ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಭಕ್ತಿ ಪ್ರಧಾನ ಚಿತ್ರ 'ಶ್ರೀ ನಾಗಶಕ್ತಿ' ತೆರೆಗೆ ಬರಲು ಸಿದ್ಧ (Sri Nagashakti | Shruti | Ramkumar | Sai Prakash)
ಸಿನಿಮಾ ಮುನ್ನೋಟ
Bookmark and Share Feedback Print
 
ಬಹಳ ದಿನಗಳಾದ ಮೇಲೆ ಭಕ್ತಿ ಪ್ರಧಾನವಾದ ಚಿತ್ರವೊಂದು ನಿರ್ಮಾಣವಾದೆ. ಅದನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ 'ಯು' ಅರ್ಹತಾ ಪತ್ರ ನೀಡಿದೆ.

13 ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾಗಿರುವ ತಾರೆ ಚಂದ್ರಿಕಾ ಈ ಚಿತ್ರದಲ್ಲಿ ನಾಗಶಕ್ತಿಯ ಪಾತ್ರ ಮಾಡಿದ್ದಾರಲ್ಲದೇ ಚಿತ್ರ ನಿರ್ಮಾಣಕ್ಕಾಗಿ ಹಣ ಹೂಡಿದ್ದಾರೆ ಕೂಡ. 'ಶ್ರೀ ನಾಗಶಕ್ತಿ' ಕುಟುಂಬ ಸಮೇತ ನೋಡಲೆಂದೇ ನಿರ್ಮಿಸಿರುವ ಚಿತ್ರ. ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಮಾಡಿಕೊಳ್ಳಲಾಗಿದೆ ಎಂದು ನಿರ್ಮಾಪಕಿ ಚಂದ್ರಿಕಾ ತಿಳಿಸಿದ್ದಾರೆ.

ಭಕ್ತಿ ಪ್ರಧಾನವಾದ ಚಿತ್ರಗಳಿಗೆ ಎತ್ತಿದ ಕೈ ಎನಿಸಿಕೊಂಡಿರುವ ಸಾಯಿಪ್ರಕಾಶ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬೇಬಿ ಕೃತಿ ಪುಟ್ಟ ನಾಗಶಕ್ತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಶ್ರುತಿ ಹಾಗೂ ರಾಮ್ ಕುಮಾರ್ ದಂಪತಿಯಾಗಿ ನಾಗಶಕ್ತಿಯ ಆರಾಧನೆ ಮಾಡುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಹಿರಿಯ ಲೇಖಕ ಗೋಟೂರಿ ಅವರ ಕಥೆ ಇದೆ. ಸಂಗೀತಾ, ಟೆನ್ನಿಸ್ ಕೃಷ್ಣ ಇನ್ನಿತರರು ತಾರಾಗಣದಲ್ಲಿದ್ದಾರೆ. ವೆಂಕಟ್-ನಾರಾಯಣ್ ಖ್ಯಾತಿಯ ನಾರಾಯಣ್ ಈ ಚಿತ್ರದ ಮುಖಾಂತರ ಗಣೇಶ್ ನಾರಾಯಣ ಎಂಬ ಹೆಸರಿನಲ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾರಾಯಣ್ ಈ ಚಿತ್ರದ ಛಾಯಾಗ್ರಾಹಕರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶ್ರೀ ನಾಗಶಕ್ತಿ, ಶ್ರುತಿ, ರಾಮ್ಕುಮಾರ್, ಸಾಯಿಪ್ರಕಾಶ್, ಟೆನ್ನಿಸ್ ಕೃಷ್ಣ