ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಉಗ್ರ ಛಾಯೆ: ರೂಪಾಯಿ ಮೌಲ್ಯವೂ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರ ಛಾಯೆ: ರೂಪಾಯಿ ಮೌಲ್ಯವೂ ಕುಸಿತ
ದೇಶದ ಆರ್ಥಿಕ ರಾಜಧಾನಿ ಉಗ್ರರ ಅಟ್ಟಹಾಸಕ್ಕೆ ತತ್ತರಿಸಿದ್ದು, ಪರಿಣಾಮ ರೂಪಾಯಿಯ ಮೇಲೂ ಬೀರಿದೆ. ಶುಕ್ರವಾರ ವ್ಯವಹಾರಗಳು ಆರಂಭವಾಗುತ್ತಿದ್ದಂತೆ ರೂಪಾಯಿ ಮೌಲ್ಯ ಕುಸಿದಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ತಡೆಯುವ ಯತ್ನದಲ್ಲಿದೆ.

"ಅನಿರೀಕ್ಷಿತ ಘಟನೆಗಳು ರೂಪಾಯಿ ವ್ಯವಹಾರದಲ್ಲಿ ಪ್ರತಿಕ್ರಿಯೆ ತೋರಿಸುತ್ತಿವೆ. ಡಾಲರ್‌ಗೆ 50ರಂತೆ ರೂಪಾಯಿ ಕುಸಿತ ಕಂಡಲ್ಲಿ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶ ಮಾಡಬೇಕೆಂದು ನಾನು ಬಯಸುತ್ತಿದ್ದೇನೆ" ಎಂದು ವಿದೇಶಿ ಬ್ಯಾಂಕಿನ ವಿತರಕರೊಬ್ಬರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ 125ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸುಮಾರು 300ರಷ್ಟು ಮಂದಿ ಗಾಯಗೊಂಡಿದ್ದಾರೆ. ಕಡಲ ಮಾರ್ಗದ ಮ‌ೂಲಗ ಬಂದಿರುವ ಉಗ್ರರು ಮುಂಬೈಯನ್ನು ಗುರಿಯಾಗಿಸಿ ಹಲವೆಡೆ ದಾಳಿ ನಡೆಸಿದ್ದು, ಇದರಿಂದ ಪ್ರವಾಸಿಗರು, ಉದ್ಯಮಿಗಳು ಸೇರಿದಂತೆ ಎಲ್ಲರೂ ತತ್ತರಿಸಿದ್ದಾರೆ. ಜತೆಗೆ ಐಷಾರಾಮಿ ಹೊಟೇಲುಗಳಲ್ಲಿ ಕೂಡ ಗ್ರಾಹಕರ ಸಂಖ್ಯೆಯಲ್ಲಿ ಕುಸಿತವಾಗಿದೆ.

ದಾಳಿ ಹಿನ್ನಲೆಯಲ್ಲಿ ಗುರುವಾರ ಶೇರು ಮಾರುಕಟ್ಟೆಯನ್ನೂ ಮುಚ್ಚಲಾಗಿತ್ತು. ಕಳೆದ ವಾರ ಡಾಲರ್ ಎದುರು ರೂಪಾಯಿ 50.60ರ ದಾಖಲೆ ಮೌಲ್ಯಕ್ಕೆ ತಲುಪಿತ್ತು. ಬುಧವಾರ ರೂಪಾಯಿ ಮೌಲ್ಯ ಡಾಲರ್ ಎದುರು 49.48 ದಾಖಲಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರ ದಾಳಿ: ರತನ್ ಟಾಟಾ ಖಂಡನೆ
ಬೆಂಗಳೂರು: ಡಿ.13ರಂದು ನ್ಯಾನೋ ಮೇಳ
ಹಣದುಬ್ಬರ ಪ್ರಮಾಣ ಮತ್ತಷ್ಟು ಇಳಿಕೆ
ಟೈಗರ್ ವುಡ್ಸ್ ನಂತರದ ಸರದಿ ಸೈಫ್?
ಉಗ್ರರ ದಾಳಿ: ಉದ್ಯಮಿಗಳಿಂದ ಖಂಡನೆ
ಶೇರು ಮಾರುಕಟ್ಟೆ ಮುಚ್ಚಬಾರದಿತ್ತು: ಹೂಡಿಕೆದಾರ