ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಈ ವಾರ ಚಿರಂಜೀವಿ ಸರ್ಜಾ 'ಚಿರು', 'ಆರ್ಭಟ' ತೆರೆಗೆ (Chirru | Arbhata | Chiranjeevi Sarja | Roopesh)
ಸಿನಿಮಾ ಮುನ್ನೋಟ
Bookmark and Share Feedback Print
 
MOKSHA
ಇದೇ ಶುಕ್ರವಾರ (ನವೆಂಬರ್ 19) ಚಿರಂಜೀವಿ ಸರ್ಜಾ ನಾಯಕರಾಗಿರುವ 'ಚಿರು' ಮತ್ತು ರೂಪೇಶ್ ನಾಯಕರಾಗಿರುವ 'ಆರ್ಭಟ' ಚಿತ್ರಗಳು ತೆರೆ ಕಾಣುತ್ತಿವೆ.

ಕೃತಿ ಕರಬಂಧ ನಾಯಕಿಯಾಗಿರುವ 'ಚಿರು' ಒಂದು ಸಂಗೀತಮಯ ಚಿತ್ರ ಎಂದು ನಿರ್ದೇಶಕ ಮಹೇಶ್ ಬಾಬು ಹೇಳಿಕೊಂಡಿದ್ದಾರೆ. ಖಂಡಿತಾ ಈ ಬಾರಿ ಪ್ರೇಕ್ಷಕರಿಗೆ ಮೋಸ ಮಾಡುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.

ಮುಸ್ಸಂಜೆ ಮಾತು ಸುರೇಶ್ ಜೈನ್ ಈ ಚಿತ್ರಕ್ಕೆ ಹಣ ಹಾಕಿರುವವರು. ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿರುವುದರಿಂದ ಚಿತ್ರ ಗೆಲ್ಲುತ್ತದೆ ಎನ್ನುವ ಭರವಸೆ ಅವರದ್ದು.

'ಆರ್ಭಟ' ಕಳೆದ ಹಲವು ಸಮಯದಿಂದ ಡಬ್ಬಾದಲ್ಲಿ ಕೊಳೆಯುತ್ತಿದ್ದ ಚಿತ್ರ. ಎಲ್. ವಿನೋದ್ ಕುಮಾರ್ ನಿರ್ದೇಶನವಿರುವ ಈ ಚಿತ್ರದಲ್ಲಿ ರೂಪೇಶ್ ಎಂಬ ಯುವ ನಟ ನಾಯಕನಾಗಿದ್ದರೆ, ಸೋನಿಯಾ, ಸಂಜಿತಾ, ಕೋಟೆ ಪ್ರಭಾಕರ್, ಅರ್ಜುನ್, ಸುಹಾಸ್, ಪಂಕಜ ಮುಂತಾದವರ ತಾರಾಗಣವಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಿರು, ಆರ್ಭಟ, ಚಿರಂಜೀವಿ ಸರ್ಜಾ, ರೂಪೇಶ್, ಮಹೇಶ್ ಬಾಬು