ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಈ ವಾರ ಕಾರಂಜಿ ಚಿಮ್ಮಲಿದೆ! (Shreedhar | Gowri Karnik | Vijay Raghavendra | Karanji)
ಸಿನಿಮಾ ಮುನ್ನೋಟ
Feedback Print Bookmark and Share
 
MOKSHENDRA
ಚಿತ್ರ: ಕಾರಂಜಿ
ನಿರ್ದೇಶಕರು: ಶ್ರೀಧರ್
ತಾರಾಬಳಗ: ವಿಜಯ್ ರಾಘವೇಂದ್ರ, ಗೌರಿ ಕಾರ್ನಿಕ್

ಶ್ರೀಧರ್ ನಿರ್ದೇಶನ ಮಾಡಿರುವ ಕಾರಂಜಿ ಈ ವಾರ ಚಿತ್ರ ತೆರೆಕಾಣುತ್ತಿದೆ. ಚಿತ್ರದಲ್ಲಿ ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿದರೆ ಬಾಲಿವುಡ್ ನಟಿ ಗೌರಿ ಕಾರ್ನಿಕ್ ನಾಯಕಿಯಾಗಿ ನಟಿಸಿದ್ದಾರೆ.

ಇದೊಂದು ಸಂಗೀತ ಆಧಾರಿತ ಚಿತ್ರವಾಗಿದೆ. ಚಿತ್ರದಲ್ಲಿ ವಿಜಯ ರಾಘವೇಂದ್ರ ಮೂಸಿಕ್ ಬ್ಯಾಂಡ‌್‌ನಲ್ಲಿ ಗಿಟಾರ್ ನುಡಿಸುತ್ತಿರುತ್ತಾನೆ. ಚಿತ್ರದಲ್ಲಿ ನಾಯಕಿ ಕೂಡ ಒಬ್ಬ ದೊಡ್ಡ ಗಾಯಕಿಯಾಗಿರುತ್ತಾಳೆ. ಇವರಿಬ್ಬರ ನಡುವೆ ಪ್ರೇಮಾಂಕುರವಾಗುತ್ತದೆ. ಚಿತ್ರ ಶುರುವಾಗುವುದು ಹೀಗಂತೆ. ಇದೊಂದು ಪ್ರೇಮ ಕಥೆ. ಚಿತ್ರದಲ್ಲಿ ಕರ್ನಾಟಕದ ವಿವಿಧ ಸೊಗಡಿನ ಸಾಂಪ್ರದಾಯಿಕ ಸಂಗೀತವನ್ನು ಇಟ್ಟುಕೊಂಡು ಕಥೆ ಮಾಡಲಾಗಿದೆ.

ಎನ್.ಎಂ. ಸುರೇಶ್ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ವೀರ ಸಮರ್ಥ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿವೆ. ಒಂದು ಡಿಫರೆಂಟ್ ಕಾನ್ಸೆಪ್ಟ್ ಇಟ್ಟುಕೊಂಡು ಚಿತ್ರ ಮಾಡಿದ್ದೇವೆ ಅಂತಾರೆ ಚಿತ್ರದ ನಿರ್ದೇಶಕ ಶ್ರೀಧರ್. ಆದರೆ ಪ್ರೇಕ್ಷಕ ಮಹಾಪ್ರಭು ಹೇಗೆ ಸ್ವೀಕರಿಸುತ್ತಾನೆ ಅನ್ನೋದನ್ನು ಕಾದು ನೋಡಬೇಕಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಾರಂಜಿ, ವಿಜಯ್ ರಾಘವೇಂದ್ರ, ಗೌರಿ ಕಾರ್ನಿಕ್, ಶ್ರೀಧರ್