ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ನಾಯಕ, ಹುಲಿ, ಗೌಡ ವರ್ಸಸ್ ರೆಡ್ಡಿ ಈ ವಾರ ತೆರೆಗೆ (Nayaka | Huli | Gowda Vs Reddy | Omprakash Rao)
ಸಿನಿಮಾ ಮುನ್ನೋಟ
Bookmark and Share Feedback Print
 
PR
2010ರ ವರ್ಷಕ್ಕೆ ಗುಡ್ ಬೈ ಹೇಳಲು ಇನ್ನೇನು ಕೇವಲ ಎರಡು ವಾರಗಳು ಬಾಕಿ ಉಳಿದಿವೆ ಎನ್ನುವ ಹೊತ್ತಿನಲ್ಲಿ ಬರೋಬ್ಬರಿ ಮೂರು ಚಿತ್ರಗಳು ಬಿಡುಗಡೆಯಾಗುತ್ತಿವೆ. ಹುಲಿ, ನಾಯಕ, ಗೌಡ ವರ್ಸಸ್ ರೆಡ್ಡಿ ಚಿತ್ರಗಳು ಇದೇ ಡಿಸೆಂಬರ್ 17ರಂದು ಶುಕ್ರವಾರ ತೆರೆಗೆ ಬರಲಿವೆ.

ಇದರೊಂದಿಗೆ 2010ರಲ್ಲಿ ಬಿಡುಗಡೆಯಾದ ಒಟ್ಟು ಚಿತ್ರಗಳ ಸಂಖ್ಯೆ 130ಕ್ಕೆ ಏರಿಕೆಯಾಗಿದೆ.

ಓಂ ಪ್ರಕಾಶ್ ರಾವ್ ಅವರ ನಿರ್ದೇಶಕ 25ನೇ ಚಿತ್ರ 'ಹುಲಿ' ಇದರಲ್ಲಿ ಪ್ರಮುಖವಾದುದು. ಸುಧೀಂದ್ರ ಮತ್ತು ಶಿವಪ್ರಕಾಶ್‌ರವರು ಶಿವು ಎಂಟರ್‌ಪ್ರೈಸಸ್ ಮೂಲಕ ನಾಯಕನಾಗಿ ಪದಾರ್ಪಣೆ ಮಾಡುತ್ತಿರುವ ಕಿಶೋರ್‌ಗೆ ಇಲ್ಲಿ ಜೆನ್ನಿಫರ್ ಕೊತ್ವಾಲ್ ನಾಯಕಿ.

ಈಗಾಗಲೇ ವಿಲನ್, ಪೊಲೀಸ್ ಅಧಿಕಾರಿಗಳ ಪಾತ್ರದಲ್ಲಿ ಮಿಂಚಿರುವ ಕಿಶೋರ್ ಅದೃಷ್ಟ ಪರೀಕ್ಷೆ ಇಲ್ಲಿ ನಡೆಯಲಿದೆ. ಪ್ರೇಮ್, ಶೋಭರಾಜ್, ಶ್ರೀನಿವಾಸ ಮೂರ್ತಿ, ಅವಿನಾಶ್, ಮಾಳವಿಕಾ, ಸುಮಿತ್ರಾ, ಚಿತ್ರಾ ಶೆಣೈ ಮುಂತಾದವರಿದ್ದಾರೆ. ಸಂಪೂರ್ಣ ಆಕ್ಷನ್ ಹೊಂದಿರುವ ಚಿತ್ರ ಎನ್ನುವುದು ನಿರ್ದೇಶಕರ ಭರವಸೆ.

ಚೊಚ್ಚಲ ಚಿತ್ರ ನಿರ್ದೇಶಿಸುತ್ತಿರುವ ಪಿ.ಸಿ. ಶೇಖರ್, ಆರಂಭದಲ್ಲೇ ತನ್ನನ್ನು 'ನಾಯಕ' ಚಿತ್ರದ ಮೂಲಕ ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾರೆ. ನವೀನ್ ಎಂಬ ಹೊಸಬ ನಾಯಕ. ರಾಗಿಣಿ ದ್ವಿವೇದಿ ನಾಯಕಿ. 'ನಾನ್ ಕಡವುಲ್' ಖ್ಯಾತಿಯ ರಾಜೇಂದ್ರ, ರಾಜೇಂದ್ರನಾಥ್ ಮುಂತಾದವರ ತಾರಾಗಣ ಹೊಂದಿರುವ ಈ ಚಿತ್ರದ ನಿರ್ಮಾಪಕರು ರಮೇಶ್ ಕುಮಾರ್ ಮತ್ತು ಪ್ರದೀಪ್ ಕುಮಾರ್.

ಪ್ರೀತಿ ಮತ್ತು ಥ್ರಿಲ್ಲಿಂಗ್ ಚಿತ್ರದ ತಿರುಳು. ಮುರಳಿ ಕ್ರಿಶ್ ಛಾಯಾಗ್ರಾಹಕರು. ಪ್ರದೀಪ್ ದತ್ ಸ್ಟೀಫನ್ ಸಂಗೀತ ನೀಡಿದ್ದಾರೆ.

ಗೌಡ ವರ್ಸಸ್ ರೆಡ್ಡಿ ಎಂಬ ಶೀರ್ಷಿಕೆಯ ಮೂಲಕ ವಿವಾದಕ್ಕೆ ಕಾರಣವಾಗಿ, ನಂತರ ರಾಮೇ ಗೌಡ ವರ್ಸಸ್ ಕೃಷ್ಣ ರೆಡ್ಡಿ ಎಂದು ಹೆಸರು ಬದಲಾಯಿಸಿಕೊಂಡಿರುವ ಚಿತ್ರ ಹೆಸರೇ ಸೂಚಿಸುವಂತೆ ಹಾಸ್ಯ ಪ್ರಧಾನವಾದದ್ದು. ಒಲವೇ ವಿಸ್ಮಯ ಖ್ಯಾತಿಯ ನಿರ್ದೇಶಕ ನಾಗೇಶ್ ಚಿತ್ರವಿದು. ವಿತರಕ ಹಾಗೂ ಹಿರಿಯ ನಿರ್ಮಾಪಕ ನರ್ಗೀಸ್ ಬಾಬು ಪುತ್ರ ವಸೀಮ್ ಹಣ ಹಾಕಿದ್ದಾರೆ.

ಅನಂತ್‌ನಾಗ್, ರಂಗಾಯಣ ರಘು, ಶಶಿಕುಮಾರ್, ರೂಪೇಶ್, ರೂಪಶ್ರೀ ಮುಂತಾದವರು ಭೂಮಿಕೆಯಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಾಯಕ, ಹುಲಿ, ಗೌಡ ವರ್ಸಸ್ ರೆಡ್ಡಿ, ಓಂ ಪ್ರಕಾಶ್ ರಾವ್