ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಮೈಲಾರಿ ಬಿಡುಗಡೆ ಮುಂದಕ್ಕೆ; ಡಿ.24ರಂದು ನಿಮ್ಮ ಮುಂದೆ (Mylari | Shivaraj Kumar | KP Sreekanth | R Chandru)
ಸಿನಿಮಾ ಮುನ್ನೋಟ
Bookmark and Share Feedback Print
 
ಡಿಸೆಂಬರ್ 17ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಮೈಲಾರಿ' ಮುಂದಕ್ಕೆ ಹೋಗಿದೆ. ಡಿ.24ರಂದು ರಾಜ್ಯದಾದ್ಯಂತ ಚಿತ್ರ ಬಿಡುಗಡೆಯಾಗುತ್ತದೆ ಎಂದು ನಿರ್ಮಾಪಕ ಕೆ.ಪಿ. ಶ್ರೀಕಾಂತ್ ತಿಳಿಸಿದ್ದಾರೆ.

ಇಂದು (ಡಿಸೆಂಬರ್ 15) ಸಂಜೆ ಸೆನ್ಸಾರ್ ಮಂಡಳಿ ಒಂಚೂರೂ ಕಟ್ ಮಾಡದೆ ಬಿಡುಗಡೆಗೆ ಒಪ್ಪಿಗೆ ಸೂಚಿಸಿದೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರವನ್ನು ನೀಡಲಾಗಿದೆ. ನಮ್ಮ ಮುಂದೆ ಇರುವ ಉಳಿದ ಕೆಲಸ ಪ್ರಚಾರ. ನರ್ತಕಿ ಸೇರಿದಂತೆ ಕರ್ನಾಟಕದಾದ್ಯಂತ ಎಲ್ಲೆಡೆ ಬಿಡುಗಡೆ ಮಾಡುತ್ತಿದ್ದೇವೆ ಎಂದಿದ್ದಾರೆ.

ಮೈಲಾರಿಯ ಹಾಡುಗಳು ಈಗಾಗಲೇ ಸಾಕಷ್ಟು ಪ್ರಸಿದ್ಧಿ ಪಡೆದಿವೆ. ಇದೇ ಕಾರಣದಿಂದ ಅಭಿಮಾನಿಗಳು ಚಿತ್ರಮಂದಿರಗಳತ್ತ ಹೆಜ್ಜೆ ಹಾಕುತ್ತಾರೆ ಎನ್ನುವುದು ಅವರ ಭರವಸೆ.

ಮೈಲಾರಿಯನ್ನು ನಿರ್ದೇಶಿಸಿರುವುದು ತಾಜ್‌ಮಹಲ್ ಖ್ಯಾತಿಯ ಆರ್. ಚಂದ್ರು. 'ಮೊನಾಲಿಸಾ'ದ ಸದಾ ಹೀರೋಯಿನ್. ಚಿತ್ರ ಕ್ರಿಸ್ಮಸ್ ಅವಧಿಯಲ್ಲೇ ಬಿಡುಗಡೆಯಾಗುತ್ತಿರುವುದರಿಂದ ಲಾಭವಾಗಬಹುದು ಅನ್ನೋ ಲೆಕ್ಕಾಚಾರವೂ ನಿರ್ಮಾಪಕರಲ್ಲಿದೆ.

ಚಿತ್ರ ಬಿಡುಗಡೆಯನ್ನು ಮುಂದಕ್ಕೆ ಹಾಕಿರುವುದು ಪ್ರಚಾರದ ಕಾರಣಕ್ಕಾಗಿ. ಈಗಷ್ಟೇ ಸೆನ್ಸಾರ್ ಒಪ್ಪಿಗೆ ನೀಡಿರುವುದರಿಂದ, ಪ್ರಚಾರಕ್ಕೆ ಕಾಲಾವಕಾಶ ಕಡಿಮೆ. ಹಾಗಾಗಿ ಒಂದು ವಾರದ ನಂತರ ಬಿಡುಗಡೆಯ ನಿರ್ಧಾರಕ್ಕೆ ಬಂದಿದ್ದೇವೆ. ಅಷ್ಟು ಹೊತ್ತಿಗೆ ಸಾಕಷ್ಟು ಪ್ರಚಾರ ನಡೆಸುವ ಉದ್ದೇಶ ನಮ್ಮದು ಎನ್ನುವುದು ಚಿತ್ರತಂಡದ ಮಾತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೈಲಾರಿ, ಶಿವರಾಜ್ ಕುಮಾರ್, ಕೆಪಿ ಶ್ರೀಕಾಂತ್, ಆರ್ ಚಂದ್ರು