ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಡಯಾನಾ 'ಮನಸಿನ ಮಾತು' ಶೀಘ್ರದಲ್ಲೇ ನಿಮ್ಮ ಮುಂದೆ (Diana | Manasina Maatu | Ajay | Aindrita Ray)
ಸಿನಿಮಾ ಮುನ್ನೋಟ
Bookmark and Share Feedback Print
 
ಕವಿ ಕ್ರಿಯೇಟರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಡಯಾನ' ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದೆ. ಸದ್ಯದಲ್ಲೇ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಲಿದ್ದು ಮುಂದಿನ ತಿಂಗಳು ತೆರೆಗೆ ಬರಲಿದೆ ಎಂದು ನಿರ್ದೇಶಕ ಕವಿ ರಾಜೇಶ್ ತಿಳಿಸಿದ್ದಾರೆ.

ಒಲಿಂಪಿಕ್ ಕ್ರೀಡಾಕೂಟದ ಕಥೆ ಆಧರಿಸಿದ 'ಡಯಾನ' ಚಿತ್ರಕ್ಕೆ ಕವಿ ರಾಜೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಎ.ಟಿ. ರವೀಶ್ ಸಂಗೀತ, ಎಂ.ಆರ್. ಚೌಹಾಣ್ ಛಾಯಾಗ್ರಹಣವಿದೆ. ನಿರ್ಮಾಣ ನಿರ್ವಹಣೆ ಹೊಣೆ ಥಾಮಸ್. ತಾರಾ ಬಳಗದಲ್ಲಿ ಧ್ರುವ, ಸಂಗೀತಾ ಶೆಟ್ಟಿ, ಸನಾತನಿ, ಪ್ರಮೀಳಾ ಜೋಷಾಯ್, ಡಾ. ಶರ್ಮ, ಚಿತ್ರಾ ಶೆಣೈ, ಡಿಂಗ್ರಿ ನಾಗರಾಜ್ ಮುಂತಾದವರಿದ್ದಾರೆ.

'ಮನಸಿನ ಮಾತು' ಕೂಡ ಶೀಘ್ರವಾಗಿ ತೆರೆಗೆ ಬರುವ ಸೂಚನೆ ನೀಡಿದೆ.

ಮಾನಸ ಚಿತ್ರ ಲಾಂಛನದಲ್ಲಿ ಡಿ.ಕೆ. ರಾಮಕೃಷ್ಣ ನಿರ್ಮಿಸಿರುವ ‘ಮನಸಿನ ಮಾತು’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ‘ಯು’ ಪ್ರಮಾಣ ಪತ್ರವನ್ನು ನೀಡಿದೆ. ಚಿತ್ರ ಡಿಸಂಬರಿನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಅಜಯ್ ಹಾಗೂ ಐಂದ್ರಿತಾ ರೇ ನಾಯಕ-ನಾಯಕಿಯರಾಗಿ ಅಭಿನಯಿಸಿರುವ ಈ ಚಿತ್ರದ ಚಿತ್ರೀಕರಣ ಕುಲುಮನಾಲಿ ಸೇರಿದಂತೆ ಭಾರತದ ಇತರ ರಮಣೀಯ ತಾಣಗಳಲ್ಲಿ ನಡೆದಿದೆ.

ಅನಂತರಾಜು ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಸಿ.ರಾಜಶೇಖರ್ ಸಹ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಸಾಧುಕೋಕಿಲಾ ಅವರ ಸಂಗೀತವಿದೆ. ಎಂ.ಆರ್. ಸೀನು ಛಾಯಾಗ್ರಹಣ, ರಾಂನಾರಾಯಣ್ ಸಂಭಾಷಣೆ, ಅನಿಲ್.ಬಿ. ಕೃಷ್ಣ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಅವಿನಾಶ್, ಸಾಧುಕೋಕಿಲಾ, ತಾರಾ, ಲೋಹಿತ್ ಮುಂತಾದವರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಡಯಾನಾ, ಮನಸಿನ ಮಾತು, ಅಜಯ್, ಐಂದ್ರಿತಾ ರೇ, ಧ್ರುವ, ಸಂಗೀತಾ ಶೆಟ್ಟಿ