ್ನೇಹಿತ ಪಾತ್ರವಂತೆ. ಚಿತ್ರಕ್ಕೆ ವಿ.ಶ್ರೀಧರ್ ಅವರು ಸಂಗೀತ ನೀಡಿದ್ದಾರೆ.

ವಂಶಿ ಚಿತ್ರದ ಮೂಲಕ ಬೆಳಕಿಗೆ ಬಂದ ವೈಯ್ಯಾರಿ ಬೆಡಗಿ ನಿಖಿತಾ ಇಲ್ಲಿ ದುಬೈ ಬಾಬುಗೆ ಜೊತೆಯಾಗಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ದುಬೈ ಬಾಬುವನ್ನು ಪ್ರೇಕ್ಷಕ ಪ್ರಭು ಯಾವ ರೀತಿ ಸ್ವೀಕರಿಸುತ್ತಾನೋ ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಉಪೇಂದ್ರ, ದುಬೈ ಬಾಬು, ಕನ್ನಡ ಸಿನಿಮಾ, ನಿಖಿತಾ