ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರಿಲಯನ್ಸ್‌ನಿಂದ ವೇಗದ ಅಂತರ್ಜಾಲ ಸೌಲಭ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಲಯನ್ಸ್‌ನಿಂದ ವೇಗದ ಅಂತರ್ಜಾಲ ಸೌಲಭ್ಯ
ಮುಂಬೈ : ದೇಶದ ಟೆಲಿಕಾಂ ಕ್ಷೇತ್ರದ ದೈತ್ಯ ಸಂಸ್ಥೆಯಾದ ರಿಲಯನ್ಸ್ ಕಮ್ಯೂನಿಕೇಶನ್ಸ್ ಅತ್ಯಂತ ವೇಗದ ಅಂತರ್ಜಾಲ ಸೇವೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ರಿಲಯನ್ಸ್ ನೆಟ್‌ಕನೆಕ್ಟ್ ಬ್ರಾಡ್‍‌ಬ್ಯಾಂಡ್ ಪ್ಲಸ್ ಎನ್ನುವ ಹೆಸರಿನಲ್ಲಿ ಸೇವೆಯನ್ನು ಆರಂಭಿಸಲಾಗಿದ್ದು, ಅತ್ಯಂತ ವೇಗದ ಅಂತರ್ಜಾಲ ಸಂಪರ್ಕದಿಂದಾಗಿ ಒಂದೇ ವೇಳೆಯಲ್ಲಿ ಹಲವು ಕಾರ್ಯಗಳನ್ನು ಮಾಡಬಹುದಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ರಿಲಯನ್ಸ್ ಕಮ್ಯೂನಿಕೇಶನ್ಸ್ ಅಧ್ಯಕ್ಷ ಮಹೇಶ್ ಪ್ರಸಾದ್ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿ, ನೂತನ ಸೇವೆ ದೇಶದ 35 ನಗರಗಳಲ್ಲಿ ಮಾತ್ರ ಲಭ್ಯವಿದ್ದು ದೇಶದ 80 ರಿಂದ 85 ರಷ್ಟು ಬ್ರಾಡ್‌ಬ್ಯಾಂಡ್‌ ಗ್ರಾಹಕರನ್ನು ತಲುಪಲಿದೆ ಎಂದು ತಿಳಿಸಿದ್ದಾರೆ.

ಅತ್ಯಂತ ವೇಗದ ಅಂತರ್ಜಾಲ ಸಂಪರ್ಕವನ್ನು ಪಡೆಯಲು ಗ್ರಾಹಕರು 3500 ರೂಪಾಯಿಗಳನ್ನು ಪಾವತಿಸಿ ಉಪಕರಣವನ್ನು ಖರೀದಿಸಬೇಕಾಗಿದ್ದು, ಮಾಸಿಕವಾಗಿ 299 ರೂಪಾಯಿಗಳಿಂದ 1750 ರೂಪಾಯಿಗಳವರೆಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮುಂದಿನ ವಾರದಿಂದ ಅಂತರ್ಜಾಲ ಸೇವೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಪ್ರಸ್ತುತವಿರುವ ರಿಲಯನ್ಸ್‌ನ ನೆಟ್‌ಕನೆಕ್ಟ್ ಸೇವೆ 10 ಲಕ್ಷ ಗ್ರಾಹಕರನ್ನು ತಲುಪಿದ್ದು, ಗ್ರಾಹಕರು ಅಂತರ್ಜಾಲ ಸೇವೆಯನ್ನು ಮೇಲ್ದರ್ಜೆಗೇರಿಸಲು ನೂತನ ಸೇವೆಯನ್ನು ಸುಲಭವಾಗಿ ಪಡೆಯಬಹುದಾಗಿದೆ ಎಂದು ಪ್ರಸಾದ್ ನುಡಿದರು.

ಕಂಪೆನಿ ನೂತನ ಅಂತರ್ಜಾಲ ಸೇವೆಗಾಗಿ ಸಾಫ್ಟ್‌ವೇರ್‌ನ್ನು ಮೇಲ್ದರ್ಜೇಗೇರಿಸಿದ್ದು,3.1 ಎಂಬಿಪಿಎಸ್‌ ವೇಗದಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ. ಮತ್ತೊಂದು ಪ್ರತ್ಯೇಕ ಅಪ್‌ಲಿಂಕ್‌‌ನ್ನು 1.8 ಎಂಬಿಪಿಎಸ್‌ ವೇಗದಲ್ಲಿ ಪಡೆಯಬಹುದಾಗಿದೆ.ಇತಚರ ಅಂತರ್ಜಾಲ ಸಂಪರ್ಕಗಳಿಗಿಂತ ಶೇ.30 ರಷ್ಟು ಹೆಚ್ಚಿನ ವೇಗವನ್ನು ಹೊಂದಿದೆ ಎಂದು ಹೇಳಿದ್ದಾರೆ.

ವಿಡಿಯೋ ಸ್ಟ್ರೀಮಿಂಗ್,ವಿಡಿಯೋ ಸರ್ವೆಲನ್ಸ್ ಮೀಡಿಯಾ ಕಂಟೆಂಟ್ ಮತ್ತು ಇಂಟರ್‌ನೆಟ್‌ ಬ್ರೌಸಿಂಗ್‌ಗಾಗಿ ಉಪಯುಕ್ತವಾಗಿದೆ ಎಂದು ಆರ್‌ಕಾಂ ಅಧ್ಯಕ್ಷ ಪ್ರಸಾದ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಿಲಯನ್ಸ್, ವೇಗದ, ಅಂತರ್ಜಾಲ, ಸೌಲಭ್ಯ
ಮತ್ತಷ್ಟು
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ ಏರಿಕೆ
ಲೆನೋವೊದಿಂದ 'ಮಾತೃಭಾಷಾ' ಕಂಪ್ಯೂಟರ್ ಕಲಿಕಾ ಯೋಜನೆ
ಕೈಗಾರಿಕಾ ಉತ್ಪಾದನೆ ಕುಸಿತ
ರಿಲಯನ್ಸ್ ಕಚ್ಚಾ ತೈಲ ಉತ್ಪಾದನೆ ಆರಂಭ
ಭಾರ್ತಿ ಸಿಇಒ ಶೇರು ಮಾರಾಟ:ಹೂಡಿಕೆದಾರರಿಗೆ ಆತಂಕ
ಹೊಂಡಾದಿಂದ ಅತ್ಯಾಧುನಿಕ ಮಾಡೆಲ್ ಕಾರು ಬಿಡುಗಡೆ