ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ಇಳಿಕೆಯಾಗಿದೆ ದರಗಳಲ್ಲ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಇಳಿಕೆಯಾಗಿದೆ ದರಗಳಲ್ಲ!
PTI
ಭಾರತದ ವಾರ್ಷಿಕ ಹಣದುಬ್ಬರ ಆರು ವರ್ಷಗಳಷ್ಟು ಇಳಿಕೆ ಕಂಡರೂ ಯಾವುದೇ ದರಗಳಲ್ಲಿ ಇಳಿಕೆಯಾಗಿಲ್ಲ ಎನ್ನುವುದು ನವದೆಹಲಿಯ ನಿವಾಸಿಯಾದ ಗೃಹಿಣಿ ಅಲ್ಪನಾ ಸಿಂಗ್ ಅಕ್ರೋಶವಾಗಿದೆ.

ದಿನಸಿ ಅಂಗಡಿಯ ವಸ್ತುಗಳ ದರಗಳು ನಾಗಲೋಟದಲ್ಲಿ ಏರಿಕೆಯಾಗುತ್ತಿದ್ದು, ವಾರ್ಷಿಕ ಹಣದುಬ್ಬರ ಇಳಿಕೆಯಿಂದ ಪ್ರಯೋಜನವಾಗಿಲ್ಲ. ಮಗಳ ಶಾಲೆಯ ತೈಮಿಸಿಕ ಶುಲ್ಕವನ್ನು 8 ಸಾವಿರ ರೂಪಾಯಿಗಳಿಗೆ ಏರಿಸಲಾಗಿದೆ ಎಂದು ಕಿಡಿ ಕಾರಿದ್ದಾರೆ.

ಜಾಗತಿಕ ಆರ್ಥಿಕ ಕುಸಿತದಿಂದಾಗಿ ಪತಿಯ ವೇತನ ಕೂಡಾ ಕಡಿತವಾಗಿದ್ದು, ಕೇವಲ ನನ್ನ ವೇತನದಲ್ಲಿ ಗೃಹವೆಚ್ಚಗಳನ್ನು ನಿಭಾಯಿಸಬೇಕಾಗಿದ್ದು, ಕುಟುಬಂಕ್ಕಾಗಿ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾಳೆ.

ಕಳೆದ ವರ್ಷ ವಾರ್ಷಿಕ ಹಣದುಬ್ಬರ ಶೇ.12 ರಷ್ಟಿದ್ದಾಗ ಒಂದು ವರ್ಷದ ಹಿಂದೆ ದಿನಸಿ ಅಂಗಡಿಯ ವಸ್ತುಗಳಿಗಾಗಿ ಪ್ರತಿ ವಾರದಲ್ಲಿ 800 ರೂಪಾಯಿ ವೆಚ್ಚ ಮಾಡುತ್ತಿದ್ದೆ. ಆದರೆ ಹಣದುಬ್ಬರ ಶೇ.2.43ಕ್ಕೆ ಇಳಿಕೆಯಾಗಿದ್ದರೂ 1000 ರೂಪಾಯಿ ವೆಚ್ಚಮಾಡಬೇಕಾಗುತ್ತಿದೆ. ಅಂದರೆ ಹಣದುಬ್ಬರ ಏರಿಕೆಗೆ, ಇಳಿಕೆಗೆ ಏನು ವ್ಯತ್ಯಾಸ. ಹೊರಗಡೆ ತಿನ್ನುವುದನ್ನು ನಿಲ್ಲಿಸಲಾಗಿದ್ದು ವಾರಂತ್ಯದ ಪ್ರವಾಸವನ್ನು ರದ್ದುಗೊಳಿಸಿದ್ದೇವೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 28ಕ್ಕೆ ವಾರಂತ್ಯಗೊಂಡಂತೆ ಸಗಟು ಸೂಚ್ಯಂಕ ದರಗಳ ಆಧಾರದ ಮೇಲೆ ವಾರ್ಷಿಕ ಹಣದುಬ್ಬರ ಶೇ.2.43ಕ್ಕೆ ಇಳಿಕೆಯಾಗಿದ್ದರೂ ದೇಶದ ನಾಗರಿಕರಿಗೆ ದರ ಇಳಿಕೆಯ ವರ್ಗಾವಣೆಯಾಗಿಲ್ಲವೆನ್ನುವುದು ಅವರ ಆರೋಪವಾಗಿದೆ.

ಹಣದುಬ್ಬರ ಇಳಿಕೆಯಂದರೇ ಏರಿಕೆಯಾದ ದರಗಳು ಇಳಿಕೆಯಾಗುತ್ತವೆ ಎಂದರ್ಥ. ಆದರೆ ವಾಸ್ತವದ ದರಗಳಲ್ಲ ಎಂದು ಆರ್ಥಿಕ ತಜ್ಞರು ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಣದುಬ್ಬರ, ಇಳಿಕೆ ದರ
ಮತ್ತಷ್ಟು
ಪಿರಾಮಿಡ್ ಕಚೇರಿಯ ಮೇಲೆ ಆದಾಯ ತೆರಿಗೆ ದಾಳಿ
ದೇಶದ ಜಿಡಿಪಿ ದರ ಶೇ.6.1ಕ್ಕೆ ಇಳಿಕೆ:ಎಸ್‌ ಆಂಡ್ ಪಿ
ಜಿ-20 ಶೃಂಗಸಭೆ: ಪ್ರಧಾನಿ, ರಂಗರಾಜನ್ ಭೇಟಿ
ವಿದೇಶಿ ವಿನಿಮಯ ಸಂಗ್ರಹ ಕುಸಿತ
ಸಿಬಿಐ ವಶ: ನ್ಯಾಯಾಲಯದಿಂದ ರಾಜು ಅರ್ಜಿ ವಜಾ
ಅಲ್ಯುಮಿನಿಯಂ ಅಮದಿನ ಮೇಲೆ ಸುಂಕ