ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಒಲವೇ ಜೀವನ ಲೆಕ್ಕಾಚಾರ (Kitti | Olave Jeevana Lekkachara | Radhika Pandit | Nagathihalli Chandrashekhar)
ಸಿನಿಮಾ ಮುನ್ನೋಟ
Feedback Print Bookmark and Share
 
MOKSHENDRA
ಚಿತ್ರ: ಒಲವೇ ಜೀವನ ಲೆಕ್ಕಾಚಾರ
ನಿರ್ದೇಶಕರು: ನಾಗತಿಹಳ್ಳಿ ಚಂದ್ರಶೇಖರ್
ತಾರಾಬಳಗ: ಶ್ರೀನಗರ ಕಿಟ್ಟಿ, ರಾಧಿಕಾ ಪಂಡಿತ್

ಈ ವಾರ ಎರಡು ಚಿತ್ರಗಳು ಬಿಡುಗಡೆಯಾಗುತ್ತಿವೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಮಾಡಿ ಶ್ರೀನಗರ ಕಿಟ್ಟಿ ನಾಯಕನಾಗಿ ನಟಿಸಿರುವ ಒಲವೇ ಜೀವನ ಲೆಕ್ಕಾಚಾರ ಮತ್ತು ವಿಜಯ್ ರಾಘವೇಂದ್ರ ಅಭಿನಯದ ಕಾರಂಜಿ. ಒಲವೇ ಜೀವನ ಲೆಕ್ಕಚಾರ ಹೋದ ತಿಂಗಳೇ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಬಿಡುಗಡೆಯನ್ನು ಮುಂದೂಡಲಾಗಿತ್ತು.

ಈ ಚಿತ್ರ ಕಾದಂಬರಿ ಆಧಾರಿತವಾಗಿದೆ. ಚಿತ್ರದಲ್ಲಿ ನಾಯಕ ಶ್ರೀನಗರ ಕಿಟ್ಟಿ ಜೊತೆಗೆ ರಾಧಿಕಾ ಪಂಡಿತ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಒಂದು ದಾಸರ ಪದ ಬಳಸಿಕೊಳ್ಳಲಾಗಿದೆ. ಹಾಡುಗಳಿಗೆ ಖ್ಯಾತ ಸಂಗೀತ ನಿರ್ದೇಶಕರಾದ ಮನೋಮೂರ್ತಿ ಸಂಗೀತ ನೀಡಿದ್ದಾರೆ.

ಜೀವನ ಅನ್ನೋದು ಲೆಕ್ಕಾಚಾರ, ಮುಖ್ಯವಾಗಿ ಅದು ಹಳಿ ತಪ್ಪಿದರೆ ಎಡವಟ್ಟಾಗಲಿದೆ ಎನ್ನುವುದು ಚಿತ್ರದ ಹುರುಳಾಗಿದೆ. ಬಹು ದಿನಗಳ ನಂತರ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಚಿತ್ರ ಬಿಡುಗಡೆಯಾಗುತ್ತಿದೆ. ತಮ್ಮ ಲೆಕ್ಕಾಚಾರ ಏನಾಗುತ್ತದೆ ಎಂಬುದು ಇನ್ನೇನು ಗೊತ್ತಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಒಲವೇ ಜೀವನ ಲೆಕ್ಕಾಚಾರ, ನಾಗತಿಹಳ್ಳಿ ಚಂದ್ರಶೇಖರ್, ರಾಧಿಕಾ ಪಂಡಿತ್, ಕಿಟ್ಟಿ