ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಸುಳ್ಳು ಹೇಳ್ದಿದ್ರೆ ಬದ್ಕೋದು ಕಷ್ಟ: ಸಾಧು ಕೋಕಿಲ
ತಾರಾ ಪರಿಚಯ
Feedback Print Bookmark and Share
 
MokshendraMOKSHA
ನಿಮಗೆ ಸಾಧುಕೋಕಿಲ ನಟನೆ ಇಷ್ಟವಾಗುತ್ತದೆಯೇ? ಇದೊಂದು ಹುಚ್ಚು ಪ್ರಶ್ನೆ ಅನ್ನಿಸಬಹುದು. ಬಹುಶ: ಎಂತಹ ನೀರಸ ವ್ಯಕ್ತಿಗೂ ಸಾಧು ಅವರ ಹಾಸ್ಯವನ್ನು ಕಂಡಾಗ ನಗು ಬಂದೇ ಬರುತ್ತದೆ. ಆ ರೀತಿ ಸಾಧು ಎದ್ದು-ಬಿದ್ದು ನಗಿಸುತ್ತಾರೆ. ಅದರಲ್ಲೂ ದೊಡ್ಡಣ್ಣ ಹಾಗೂ ಸಾಧುಕೋಕಿಲ ಕಾಂಬಿನೇಶನ್ ಎಂದರೆ ಅದರ ಮಜಾನೇ ಬೇರೆ.

ಇಂತಿಪ್ಪ ಸಾಧುಕೋಕಿಲರಿಗೆ ತೀರಾ ಹಸಿವಾದಾಗ ಸಿಟ್ಟು ತಡೆಯಲಾಗುವುದಿಲ್ಲವಂತೆ. ಕೆಲಸದಲ್ಲಿ ಬ್ಯುಸಿ ಇದ್ದು ಊಟ ಮರೆತು ಮತ್ತೆ ಹಸಿವಾದಾಗ ಓಹೋ.. ನಾನು ಊಟ ಮಾಡಿಲ್ಲ ಎಂದು ನೆನಪಾಗುತ್ತೆ ಎನ್ನುತ್ತಾರೆ. ಇವರು ನಿರ್ದೇಶಿಸಿದ ಚಿತ್ರದಲ್ಲಿ ರಕ್ತಕಣ್ಣೀರು ಇವರಿಗೆ ಇಷ್ಟವಾದ ಚಿತ್ರವಂತೆ. ಸಂಗೀತ ಎಂದರೆ ನನಗೆ ಇಷ್ಟ. ಆಚಾನಕ್ ಆಗಿ ನಟನಾದೆ. ಈಗ ಜನ ನನ್ನನ್ನು ಹಾಸ್ಯ ನಟನೆಂದೇ ಗುರುತಿಸುತ್ತಾರೆ ಅನ್ನುತ್ತಾರವರು.

ಉದ್ಯಮದಲ್ಲಿ ಸುಳ್ಳು ಹೇಳದಿದ್ದರೆ ಬದುಕಲು ಕಷ್ಟ. ನಾನು ಬೇಜಾನ್ ಸುಳ್ಳು ಹೇಳಿದ್ದೀನಿ ಎಂದು ಕಿಟಿಕಿಟಿ ನಗುವ ಈ ಸಾಧು, ಇಲ್ಲಿ ಕೆಲವೊಮ್ಮೆ ಅನಿವಾರ್ಯವಾಗಿ ಸುಳ್ಳು ಹೇಳಬೇಕಾಗಿ ಬರುತ್ತದೆ ಎನ್ನುತ್ತಾರೆ. ಸಾಧುಕೋಕಿಲ ನಿರ್ದೇಶಿಸಿದ ಗಂಗೆ ಬಾರೇ ತುಂಗೆ ಬಾರೇ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಲವ್ ಸ್ಟೋರಿ ಇರುವ ಚಿತ್ರವನ್ನು ಮೊದಲ ಬಾರಿಗೆ ಇಲ್ಲಿ ನಿರ್ದೇಶಿಸಿದ್ದಾರೆ.

ಸಾಧುಗೆ ಜಗತ್ತು ನೆನಪಿಸಿಕೊಳ್ಳುವಂತಹ ಕೆಲಸ ಮಾಡಬೇಕು ಎಂಬ ಆಸೆ ಇದೆಯಂತೆ. ಗುಡ್ ಲಕ್ ಸಾಧು.