ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಂಪೆನಿಗಳ ವರದಿ ಆರು ತಿಂಗಳಿಗೊಮ್ಮೆ ಸೂಕ್ತ:ಅಸೋಚಾಮ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಂಪೆನಿಗಳ ವರದಿ ಆರು ತಿಂಗಳಿಗೊಮ್ಮೆ ಸೂಕ್ತ:ಅಸೋಚಾಮ್
ದೇಶದ ಕಾರ್ಪೋರೇಟ್‌ ಸಂಸ್ಥೆಗಳಿಗೆ ತ್ರೈಮಾಸಿಕ ಫಲಿತಾಂಶ ವರದಿ ಘೋಷಣೆ ಎಡೆಬಿಡದ ವೆಚ್ಚವಾಗುತ್ತಿರುವುದರಿಂದ ಅದನ್ನು ತಪ್ಪಿಸಲು ವರ್ಷಕ್ಕೆ ಎರಡು ಬಾರಿ ಫಲಿತಾಂಶ ವರದಿಯನ್ನು ಘೋಷಿಸಲು ಅವಕಾಶ ನೀಡುವುದು ಉತ್ತಮವಾಗಿದೆ ಎಂದು ಸಮೀಕ್ಷಾ ಸಂಸ್ಥೆಯೊಂದು ವರದಿ ಮಾಡಿದೆ.

ದೇಶದ ಕಾರ್ಪೋರೇಟ್ ಕಂಪೆನಿಗಳ 400 ಮುಖ್ಯ ಕಾರ್ಯನಿರ್ವಾಹಕರನ್ನು ಸಂದರ್ಶಿಸಿದ ಕೈಗಾರಿಕೋದ್ಯಮ ಸಂಘಟನೆಯಾದ ಅಸೋಚಾಮ್, ಶೇರುಪೇಟೆ ನಿಯಂತ್ರಕ ಸಂಸ್ಥೆಯಾದ ಸೆಬಿಗೆ ಸಲ್ಲಿಸುತ್ತಿರುವ ತ್ರೈಮಾಸಿಕ ಫಲಿತಾಂಶ ಘೋಷಣೆಯನ್ನು ಕೈ ಬಿಡಬೇಕು ಎಂದು ಮನವಿ ಮಾಡಿದೆ.

ಮೂರು ತಿಂಗಳಿಗೊಮ್ಮೆ ಕಂಪೆನಿಯ ಫಲಿತಾಂಶ ವರದಿ ಘೋಷಣೆಯಿಂದಾಗಿ ಕಂಪೆನಿಗಳ ಮೇಲೆ ಹಾಗೂ ಉದ್ಯೋಗಿಗಳ ಮೇಲೆ ಅನಗತ್ಯ ಹೊರೆ ಬೀಳುತ್ತಿರುವುದರಿಂದ ಮೂರು ತಿಂಗಳಿಗೆ ಬದಲಾಗಿ ಆರು ತಿಂಗಳಿಗೊಮ್ಮೆ ಫಲಿತಾಂಶ ವರದಿ ಘೋಷಿಸಲು ಸೆಬಿ ಅನುಮತಿ ನೀಡಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಸೆಬಿ ಕಂಪೆನಿ ಲಾ ಬೋರ್ಡ್‌ನೊಂದಿಗೆ ಚರ್ಚಿಸಿ ಖಾಸಗಿ ಮತ್ತು ಕಾರ್ಪೋರೇಟ್ ಕಂಪೆನಿಗಳು ವರ್ಷದಲ್ಲಿ ಎರಡು ಬಾರಿ ಫಲಿತಾಂಶ ವರದಿ ಘೋಷಿಸಲು ಅನುಮತಿ ನೀಡಬೇಕು ಎಂದು ಅಸೋಚಾಮ್‌ನ ಪ್ರದಾನ ಕಾರ್ಯದರ್ಶಿ ಡಿ.ಎಸ್ ರಾವತ್ ಹೇಳಿದ್ದಾರೆ.

ಕಾರ್ಪೋರೇಟ್ ಕಂಪೆನಿಗಳಲ್ಲಿ ನಿಯಮಿತ ಉದ್ಯೋಗಿಗಳಿರುವುದರಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಫಲಿತಾಂಶದ ವರದಿಯನ್ನು ಸಿದ್ದಪಡಿಸಲು ಕಷ್ಟವಾಗುತ್ತಿದ್ದು, ಶೇರುದಾರರಿಗೆ ಕಂಪೆನಿಯ ಬೆಳವಣಿಗೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗದು ಎಂದು ರಾವತ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಂಪೆನಿ, ವರದಿ, ಅಸೋಚಾಮ್
ಮತ್ತಷ್ಟು
ದೇಶದ ಜಿಡಿಪಿ ದರ ಶೇ.7.1ರಷ್ಟಾಗಲಿದೆ:ಬಾಲಕೃಷ್ಣನ್
ಐಬಿಎಂನಿಂದ ಸನ್ ಮೈಕ್ರೋಸಿಸ್ಟಮ್ಸ್ ಖರೀದಿ
ಫಾರೆಕ್ಸ್ : ರೂಪಾಯಿ ಮೌಲ್ಯ ಏರಿಕೆ
ದ್ವಿದಳ ಧಾನ್ಯ ರಫ್ತು ನಿಷೇಧ ಮುಂದೂಡಿಕೆ
ಭಾರತಕ್ಕೆಸಾಲ: ವಿಶ್ವಬ್ಯಾಂಕ್ ಅನುಮೋದನೆ
ನ್ಯಾನೋ ಗ್ರಾಹಕರಿಗೆ ಬಡ್ಡಿ ದರದ ಚಿಂತೆ