ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ವಿಮರ್ಶೆ » ಸ್ಯಾಂಡಲ್‌ವುಡ್ ಗುರು; ಲೇಟಾಗಿ ಬಂದಿರೋ ಲೇಟೆಸ್ಟ್ ಚಿತ್ರ (Sandalwood Guru | Manas | Akshata Shetty | James Architect)
ಸಿನಿಮಾ ವಿಮರ್ಶೆ
Bookmark and Share Feedback Print
 
ಚಿತ್ರ: ಸ್ಯಾಂಡಲ್‌ವುಡ್ ಗುರು
ತಾರಾಗಣ: ಮಾನಸ್, ಅಕ್ಷತಾ ಶೆಟ್ಟಿ, ಸತ್ಯ ವೆಂಕಟೇಶ್, ಮಾಸ್ಟರ್ ಚಿರಂಜೀವಿ, ಬೇಬಿ ಶಿವಾನಿ
ನಿರ್ದೇಶನ: ಮಾನಸ್
ಸಂಗೀತ: ಜೇಮ್ಸ್ ಆರ್ಕಿಟೆಕ್ಟ್

ಸ್ಯಾಂಡಲ್‌ವುಡ್ ಗುರು ಲೇಟಾಗಿ ಬಂದಿರುವ ಲೇಟೆಸ್ಟ್ ಚಿತ್ರ. ಈ ಚಿತ್ರ ಕಳೆದ ವಾರ ತೆರೆಕಂಡಿದೆ. ಇತ್ತೀಚಿನ ಹೊಸಬರ ಚಿತ್ರಗಳಿಗೆ ಇದೂ ಸೇರ್ಪಡೆ.

ಪ್ರೀತಿ ಪ್ರೇಮ ಹಾಗೂ ಹೋರಾಟ ಎಲ್ಲವನ್ನೂ ಒಳಗೊಂಡಿರುವ ಕತೆ. ಬದುಕನ್ನೂ ಮೀರಿದ ನಿರೀಕ್ಷೆಯನ್ನು ತೋರಿಸುವ ಹಾಗೂ ಅದನ್ನು ಸಾಕಾರಗೊಳಿಸುವ ಮಾದರಿಯ ಕತೆ. ಬುದ್ದಿ ಹಾಗೂ ಶರೀರಕ್ಕೆ ಕೆಲಸ ಕೊಡುವ ಚಿತ್ರ. ಅಂದ ಹಾಗೆ ಇಲ್ಲಿ ಸ್ಯಾಂಡಲ್‌ವುಡ್ ಗುರು ಎನ್ನುವುದು ವಾಹಿನಿಯೊಂದರ ಹೆಸರೇ ಹೊರತು, ಕನ್ನಡ ಚಿತ್ರರಂಗವೆಂದಲ್ಲ.
PR

ಸುಮ್ಮನೆ ಕುಳಿತು ನೋಡಿ ಎದ್ದು ಬರುವಷ್ಟು ಸುಲಭವಾದ, ಸಲೀಸಾದ ಚಿತ್ರವಲ್ಲ. ಹಾಗೆಯೇ ಉತ್ತಮವಾಗಿ ಸನ್ನಿವೇಶ ಹೆಣೆದಿದ್ದು, ತಕ್ಷಣಕ್ಕೆ ನೆನಪಿನ ಸುಳಿಯಿಂದ ಆಚೆ ಹೋಗುವುದಿಲ್ಲ. ಜಟಿಲ ಕಥೆಗಳ ರಾಶಿಯನ್ನೇ ಹೊಂದಿರುವ ಚಿತ್ರ ಕೆಲವರಿಗೆ ಗೊಂದಲನ್ನೂ ಹುಟ್ಟಿಸಬಹುದು.

ಇದು ಯಾರಿಗೂ ಸುಲಭಕ್ಕೆ ಅರ್ಥವಾಗುವ ಚಿತ್ರವಲ್ಲ. ಹೀಗಾಗಿಯೇ ಬಹುಕಾಲ ಮನಸ್ಸಿನಲ್ಲಿ ಉಳಿಯುತ್ತದೆ. ಚಿತ್ರವನ್ನು ಪೂರ್ತಿಯಾಗಿ ವೀಕ್ಷಿಸಿದ ನಂತರವೇ ಕೆಲವರಿಗೆ ಇದು ಏನು ಅನ್ನುವುದು ಅರ್ಥವಾಗುತ್ತದೆ. ಇನ್ನು ಕೆಲವರಿಗೆ ಕೊನೆಗೂ ಏನೂ ಅರ್ಥವಾಗುವುದಿಲ್ಲ.

ಸತ್ಯ ವೆಂಕಟೇಶ್ ಸಹ ಚಿತ್ರದಲ್ಲಿದ್ದು ಅವರ ಅಭಿನಯ ವಿಭಿನ್ನವಾಗಿದೆ. ಚಿತ್ರವನ್ನು ವೀಕ್ಷಿಸಿದವರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಎಷ್ಟು ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಅನ್ನುವುದನ್ನು ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಯಾಂಡಲ್ವುಡ್ ಗುರು, ಮಾನಸ್, ಅಕ್ಷತಾ ಶೆಟ್ಟಿ, ಜೇಮ್ಸ್ ಆರ್ಕಿಟೆಕ್ಟ್