ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಐಬಿಎಂನಿಂದ ಸನ್ ಮೈಕ್ರೋಸಿಸ್ಟಮ್ಸ್ ಖರೀದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಬಿಎಂನಿಂದ ಸನ್ ಮೈಕ್ರೋಸಿಸ್ಟಮ್ಸ್ ಖರೀದಿ
ನ್ಯೂಯಾರ್ಕ್: ತಂತ್ರಜ್ಞಾನದ ದೈತ್ಯ ಐಬಿಎಂ ಇದೀಗ ಸನ್ ಮೈಕ್ರೋಸಿಸ್ಟಮ್ಸ್ ಸಂಸ್ಥೆ ಖರೀದಿ ಸಂಬಂಧ ಮಾತುಕತೆ ನಡೆಸುತ್ತಿದೆ. ಐಬಿಎಂ 6.5 ಬಿಲಿಯನ್ ಡಾಲರ್‌ಗಳಿಗೆ ಖರೀದಿಸುವ ಮಾತುಕತೆಯೂ ನಡೆದಿದೆ.

ಉನ್ನತ ಮೂಲಗಳ ಪ್ರಕಾರ, ಐಬಿಎಂ ಹಾಗೂ ಸನ್ ಮೈಕ್ರೋಸಿಸ್ಟಮ್ಸ್‌ ಈಗಾಗಲೇ ಈ ಕುರಿತು ಮಾತುಕತೆ ನಡೆಸಿದ್ದು, ಈ ಖರೀದಿ ಫಲಪ್ರದವಾದರೆ, ಕಂಪ್ಯೂಟರ್ ಸರ್ವರ್ ಮಾರುಕಟ್ಟೆಯಲ್ಲಿರುವ ಸ್ಪರ್ಧೆಗೆ ಇನ್ನಷ್ಟು ಬೆಂಬಲ ನೀಡಬಹುದು. ಅಲ್ಲದೆ, ಸನ್ ಮೈಕ್ರೋಸಿಸ್ಟಮ್ಸ್‌ನ ಷೇರುಗಳು ಶೇ,64ರಷ್ಟು ಜಿಗಿದಿದ್ದು, ಐಬಿಎಂನ ಷೇರುಗಳು ಶೇ.2ರಷ್ಟು ಕುಸಿದಿದೆ. ಈ ಮಾತುಕತೆ ಫಲಪ್ರದವಾದಲ್ಲಿ ಐಬಿಎಂಗೆ ಅತಿ ಹೆಚ್ಚು ಗಳಿಕೆ ತಂದುಕೊಡುವುದರಲ್ಲಿ ಸಂಶಯವಿಲ್ಲ.

ಐಬಿಎಂ ಸದ್ಯದ ಪರಿಸ್ಥಿತಿಯಲ್ಲಿ ಹಾರ್ಡ್‌ವೇರ್ ಅಭಿವೃದ್ಧಿಗಿಂತಲೂ ತನ್ನ ಸಾಫ್ಟ್‌ವೇರ್ ಹಾಗೂ ಬ್ಯುಸಿನೆಸ್ ಗಟ್ಟಿಗೊಳಿಸಿಕೊಳ್ಳುವತ್ತ ಹೆಚ್ಚಿನ ಲಕ್ಷ್ಯ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸನ್ ಮೈಕ್ರೋಸಿಸ್ಟಮ್ಸ್‌ ಜತೆಗೆ ಮಾತುಕತೆ ನಡೆದಿದೆ ಎನ್ನಲಾಗಿದೆ.

ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಐಟಿ ಉದ್ಯಮ ವಲಯದಲ್ಲಿ ಸಂಸ್ಥೆಗಳನ್ನು ಭದ್ರಗೊಳಿಸುವತ್ತ ಹೆಚ್ಚಿನ ನಿಗಾ ವಹಿಸುತ್ತಿರುವ ಟ್ರೆಂಡ್ ಈಗ ಶುರುವಾಗಿದ್ದು, ಹ್ಯೂಲೆಟ್ ಪ್ಯಾಕರ್ಡ್, ಐಬಿಎಂ, ಸಿಸ್ಕೋ ಸಿಸ್ಟಮ್ಸ್ ಮತ್ತಿತರ ಸಂಸ್ಥೆಗಳು ಇದೀಗ ಹೈ ಎಂಡ್ ಕಂಪ್ಯೂಟರ್‌ಗಳ ಪೂರೈಕೆಯಲ್ಲಿ ಮಾತ್ರವಲ್ಲದೆ, ತಮ್ಮ ನೆಟ್‌ವರ್ಕ್ ಗಟ್ಟಿಗೊಳಿಸುವತ್ತ ಸ್ಪರ್ಧೆ ಒಡ್ಡುತ್ತಿವೆ. ಕಳೆದ ಕೆಲವು ವರ್ಷಗಳ ಸಾಧನೆಯನ್ನು ಗಮನಿಸಿದರೆ ಸನ್ ಮೈಕ್ರೋಸಿಸ್ಟಮ್ಸ್ ಗಣನೀಯ ಸ್ಪರ್ಧೆಯನ್ನೇನೂ ಒಡ್ಡಿಲ್ಲ. ಆದರೆ, ಈ ಎರಡು ಸಂಸ್ಥೆಗಳ ಒಂದುಗೂಡುವಿಕೆಯಿಂದ ಐಟಿ ವಲಯದಲ್ಲಿ ಹೆಚ್ಚಿನ ಸ್ಪರ್ಧೆ ಹುಟ್ಟುವುದಂತೂ ನಿಜ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.

ಸನ್ ಮೈಕ್ರೋ ಸಿಸ್ಟಮ್ಸ್ ಆರ್ಥಿಕವಾಗಿ ಇನ್ನೂ ಪೂರ್ತಿಯಾಗಿ ಚೇತರಿಸಿಕೊಂಡಿಲ್ಲ. ಆದರೂ, ಅದು ತನ್ನ ಮಾರಾಟಕ್ಕೆ ತಯಾರಿತ್ತು. ಎಚ್‌ಪಿ ಕೂಡಾ ಸನ್ ಮೈಕ್ರೋಸಿಸ್ಟಮ್ಸ್ ‌ಕೊಳ್ಳಲು ಮಾತುಕತೆ ನಡೆಸಿತ್ತು. ಆದರೆ ಅದು ಫಲ ನೀಡಿರಲಿಲ್ಲ. ಇದೀಗ ಐಬಿಎಂ ಆ ಸ್ಥಾನ ಆಕ್ರಮಿಸಿದೆ. ಐಬಿಎಂ ಬಳಿ ಕಳೆದ 2008ರ ಕೊನೆಯಲ್ಲಿ 13 ಬಿಲಿಯನ್ ಡಾಲರ್‌ಗಳಷ್ಟು ಠೇವಣಿಯಿತ್ತು ಎಂದು ಬ್ಯಾಂಕ್ ಹೇಳಿಕೆ ನೀಡಿದೆ. ಆದರೆ ಈ ಬಗ್ಗೆ ಸನ್ ಮೈಕ್ರೋಸಿಸ್ಟಮ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ದಿ ವಾಲ್ ಸ್ಟ್ರೀಟ್ ಪತ್ರಿಕೆ ವರದಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್ : ರೂಪಾಯಿ ಮೌಲ್ಯ ಏರಿಕೆ
ದ್ವಿದಳ ಧಾನ್ಯ ರಫ್ತು ನಿಷೇಧ ಮುಂದೂಡಿಕೆ
ಭಾರತಕ್ಕೆಸಾಲ: ವಿಶ್ವಬ್ಯಾಂಕ್ ಅನುಮೋದನೆ
ನ್ಯಾನೋ ಗ್ರಾಹಕರಿಗೆ ಬಡ್ಡಿ ದರದ ಚಿಂತೆ
ಆರ್ಥಿಕ ಕುಸಿತದ ಸಂದರ್ಭ ಕತ್ತೆಗಳಿಗೊಂದು ಕಾಲ!
ಬಿಎಸ್‌ಎನ್‌ಎಲ್‌ನಿಂದ ಏಪ್ರಿಲ್‌ನಲ್ಲಿ ಬ್ಲ್ಯಾಕ್ ಬೆರ್ರಿ ಸೇವೆ ಆರಂಭ