ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ದೇಶದ ಜಿಡಿಪಿ ದರ ಶೇ.7.1ರಷ್ಟಾಗಲಿದೆ:ಬಾಲಕೃಷ್ಣನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇಶದ ಜಿಡಿಪಿ ದರ ಶೇ.7.1ರಷ್ಟಾಗಲಿದೆ:ಬಾಲಕೃಷ್ಣನ್
PTI
ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.6.25ಕ್ಕೆ ಇಳಿಕೆಯಾಗಲಿದೆ ಎನ್ನುವ ಹೇಳಿಕೆಯನ್ನು ತಳ್ಳಿಹಾಕಿದ ಅಪೆಕ್ಸ್ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಕೆ.ಜಿ ಬಾಲಕೃಷ್ಣನ್ ದೇಶದ ಜಿಡಿಪಿ ದರ ಶೇ.7.1 ರಷ್ಟಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಮುಂಬರುವ ಆರ್ಥಿಕ ಸಾಲಿನಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ.2 ರಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ. ಭಾರತ ನಿರೀಕ್ಷಿಸದಷ್ಟು ಆರ್ಥಿಕ ಅಭಿವೃದ್ಧಿ ಸಾಧಿಸದಿದ್ದರೂ ಐಎಂಎಫ್‌ ಹೇಳಿಕೆಯಂತೆ ಶೇ.6.25ಕ್ಕೆ ಇಳಿಕೆಯಾಗುತ್ತದೆ ಎಂದು ನಾನು ಭಾವಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ತಿಳಿಸಿದ್ದಾರೆ.

1947ರಲ್ಲಿ ಪಾಶ್ಚಾತ್ಯ ರಾಷ್ಟ್ರಗಳು ಭಾರತ ಸ್ವಾತಂತ್ಯದ ನಂತರ ಉತ್ತಮ ಆರ್ಥಿಕ ದೇಶವಾಗಿ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಆದರೆ ಭಾರತ ಇಂತಹ ಜಾಗತಿಕ ಆರ್ಥಿಕ ಕುಸಿತದ ಸಂದರ್ಭದಲ್ಲಿ ಕೂಡಾ ಉತ್ತಮ ಆರ್ಥಿಕತೆಯನ್ನು ಹೊಂದಿದ ದೇಶವಾಗಿದೆ ಎಂದು ಹೇಳಿದ್ದಾರೆ.

2008-09ರ ಆರ್ಥಿಕ ಸಾಲಿನಲ್ಲಿ ಕಾರ್ಪೋರೇಟ್ ಹೂಡಿಕೆಯಲ್ಲಿ ಕುಸಿತ ಹಾಗೂ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಭಾರತದ ಆರ್ಥಿಕತೆ ಶೇ.6.25ಕ್ಕೆ ಇಳಿಕೆಯಾಗಲಿದೆ ಎಂದು ಐಎಂಎಫ್‌ ಹೊರಡಿಸದ ಪ್ರಕಟಣೆಯಲ್ಲಿ ತಿಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಿಡಿಪಿ ದರ, ಬಾಲಕೃಷ್ಣನ್, ಐಎಂಎಫ್
ಮತ್ತಷ್ಟು
ಐಬಿಎಂನಿಂದ ಸನ್ ಮೈಕ್ರೋಸಿಸ್ಟಮ್ಸ್ ಖರೀದಿ
ಫಾರೆಕ್ಸ್ : ರೂಪಾಯಿ ಮೌಲ್ಯ ಏರಿಕೆ
ದ್ವಿದಳ ಧಾನ್ಯ ರಫ್ತು ನಿಷೇಧ ಮುಂದೂಡಿಕೆ
ಭಾರತಕ್ಕೆಸಾಲ: ವಿಶ್ವಬ್ಯಾಂಕ್ ಅನುಮೋದನೆ
ನ್ಯಾನೋ ಗ್ರಾಹಕರಿಗೆ ಬಡ್ಡಿ ದರದ ಚಿಂತೆ
ಆರ್ಥಿಕ ಕುಸಿತದ ಸಂದರ್ಭ ಕತ್ತೆಗಳಿಗೊಂದು ಕಾಲ!