ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಮೂರ್ಖರ ದಿನಕ್ಕೆ 'ಸಂಜು ವೆಡ್ಸ್ ಗೀತಾ' (Sanju weds Geetha | Ramya | Shreenagara Kitty | Nagashekar)
PR
ಕನಸಿನ ಕನ್ಯೆ ರಮ್ಯಾ ಮತ್ತು ಶ್ರೀನಗರ ಕಿಟ್ಟಿ ಅಭಿನಯದ 'ಸಂಜು ವೆಡ್ಸ್ ಗೀತಾ' ಕೊನೆಗೂ ಅತಿ ಶೀಘ್ರದಲ್ಲೇ ತೆರೆಗಪ್ಪಳಿಸಲಿದೆ. ಅದೂ ಮೂರ್ಖರ ದಿನದಂದು. ಮಾರ್ಚ್ 18ರಂದು ಬಿಡುಗಡೆಗೊಳ್ಳುವುದೆಂದು ಈ ಹಿಂದೆ ಪ್ರಕಟಿಸಿದ್ದ ನಿರ್ಮಾಪಕರು ಪ್ರೇಕ್ಷಕರನ್ನು ಮೊದಲೇ ಮೂರ್ಖರನ್ನಾಗಿಸಿದ್ದಾರೆ.

ಆ ದಿನಾಂಕಕ್ಕೆ ಚಿತ್ರಮಂದಿರ ಸಿಗುತ್ತಿಲ್ಲವೆಂಬ ಸಬೂಬು ಬೇರೆ ನೀಡಿರುವ ನಿರ್ಮಾಪಕ ಪ್ರಮೋದ್ ನಾರಾಯಣ್ ಬಿಡುಗಡೆಯನ್ನು ಏಪ್ರಿಲ್ ಒಂದಕ್ಕೆ ಮುಂದೂಡುವುದು ಅನಿವಾರ್ಯವಾಯಿತು ಎಂದಿದ್ದಾರೆ.

ಸುಮಾರು ಎರಡು ವರ್ಷಗಳಿಂದಲೂ ಇಂದೇ ಬರುವೆ ನಾಳೆ ಬರುವೆ ಎನ್ನುತ್ತಿದ್ದ ಸಂಜು ಮತ್ತು ಗೀತಾ ಕೊನೆಗೂ ಏಪ್ರಿಲ್ ಒಂದರಂದೇ ತಮ್ಮ ದಿನಾಚರಣೆ ನಡೆಸುತ್ತಿರುವುದು ಮತ್ತಷ್ಟು ಕುತೂಹಲ ಹುಟ್ಟಿಸಿದೆ. 'ಸಂಜು ವೆಡ್ಸ್ ಗೀತಾ' ಚಿತ್ರದ ಕಿಟ್ಟಿ-ರಮ್ಯಾ ದರ್ಶನಕ್ಕೆ ಆ ದಿನದ ಬಗ್ಗೆ ವಿಶ್ವಾಸ ಇದ್ದವರು ಆ ತನಕ ಕಾಯಬಹುದು.

2010ರ ನವೆಂಬರ್ 17ರಂದೇ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಜೆಸ್ಸಿ ಗಿಫ್ಟ್ ಅವರ ಅದ್ಭುತ ಸಂಗೀತದಲ್ಲಿ 'ಸಂಜು ಮತ್ತು ಗೀತಾ ಸೇರಬೇಕು ಅಂತಾ' ಸುಮಧುರ ಹಾಡುಗಳು ಈಗಾಗಲೇ ಜನಮನ ಗೆದ್ದಿದೆ.

ಅಂದ ಹಾಗೆ 'ಜಸ್ಟ್ ಮಾತ್ ಮಾತಲ್ಲಿ' ನಂತರ ರಮ್ಯಾ ಚಿತ್ರ ಬಿಡುಗಡೆಯಾಗಿಯೇ ಇಲ್ಲ. ನಾಗಶೇಖರ್ ನಿರ್ದೇಶನದ 'ಸಂಜು ವೆಡ್ಸ್ ಗೀತಾ' ತಾರಾಗಣದಲ್ಲಿ ಸುಹಾಸಿನಿ, ಜೈಜಗದೀಶ್, ಅವಿನಾಶ್, ಬುಲೆಟ್ ಪ್ರಕಾಶ್, ಶರಣ, ರಂಗಾಯಣ ರಘು ಮುಂತಾದವರಿದ್ದಾರೆ.
ಇವನ್ನೂ ಓದಿ