ಮುಖ್ಯ ಪುಟ > ಸುದ್ದಿ ಜಗತ್ತು > ಬಜೆಟ್ > ಬಜೆಟ್-09 > ಪ್ರಯಾಣಿಕರಿಗೆ 'ಮಮತೆ'ಯ ರೈಲು ಇದಾಗಬಹುದೇ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಯಾಣಿಕರಿಗೆ 'ಮಮತೆ'ಯ ರೈಲು ಇದಾಗಬಹುದೇ?
ಪ್ರಯಾಣ ದರದಲ್ಲಿ ಅಲ್ಪಮಟ್ಟದ ಪರಿಷ್ಕರಣೆ, ಸರಕು ಸಾಗಣೆಗೆ ಉತ್ತೇಜನ, ಭದ್ರತೆಗೆ ಹೆಚ್ಚಿನ ಹಣ ಮೀಸಲಿಡುವುದು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ 20 ರೂಪಾಯಿಗಳಲ್ಲಿ ಪಾಸ್ ನೀಡುವುದು ಮುಂತಾದುವು ಶುಕ್ರವಾರ ಮಂಡನೆಯಾಗಲಿರುವ ರೈಲ್ವೇ ಬಜೆಟ್‌ನ ಪ್ರಮುಖ ಅಂಶಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.

ಜತೆಗೆ ನಿಲ್ದಾಣಗಳಲ್ಲಿ ಕ್ಲಪ್ತ ದರದಲ್ಲಿ ಊಟ ಮತ್ತು 'ಜನತಾ ರೈಲು'ಗಳನ್ನು ಕೂಡ ಈ ಬಜೆಟ್‌ನಲ್ಲಿ ಪ್ರಕಟಿಸುವ ಸಾಧ್ಯತೆಗಳಿವೆ. ಅಲ್ಲದೆ ರಾಯ್ ಬರೇಲಿಯ ಬೋಗಿ ಕಾರ್ಖಾನೆ ಕಾಮಗಾರಿ ಮತ್ತು ಸರಕು ಸಾಗಣೆ ಮಾರ್ಗಗಳ ತ್ವರಿತ ಚಾಲನೆಗೂ ಕ್ರಮಗಳನ್ನು ತೆಗೆದುಕೊಳ್ಳಬಹುದು.
PTI

ಅಂತಾರಾಷ್ಟ್ರೀಯ ಮಟ್ಟದ ರೈಲ್ವೇ ನಿಲ್ದಾಣಗಳನ್ನು ನಿರ್ಮಿಸುವ ಕೆಲಸ ಕಾರ್ಯಗಳು ನಡೆಯುತ್ತಿರುವ ಹೊತ್ತಲ್ಲೇ ಇದಕ್ಕೆ ಮತ್ತಷ್ಟು ಪುಷ್ಟಿ ನೀಡಲು ಪಶ್ಚಿಮ ಬಂಗಾಲದ ಸೀಲ್ಡಾ ನಿಲ್ದಾಣವನ್ನೂ ಆಧುನೀಕರಣದ ಪಟ್ಟಿಗೆ ಸೇರಿಸುವ ಸಾಧ್ಯತೆಗಳಿವೆ.

ಕಾಶ್ಮೀರ ರೈಲು ಮಾರ್ಗ ಸಂಪರ್ಕ ಯೋಜನೆಯ ಕಾತ್ರಾ ಮತ್ತು ಕ್ವಾಜಿಗಂಡ್ ವಲಯದ ಹಳಿ ಕಾಮಗಾರಿಗಳನ್ನು ಪುನರಾರಂಭಿಸುವುದನ್ನೂ ಈ ಬಜೆಟ್‌ನಲ್ಲಿ ಪ್ರಕಟಿಸುವ ನಿರೀಕ್ಷೆಗಳಿವೆ. 70 ಕಿ.ಮೀ. ವ್ಯಾಪ್ತಿಯಲ್ಲಿನ ಹಳಿ ಜೋಡಣೆ ಸಮಸ್ಯೆಗಳಿಂದಾಗಿ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಇಲ್ಲಿನ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು.

ಲಾಲೂ ಪ್ರಸಾದ್ ಯಾದವ್ ಅವಧಿಯಲ್ಲಿ ಆರಂಭಿಸಲಾಗಿದ್ದ ಜನಪ್ರಿಯ 'ಗರೀಬ್ ರಥ'ಗಳಂತಹಾ ಮತ್ತಷ್ಟು ರೈಲುಗಳನ್ನು ಈ ಬಾರಿ ಘೋಷಿಸಲೂ ಬಹುದು.

ಆದರೆ ಅವುಗಳಿಗೆ ಗರೀಬ್ ರಥಗಳೆಂದು ಹೆಸರಿಸುವುದಿಲ್ಲ. ಇಂತಹ ರೈಲುಗಳನ್ನು ಉತ್ತರ ವಲಯಕ್ಕೆ ಪ್ರಕಟಿಸುವ ಸಾಧ್ಯತೆಗಳೇ ಹೆಚ್ಚು. ಇದರಲ್ಲೂ ಹವಾನಿಯಂತ್ರಿತರಹಿತ ಕೋಚ್‌ಗಳನ್ನು ಪರಿಚಯಿಸುವ ಸಂಭಾವ್ಯತೆಗಳಿವೆ ಎಂದು ಮೂಲವೊಂದು ತಿಳಿಸಿದೆ.

ಬಜೆಟ್‌ಗೆ ಅಂತಿಮ ಸ್ಪರ್ಶ ನೀಡುತ್ತಿರುವ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಉದಾರ ಬಜೆಟ್ ಮಂಡಿಸುವ ಆಕಾಂಕ್ಷೆಯನ್ನು ಈಗಾಗಲೇ ವ್ಯಕ್ತಪಡಿಸಿದ್ದಾರೆ.

ಮಾನವರಹಿತ ಕ್ರಾಸಿಂಗ್‌ಗಳಲ್ಲಿ ಅಪಘಾತಗಳನ್ನು ಕಡಿಮೆಗೊಳಿಸುವ ನಿಟ್ಟಿನಿಂದ ಹೆಚ್ಚಿನ ರೈಲ್ವೇ ಮೇಲ್ಸೇತುವೆಗಳು ಮತ್ತು ರೈಲ್ವೇ ಕೆಳ ಸೇತುವೆಗಳನ್ನು ನಿರ್ಮಿಸುವ ಯೋಜನೆಗಳನ್ನು ಪ್ರಕಟಿಸುವ ಇರಾದೆ ಸಚಿವರದ್ದು.

ಪ್ರಮುಖ ನಿಲ್ದಾಣಗಳಲ್ಲಿ ಏಕೀಕೃತ ಭದ್ರತಾ ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಗಳೂ ಇವೆ.

ಪ್ರವೇಶ ನಿಯಂತ್ರಣ, ಸರಂಜಾಮು ತಪಾಸಣೆ, ಸಿಸಿ ಟೀವಿ ಅಳವಡಿಕೆ ಮತ್ತು ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳಗಳ ಸ್ಥಾಪನೆ ಮುಂತಾದುವು ಸಮಗ್ರ ಭದ್ರತಾ ವ್ಯವಸ್ಥೆಯಲ್ಲಿನ ಪ್ರಮುಖ ಅಂಶಗಳು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಮತ್ತಷ್ಟು
ಮುಂಗಡ ಪತ್ರದಲ್ಲಿ ಭಾರಿ ತೆರಿಗೆ ಕಡಿತ ನಿರೀಕ್ಷೆ
ಮೊದಲೆರಡು ತಿಂಗಳಲ್ಲೇ ಶೇ.27 ತಲುಪಿದ ಆದಾಯ ಕೊರತೆ
ಕೊಡುಗೆ, ಹಿಂಜರಿತ: ಹಳಿ ತಪ್ಪಲಿದೆಯೇ ರೈಲ್ವೇ ಬಜೆಟ್?
ಬಜೆಟ್: ಬೆಲೆ ನಿಯಂತ್ರಣ ತೈಲ ಕಂಪನಿಗಳಿಗೆ?
ಇ-ಬೈಕ್‌ಗೆ ಬಜೆಟ್‌ನಲ್ಲಿ ಸಬ್ಸಿಡಿ: ಉದ್ಯಮದ ಬೇಡಿಕೆ
ಜನಪರ ಬಜೆಟ್ ಮಂಡನೆ: ಮೊಂಟೆಕ್ ವಿಶ್ವಾಸ