ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » 50ಕ್ಕೆ ಕಾಲಿಟ್ಟ ರವಿಚಂದ್ರನ್‌: ಶುಭ ಹಾರೈಸಿ (Ravi chandran | Manjina hani | Kanasugara | Kannada Cinema)
PR
ಕ್ರೇಜಿ ಸ್ಟಾರ್ ರವಿಚಂದ್ರನ್ ಮೇ 30ಕ್ಕೆ ಐವತ್ತು ವರ್ಷಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕನಸುಗಾರ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲವಾದರೂ, ಜನುಮದಿನಕ್ಕೆ ಅದರದೇ ಆದ ಪಾವಿತ್ರತೆ ಇರುವುದರಿಂದ ನೀವೂ ಶುಭ ಹಾರೈಸಿ. ಪ್ರತೀ ವರ್ಷದಂತೆ ಈ ವರ್ಷವೂ ಹುಟ್ಟುಹಬ್ಬದ ಕೊಡುಗೆಯಾಗಿ ಯಾವುದಾದರೊಂದು ಚಿತ್ರವನ್ನು ಬಿಡುಗಡೆ ಮಾಡುವುದು ಕನಸುಗಾರನ ಕನಸಾಗಿತ್ತು.

ಅದರಲ್ಲೂ ತನ್ನ ಬಹುನಿರೀಕ್ಷೆಯ 'ಮಂಜಿನ ಹನಿ' ಚಿತ್ರವನ್ನು ಐವತ್ತನೇ ಹುಟ್ಟುಹಬ್ಬದ ಕೊಡುಗೆಯಾಗಿ ಬಿಡುಗಡೆ ಮಾಡಿ ತನ್ನ ಅಭಿಮಾನಿಗಳಿಗೆ ತನ್ನ ಕನಸನ್ನು ನನಸಾಗಿ ತೋರಿಸುವ ಇರಾದೆ ಅವರದಾಗಿತ್ತು. ಆದರೆ ಕಾರಣಾಂತರಗಳಿಂದ ಚಿತ್ರ ಪೂರ್ಣಗೊಂಡಿಲ್ಲ. ಚಿತ್ರ ಪೂರ್ಣಗೊಳಿಸದೆ ಯಾಕೋ ರವಿಮಾಮನಿಗೆ ಹುಟ್ಟುಹಬ್ಬ ಆಚರಿಸಲು ಇಷ್ಟವಿದ್ದಂತಿಲ್ಲ.

ತಾನು ಅಂದುಕೊಂಡದ್ದು ಅಂದುಕೊಂಡಂತೆಯೇ ಬರಬೇಕು. ಇಲ್ಲದಿದ್ದರೆ ಅದೆಷ್ಟು ಹಣ ಖರ್ಚುಮಾಡಿ ಸೆಟ್ ನಿರ್ಮಿಸಿದ್ದರೂ ಅವೆಲ್ಲವನ್ನೂ ಒಡೆದು ಹಾಕಿ ಪುನಃ ನಿರ್ಮಿಸುವುದು. ಅದರಿಂದಾಗಿ ಕಳೆದುಕೊಂಡ ಹಣದ ಬಗ್ಗೆ ಚಿಂತಿಸದಿರುವುದು ಕ್ರೇಜಿಸ್ಟಾರ್ ಅವರ ಗುಣಗಳಲ್ಲೊಂದು.

ಜತೆಗೆ ತನ್ನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ತಂತ್ರಜ್ಞರಿಗೆ ಯಾವುದೇ ತೊಡಕಿಲ್ಲದೆ ವೇತನ ನೀಡುವುದರಲ್ಲಿಯೂ ರವಿಚಂದ್ರನ್ ಎತ್ತಿದ ಕೈ. ಹಾಗೆಯೇ ನಟ, ನಟಿಯರನ್ನು ಗೌರವದಿಂದ ನೋಡಿಕೊಳ್ಳುವ ರವಿ ಸಂಭಾವನೆ ವಿಷಯದಲ್ಲೂ ಯಾರಿಗೂ ಮೋಸಮಾಡುವ ಜಾಯಮಾನದವರಲ್ಲ. ಮಾಧ್ಯಮಗಳಿಂದ ತುಂಬಾ ದೂರ ಉಳಿಯುವ ರವಿಯ ಕನಸು ಆದಷ್ಟು ಬೇಗನೇ ನನಸಾಗಲು ನೀವೂ ಹಾರೈಸಿ.
ಇವನ್ನೂ ಓದಿ