ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಜೊತೆಗಾರ ಬರುತ್ತಿದ್ದಾನೆ (kannada cinema | Ashwini ramprasad | Jotegara | Ramya | Prem)
ಸಿನಿಮಾ ಮುನ್ನೋಟ
Feedback Print Bookmark and Share
 
ಚಿತ್ರ: ಜೊತೆಗಾರ
ನಿರ್ದೇಶಕರು:ಸಿಂಗುಮಣಿ
ತಾರಾಗಣ: ಪ್ರೇಮ್, ರಮ್ಯ ಲಕ್ಷ್ಮಿ, ಆಶಿಶ್ ವಿದ್ಯಾರ್ಥಿ

ಅಂತೂ ಇಂತು ಜೊತೆಗಾರ ಚಿತ್ರಕ್ಕೆ ಬಿಡುಗಡೆ ಭಾಗ್ಯ ದೊರೆತಿದೆ. ಹದಿನೈದು ದಿನಗಳ ಹಿಂದೆಯೇ ಬಿಡುಗಡೆಯಾಗಬೇಕಿದ್ದ ಈ ಚಿತ್ರ, ಥಿಯೇಟರ್ ಸಮಸ್ಯೆಯಿಂದ ಬಿಡುಗಡೆ ಮುಂದೂಡಲಾಗಿತ್ತು. ಈ ವಾರ ತೆರೆ ಕಾಣುವುದು ಖಚಿತವಾಗಿದೆ. ಪ್ರೀತಿ ಆಕೆ ಭೂಮಿ ಮೇಲಿದೆ ಚಿತ್ರದ ನಂತರ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್‌ರವರ ಮತ್ತೊಂದು ಅದ್ದೂರಿ ಚಿತ್ರ ಇದಾಗಿದೆ. ಪ್ರೇಮ್ ನಿರ್ದೇಶನದ ಚಿತ್ರ ಪ್ರೀತಿ ಆಕೆ ಭೂಮಿ ಮೇಲಿದೆ ಅಂದುಕೊಂಡಷ್ಟು ಯಶಸ್ಸನ್ನು ಕಾಣಲಿಲ್ಲ.

ಜೊತೆಗಾರ ಚಿತ್ರ ಕೂಡ ಬಾರಿ ಅದ್ದೂರಿಯಾಗಿ ಮಾಡಿದ್ದಾರಂತೆ. ಈ ಚಿತ್ರದಲ್ಲಿ ನಾಯಕನಾಗಿ ಪ್ರೇಮ್ ಹಾಗೂ ನಾಯಕಿಯಾಗಿ ರಮ್ಯ ಅಭಿನಯಿಸುತ್ತಿದ್ದಾರೆ. ಪ್ರೀತಿ ಆಕೆ ಭೂಮಿ ಮೇಲಿದೆ ಚಿತ್ರದಲ್ಲಿ 5 ಕೋಟಿ ಹಣ ಕಳೆದುಕೊಂಡ ಅಶ್ವಿನಿ ರಾಮ್ ಪ್ರಸಾದ್ ಮತ್ತೆ ಜೊತೆಗಾರ ಚಿತ್ರಕ್ಕೆ ಹಣ ಸುರಿದಿದ್ದಾರಂತೆ.

ಈ ಚಿತ್ರದ ನಿರ್ದೇಶನವನ್ನು ತೆಲುಗಿನ ನಿರ್ದೇಶಕರಾದ ಸಿಂಗುಮಣಿ ಮಾಡಿದ್ದಾರೆ. ನಂಜುಂಡ ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಜಯಂತ್ ಕಾಯ್ಕಿಣಿ, ಕವಿರಾಜ್ ಹಾಗೂ ಕನ್ನಡ ಶಿವು ಹಾಡುಗಳನ್ನು ಬರೆದಿದ್ದಾರೆ.. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ ಅಂತೆ. ಸೋನು ನಿಗಮ್, ಉದಿತ್ ನಾರಾಯಣ್, ಶ್ರೇಯಾ ಘೋಶಾಲ್ ಮುಂತಾದವರು ಹಾಡಿದ್ದಾರೆ.

ಚಿತ್ರದಲ್ಲಿ ರಮ್ಯ ಅವರದ್ದು ಒಳ್ಳೆ ಮಗಳ ಪಾತ್ರ. ಅವಳಿಗೆ ಅಹಂಕಾರವಿರುವುದಿಲ್ಲ. ಎಲ್ಲರ ಜೊತೆ ತರಲೆ ಮಾಡಿಕೊಂಡು ಇರುತ್ತಾರೆ. ಪಾತ್ರದಲ್ಲಿ ಹಾಸ್ಯ, ರೊಮ್ಯಾನ್ಸ್ ಎಲ್ಲವೂ ಚಿತ್ರದಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ ಸಿನೆಮಾ, ಜೊತೆಗಾರ, ಅಶ್ವಿನಿ ರಾಮ್ ಪ್ರಸಾದ್, ರಮ್ಯ, ಪ್ರೇಮ್