ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಇಬ್ಬರು ನಾಯಕಿಯರ 'ಮಲ್ಲಿಕಾರ್ಜುನ' ಸದ್ಯದಲ್ಲೇ ತೆರೆಗೆ! (Ravichandran | Mallikarjuna | Seetha | Sada)
PR
ಎಸ್. ಎಸ್. ಕಂಬೈನ್ಸ್ ಲಾಂಛನದಲ್ಲಿ ಡಿ.ರಾಜಕುಮಾರ್ ಅರ್ಪಿಸಿ, ದಿನೇಶ್ ಗಾಂಧಿ ನಿರ್ಮಿಸಿರುವ ಹಾಗೂ ರವಿಚಂದ್ರನ್ ದ್ವಿಪಾತ್ರದಲ್ಲಿ ನಟಿಸಿರುವ 'ಮಲ್ಲಿಕಾರ್ಜುನ' ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು ಸದ್ಯದಲ್ಲೇ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಸಕಲೇಶಪುರದಲ್ಲಿ ನಿರ್ಮಿಸಲಾಗಿದ್ದ ಭವ್ಯವಾದ ಸೆಟ್‌ನಲ್ಲೇ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ನಡೆದಿದೆ ಹಾಗೂ ಸಿಂಗಾಪುರ, ಮಲೇಶಿಯಾ ಮತ್ತು ಹಾಂಕಾಂಗ್‌ನಲ್ಲಿ ಚಿತ್ರದ ಹಾಡುಗಳನ್ನು ಚಿತ್ರೀಕರಿಸಲಾಗಿದೆ ಎಂದು ನಿರ್ದೇಶಕ ಮುರಳಿಮೋಹನ್ ತಿಳಿಸಿದ್ದಾರೆ. ರವಿಚಂದ್ರನ್ ದ್ವಿಪಾತ್ರಕ್ಕೆ ನಾಯಕಿಯರಾಗಿ ಸೀತಾ ಹಾಗೂ ಸದಾ ಅಭಿನಯಿಸಿದ್ದಾರೆ.

ರಮ್ಯಾ ಬಾನಾ, ಸುದೀಪ್ತೋ, ಆಶೀಷ್ ವಿದ್ಯಾರ್ಥಿ, ಹೇಮ ಚೌಧರಿ, ಆದಿ ಲೋಕೇಶ್, ಎಂ.ಎನ್.ಲಕ್ಷ್ಮಿದೇವಿ, ರಾಜು ತಾಳಿಕೋಟೆ, ದಿನೇಶ್ ಗಾಂಧಿ ಮುಂತಾದವರು ತಾರಾ ಬಳಗದಲ್ಲಿದ್ದಾರೆ. ಜಿ.ಎಸ್.ವಿ.ಸೀತಾರಾಂ ಛಾಯಾಗ್ರಹಣ ಹಾಗೂ ಎಸ್.ಎ. ರಾಜಕುಮಾರ್ ಅವರ ಸಂಗೀತ 'ಮಲ್ಲಿಕಾರ್ಜುನ' ಚಿತ್ರಕ್ಕಿದೆ.
ಇವನ್ನೂ ಓದಿ