ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಈ ವಾರ ಸುದೀಪ್- ರಮ್ಯಾ ವರ್ಸಸ್ ಪುನೀತ್- ಭಾವನಾ (Puneeh | Bhavana | Ramya | Sudeep | Kichcha Huchcha | Soori, Jackie)
ಸಿನಿಮಾ ಮುನ್ನೋಟ
Bookmark and Share Feedback Print
 
PR
ಕಳೆದ ವಾರ ಅಂತಹ ಹೇಳಿಕೊಳ್ಳುವಂಥ ಚಿತ್ರಗಳೇನೂ ಬಿಡುಗಡೆಯಾಗದ ಕಾರಣ ಮುಂದಿನ ವಾರ ಯಾವ ಚಿತ್ರ ಎಂದು ಕಾತರದಲ್ಲಿರುವ ಕನ್ನಡ ಚಿತ್ರಾಭಿಮಾನಿಗಳಿಗೆ ಈ ವಾರ ಸುಗ್ಗಿಯಿದೆ. ಅವು ಇನ್ಯಾವುವವೂ ಅಲ್ಲ. ಸುದೀಪ್ ರಮ್ಯಾ ಅಭಿನಯದ ಕಿಚ್ಚ ಹುಚ್ಚ ಹಾಗೂ ಪುನೀತ್- ಭಾವನಾ ಮೆನನ್ ಜೋಡಿಯ ದುನಿಯಾ ಖ್ಯಾತಿಯ ಸೂರಿ ನಿರ್ದೇಶನದ ಜಾಕಿ! ಹೌದ. ಇವೆರಡೂ ಈ ವಾರ ಬಿಡುಗಡೆ ಕಾಣುತ್ತಿವೆ.

ವಿಪರ್ಯಾಸ ಅಂದರೆ, ಒಂದು ವಾರ ಕಾದ ಪ್ರೇಕ್ಷಕರಿಗೆ ಯಾವ ಚಿತ್ರ ನೋಡುವುದು ಯಾವ ಚಿತ್ರ ಬಿಡುವುದು ಎನ್ನುವ ಗೊಂದಲ ಅಕ್ಷರಶಃ ಎದುರಾಗಲಿದೆ. ಬಹುದಿನಗಳಿಂದ ಬರುತ್ತದೆ ಎಂದು ನೀರೀಕ್ಷಿಸುತ್ತಿದ್ದ ಕಿಚ್ಚ ಹುಚ್ಚ ಕೊನೆಗೂ ಬಿಡುಗಡೆ ಆಗುತ್ತಿರುವ ಸಂತಸ ಒಂದೆಡೆಯಾದರೆ, ಇನ್ನೊಂದೆಡೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿ ಮಾಡಿ ಡಾ. ರಾಜ್‌ಕುಮಾರ್ ಹೋಂ ಬ್ಯಾನರ್ ಅಡಿ ಹೊರ ಬರುತ್ತಿರುವ ಇನ್ನೊಂದು ಚಿತ್ರ ಜಾಕಿ. ಇವೆರಡರ ನಡುವೆ ಈಗ ಸ್ಪರ್ಧೆ ಏರ್ಪಟ್ಟಿದೆ.

ವಿಶೇಷ ಅಂದರೆ, ಇವೆರಡರಲ್ಲಿ ಯಾವ ಚಿತ್ರ ಸಂತೋಷ್ ಚಿತ್ರ ಮಂದಿರದಲ್ಲಿ ಬಿಡುಗಡೆ ಆಗುತ್ತವೆ ಎನ್ನುವುದು ಮೊದಲ ಗೊಂದಲ. ಎರಡೂ ಚಿತ್ರದ ಮೂಲಗಳೂ ತಮ್ಮ ಚಿತ್ರ ಸಂತೋಷ್ ಚಿತ್ರ ಮಂದಿರದಲ್ಲಿ ಬಿಡುಗಡೆ ಆಗಲಿದೆ ಎಂದು ಘೋಷಿಸಿವೆ. ಜಾಕಿ ಚಿತ್ರತಂಡವಂತೂ ಸಂತೋಷ್ ಚಿತ್ರಮಂದಿರವನ್ನು ನಾವು ಆಯ್ದುಕೊಂಡಿದ್ದೇವೆ ಎಂದಿದೆ. ನಿರೀಕ್ಷೆ ಸಹಜವಾಗಿಯೇ ಜೋರಾಗಿರುವಾಗ ಪ್ರೇಕ್ಷಕ ಪ್ರಭು ಉತ್ತಮ ಚಿತ್ರ ನಿರೀಕ್ಷಿಸುವುದು ತಪ್ಪಲ್ಲ. ಹಾಗಿರುವ ಚಿತ್ರ ತನ್ನ ಭರವಸೆಯನ್ನು ಉಲಿಸಿಕೊಂಡರೆ ಸಾಕು ಎಂಬುದೇ ಆಶಯ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪುನೀತ್, ಭಾವನಾ, ಸುದೀಪ್, ರಮ್ಯಾ, ಕಿಚ್ಚ ಹುಚ್ಚ, ಸೂರಿ, ಜಾಕಿ