ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ರವಿಮಾಮನ 'ನಾರಿಯ ಸೀರೆ ಕದ್ದ' ಈ ವಾರ ತೆರೆಗೆ (Ravichandran | Crazy Star | Naariya Seere Kadda | Nikitha Thukral)
ಸಿನಿಮಾ ಮುನ್ನೋಟ
Bookmark and Share Feedback Print
 
PR
ಕಳೆದ ಎರಡು ವರ್ಷಗಳಲ್ಲಿ ನಿರಂತರ ಫ್ಲಾಪ್‌ಗಳನ್ನೇ ಕಂಡಿರುವ ಕ್ರೇಜಿ ಸ್ಟಾರ್, ಕನ್ನಡದ ಕನಸುಗಾರ ರವಿಚಂದ್ರನ್ - ಹಾಟ್ ಬೆಡಗಿ ನಿಖಿತಾ ಅಭಿನಯದ 'ನಾರಿಯ ಸೀರೆ ಕದ್ದ' ಚಿತ್ರ ಇದೇ ವಾರ (ನವೆಂಬರ್ 26) ಬಿಡುಗಡೆಯಾಗುತ್ತಿದೆ.

ಜನಪ್ರಿಯ ನಿರ್ದೇಶಕರಾದ ಸಿಂಗೀತಂ ಶ್ರೀನಿವಾಸ ರಾವ್ ಮತ್ತು ಎಂ.ಎಸ್. ರಾಜಶೇಖರ್ ಅವರಿಗೆ ಸಹಾಯಕರಾಗಿ ಕೆಲಸ ಮಾಡಿ ಅನುಭವ ಇರುವ ಅಣ್ಣಯ್ಯ ಈ ಚಿತ್ರದ ನಿರ್ದೇಶಕರು. ಚಿತ್ರದ ಹೆಸರೇ ಹೇಳುವಂತೆ ಇದು ಸ್ತ್ರೀ ಮೋಹಕನೊಬ್ಬನ ಕಥೆಯುಳ್ಳ ಸಿನಿಮಾ. ರವಿಚಂದ್ರನ್ ಅವರನ್ನು ಗಮನದಲ್ಲಿಟ್ಟುಕೊಂಡು ನಟ-ನಿರ್ದೇಶಕ ಮೋಹನ್ ಕಥೆ ಬರೆದಿದ್ದಾರೆ.

ಚಿತ್ರದಲ್ಲಿ ಸಾಕಷ್ಟು ಹಾಸ್ಯಪ್ರಸಂಗಗಳಿವೆ. ರೊಮ್ಯಾಂಟಿಕ್ ದೃಶ್ಯಗಳಿವೆ. ಪ್ರೇಕ್ಷಕರನ್ನು ಖಂಡಿತಾ ಇದು ಹಿಡಿದಿಟ್ಟುಕೊಳ್ಳಲಿದೆ ಎನ್ನುವುದು ನಿರ್ದೇಶಕರ ಭರವಸೆ.

ನಾಯಕಿ ನಿಖಿತಾ ಪಾತ್ರದ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ರವಿಮಾಮನ ಜತೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡಿರುವ ಕೆಲವು ಹಾಡುಗಳ ದೃಶ್ಯಗಳನ್ನು ಟಿವಿ ಚಾನೆಲ್‌ಗಳೂ ತೋರಿಸಿವೆ.

ಚಿತ್ರಕ್ಕೆ ಸ್ವತಃ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಸುದೀರ್ಘ ಸಮಯದ ನಂತರ ಮತ್ತೆ ಅವರು ಕೀಬೋರ್ಡ್ ಮೇಲೆ ಕೈಯಾಡಿಸಿದ್ದಾರೆ. ಒಂದು ಹಾಡು ಕೂಡ ಬರೆದಿದ್ದಾರೆ. ಆ ಹಾಡಿಗೆ ಅವರೇ ನೃತ್ಯ ನಿರ್ದೇಶನವನ್ನು ಮಾಡಿರುವುದು ವಿಶೇಷ.

'ನಾರಿಯ ಸೀರೆ ಕದ್ದ'ದಲ್ಲಿನ ಮತ್ತೊಂದು ಆಕರ್ಷಣೆ ನವ ನಟ-ನಟಿಯರು ಕಾಣಿಸಿಕೊಂಡಿರುವುದು. ಹರ್ಷಿಕಾ ಪೂಣಚ್ಚ, ನವೀನ್ ಕೃಷ್ಣ, ಶುಭಾ ಪೂಂಜಾ ಮತ್ತು ದತ್ತಣ್ಣ ಚಿತ್ರದಲ್ಲಿದ್ದಾರೆ.

ಡಿ.ಬಿ. ಕುಮಾರಸ್ವಾಮಿ ನಿರ್ಮಿಸಿರುವ ಚಿತ್ರವನ್ನು 45 ದಿನಗಳ ಅವಧಿಯಲ್ಲಿ ಕರ್ನಾಟಕದ ವಿವಿಧೆಡೆ ಚಿತ್ರೀಕರಣ ಮಾಡಲಾಗಿತ್ತು. ಇದನ್ನು ರಾಜ್ಯದಾದ್ಯಂತ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರವಿಚಂದ್ರನ್, ಕ್ರೇಜಿ ಸ್ಟಾರ್, ನಾರಿಯ ಸೀರೆ ಕದ್ದ, ನಿಖಿತಾ