ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 65 ಬಿಲಿಯನ್‌ಡಾಲರ್‌ ವಂಚಿಸಿದ ಮಡೋಫ್ ಜೈಲಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
65 ಬಿಲಿಯನ್‌ಡಾಲರ್‌ ವಂಚಿಸಿದ ಮಡೋಫ್ ಜೈಲಿಗೆ
ಅಮೆರಿಕದ ವಾಲ್‌ಸ್ಟ್ರೀಟ್ ಇತಿಹಾಸದಲ್ಲಿ ವಂಚನೆಯ ದಾಖಲೆ ಸೃಷ್ಟಿಸಿದ ಬರ್ನಾರ್ಡ್ ಮಡೋಫ್, ಗುರುವಾರದಂದು ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಕಾರಾಗ್ರಹಕ್ಕೆ ತಳ್ಳಲಾಗಿದ್ದು, ಜೀವಾವಧಿ ಶಿಕ್ಷೆಯ ನಿರೀಕ್ಷೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾಜಿ ನಾಸ್ಟಾಡ್ ಶೇರುಪೇಟೆ ಮುಖ್ಯಸ್ಥ ಆರೋಪಿ ಮಡೋಪ್, ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ 10 ನಿಮಿಷಗಳ ಕಾಲ ಶಾಂತವಾಗಿ ಮಾತನಾಡಿ ಪೊಂಝಿ ಸ್ಕೀಮ್ ನಡೆಸುವುದು ಅಪರಾಧವೆಂದು ಗೊತ್ತಿದ್ದರೂ ಆದಷ್ಟು ಬೇಗನೆ ಮುಕ್ತಾಯಗೊಳಿಸುವ ಉದ್ದೇಶದಿಂದ ಯೋಜನೆ ಆರಂಭಿಸಿದ್ದಾಗಿ ಹೇಳಿದರು. ನ್ಯಾಯಾಲಯದ ಆವರಣದಲ್ಲಿ ಮಡೋಫ್ ವಂಚನೆ ಪೀಡಿತ ಹೂಡಿಕೆದಾರರು ಉಪಸ್ಥಿತರಿದ್ದರು.

ನನಗೆ ತುಂಬಾ ನೋವಾಗಿದೆ. ಕುಟುಂಬ, ಗೆಳೆಯರು ಹಾಗೂ ಸಹದ್ಯೋಗಿಗಳಿಗೆ ತುಂಬಾ ನೋವುಂಟು ಮಾಡಿದ್ದೇನೆ ೆಂದು 70 ವರ್ಷ ವಯಸ್ಸಿನ ಮಡೋಫ್ ಮ್ಯಾನ್‌ಹಟನ್‌ನ ಫೆಡರಲ್ ನ್ಯಾಯಾಲಯದ ನ್ಯಾಯಾಧೀಶ ಡೆನ್ನಿ ಚಿನ್ ಅವರ ಮುಂದೆ ತಮ್ಮ ಅಪರಾಧವನ್ನು ಒಪ್ಪಿಕೊಂಡರು.

ಪೊಂಝಿ ಸ್ಕೀಮ್ ಯೋಜನೆ ಆರಂಭಿಸಿದಾಗ ಅತಿ ಕಡಿಮೆ ಅವಧಿಯಲ್ಲಿ ಮುಕ್ತಾಯವಾಗಿ ನಾನು ಮತ್ತು ನನ್ನ ಗ್ರಾಹಕರನ್ನು ಹಣದ ವ್ಯವಹಾರದಿಂದ ಮುಕ್ತಗೊಳಿಸಲು ಬಯಸಿದ್ದೆ. ಆದರೆ ಅದು ದಿನಗಳೆದಂತೆ ಸುಮಾರು 20 ವರ್ಷಗಳವರೆಗೆ ಮುಂದುವರಿಯಿತು ಎಂದು ವಿಷಾದದಿಂದ ಮಡೋಫ್ ನುಡಿದರು.

ಮಡೋಫ್ ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಸಿದ್ದಪಡಿಸಿದ ವರದಿಯನ್ನು ಹೇಳಿದರು. ವಂಚನೆಯ ಮೊತ್ತವನ್ನು ಹೇಳಲಿಲ್ಲ. ಆದರೆ ವಿಚಾರಣೆಯಲ್ಲಿ ವಕೀಲರು ಮಾತನಾಡಿ ಕಳೆದ 20 ವರ್ಷಗಳಲ್ಲಿ ಸುಮಾರು 65 ಬಿಲಿಯನ್‌ ಡಾಲರ್‌ಗಳ ವಂಚನೆ ಮಾಡಿದ್ದು, 4800 ಗ್ರಾಹಕರ ಖಾತೆಗಳನ್ನು ಬಳಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ ಸಂಸ್ಥೆಯಿಂದ ಬಿಡ್‌ದಾರರ ಅರ್ಜಿ ಪರಿಶೀಲನೆ
ರಿಲಯನ್ಸ್‌ನಿಂದ ವೇಗದ ಅಂತರ್ಜಾಲ ಸೌಲಭ್ಯ
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ ಏರಿಕೆ
ಲೆನೋವೊದಿಂದ 'ಮಾತೃಭಾಷಾ' ಕಂಪ್ಯೂಟರ್ ಕಲಿಕಾ ಯೋಜನೆ
ಕೈಗಾರಿಕಾ ಉತ್ಪಾದನೆ ಕುಸಿತ
ರಿಲಯನ್ಸ್ ಕಚ್ಚಾ ತೈಲ ಉತ್ಪಾದನೆ ಆರಂಭ