ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಈ ವಾರ ಗಣೇಶ್- ಪ್ರಿಯಾಮಣಿ ಜೊತೆ ರಮ್ಯಾ-ಪ್ರೇಮ್ ಫೈಟು! (Jothegara | Ganesh | Priyamani | Ramya | Prem | Eno Onthara)
ಸಿನಿಮಾ ಮುನ್ನೋಟ
Bookmark and Share Feedback Print
 
WD
ಕಳೆದ ಒಂದೆರಡು ವಾರದಿಂದ ಬಹುನಿರೀಕ್ಷೆಯ ಭರ್ಜರಿ ಚಿತ್ರಗಳೇ ಒಂದಾದ ಮೇಲೊಂದರಂತೆ ತೆರೆ ಕಾಣುತ್ತಿವೆ. ಪಂಚರಂಗಿ, ಕರಿಚಿರತೆಯ ನಂತರ ಈ ವಾರ ಇನ್ನೂ ಮೂರು ಭರ್ಜರಿ ನಿರೀಕ್ಷೆಯ ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ. ಅವುಗಳ ಪೈಕಿ ಬಹು ದಿನಗಳಿಂದ ಬಿಡುಗಡೆಯಾಗದೆ ಉಳಿದಿದ್ದ ರಮ್ಯಾ ಪ್ರೇಮ್ ಯಶಸ್ವೀ

ಈ ವಾರ ರಮ್ಯಾ ಹಾಗೂ ನೆನಪಿರಲಿ ಪ್ರೇಮ್ ಅಭಿನಯದ 'ಜೊತೆಗಾರ', ಗಣೇಶ್ ಅಭಿನಯದ 'ಏನೋ ಒಂಥರಾ' ಹಾಗೂ ಪಯಣ ಖ್ಯಾತಿಯ ರವಿಶಂಕರ್ ಅಭಿನಯದ 'ನಂಜನಗೂಡು ನಂಜುಂಡ' ಚಿತ್ರಗಳು ತೆರೆಗೆ ಬರುತ್ತಿವೆ. ಇವೆಲ್ಲವೂ ಸ್ಯಾಂಡಲ್‌ವುಡ್‌ನ ಬಹು ನೀರೀಕ್ಷೆ ಒಳಗೊಂಡಿರುವ ಚಿತ್ರವಾಗಿದ್ದು, ಇವುಗಳ ಪೈಕಿ ಎರಡು ಚಿತ್ರಗಳು ರಿಮೇಕ್!

ಜೊತೆಗಾರ ಚಿತ್ರ ರಮ್ಯಾ ಹಾಗೂ ಪ್ರೇಮ್ ಯಶಸ್ವೀ ಜೋಡಿಯ ಭರವಸೆಯ ಚಿತ್ರ. ಈಗಾಗಲೇ ಎರಡನೇ ಮದುವೆಯಲ್ಲಿ ಗೆದ್ದಿರುವ ಪ್ರೇಮ್‌ಗೆ ಇದು ಅಗ್ನಿ ಪರೀಕ್ಷೆ. ರಮ್ಯಾರ ಪಾಲಿಗೂ ಅಷ್ಟೆ. ಬಹಳ ದಿನಗಳ ನಂತರ ಬಿಡುಗಡೆ ಕಾಣುತ್ತಿರುವ ಚಿತ್ರವಾದ್ದರಿಂದ ಕುತೂಹಲ ಸಹಜವಾಗಿಯೇ ಇದೆ.

ಏನೋ ಒಂಥರಾ ಗಣೇಶ್ ಹಾಗೂ ಪ್ರಿಯಾಮಣಿ ಅಭಿನಯದ ಚಿತ್ರ. ನಿರೀಕ್ಷೆಗಿಂತ ಬಹು ತಡವಾಗಿ ತೆರೆಗೆ ಬರುತ್ತಿದೆ. ರಾಮ್ ಚಿತ್ರದಲ್ಲಿ ಮೆಚ್ಚುಗೆ ಗಳಿಸಿದ್ದ ಪ್ರಿಯಾಮಣಿ ಈ ಚಿತ್ರದ ಮೂಲಕ ನಿರೀಕ್ಷೆಯ ಅಲೆಯನ್ನೇ ಸೃಷ್ಟಿಸಿದ್ದಾರೆ ಎಂದರೆ ತಪ್ಪಲ್ಲ. ಮುಸ್ಸಂಜೆ ಮಹೇಶ್ ನಿರ್ದೇಶನವೂ ಈ ಚಿತ್ರದ ಇನ್ನಷ್ಟು ನಿರೀಕ್ಷೆಗೆ ಕಾರಣ. ಅಂದಹಾಗೆ, ಇದು ತಮಿಳಿನ ಖುಶಿ ಚಿತ್ರದ ರಿಮೇಕ್.

ಪಯಣ ಚಿತ್ರದ ನಂತರ ರವಿಶಂಕರ್ ಅಭಿನಯಿಸುತ್ತಿರುವ ಇನ್ನೊಂದು ನಗೆಭರಿತ ಚಿತ್ರ ನಂಜನಗೂಡು ನಂಜುಂಡ. ಅದೂ ಈ ವಾರ ತೆರೆಗೆ ಬರುತ್ತಿದೆ. ಮಲಯಾಳಿ ಬೆಡಗಿ ಹಂಸಿಣಿ ಈ ಚಿತ್ರದ ನಾಯಕಿ. ಸುಂದರ ಪತ್ನಿಯನ್ನು ವಿವಾಹವಾಗಿ ಪತಿ ಪಡಬಾರದ ಪಾಡು ಅನುಭವಿಸುವುದೇ ಚಿತ್ರದ ಹೈಲೈಟ್. ಇದೂ ಸಹ ತಮಿಳು ಚಿತ್ರವೊಂದರ ರಿಮೇಕ್ ಅನ್ನುವುದು ವಿಶೇಷ.

'ಏನೋ ಒಂಥರಾ' ಹಾಗೂ 'ನಂಜನಗೂಡು ನಂಜುಂಡ' ಚಿತ್ರದ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೊತೆಗಾರ, ಗಣೇಶ್, ಪ್ರಿಯಾಮಣಿ, ರಮ್ಯಾ ಪ್ರೇಮ್, ಏನೋ ಒಂಥರಾ