ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನ್ಯಾನೋ ಪೂರೈಕೆಗೆ ಟಾಟಾ ಭಾರಿ ಹೋರಾಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾನೋ ಪೂರೈಕೆಗೆ ಟಾಟಾ ಭಾರಿ ಹೋರಾಟ
PTI
ನ್ಯಾನೋ ಕಾರುಗಳ ಉತ್ಪನ್ನಗಿಂತ ಹಲವು ಪಟ್ಟು ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕಂಪೆನಿ ಗ್ರಾಹಕರ ಬೇಡಿಕೆ ಪೂರೈಕೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದ ಮೂಲಗಳು ತಿಳಿಸಿವೆ.

ಇಂಜಿನಿಯರಿಂಗ್‌ನ ಅದ್ಭುತ ತಂತ್ರಜ್ಞಾನವನ್ನು ಹೊಂದಿದ ನ್ಯಾನೋ ಕಾರಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದಾಗಿ ನಾನು ಭಾವಿಸಿದ್ದೇನೆ ಎಂದು ಎರ್ನೆಸ್ಟ್ ಆಂಡ್ ಯಂಗ್‌ ಕಂಪೆನಿಯ ರಾಕೇಶ್ ಬಾತ್ರಾ ಹೇಳಿದ್ದಾರೆ.

ಮೂಲಗಳ ಪ್ರಕಾರ ಉತ್ತರಖಾಂಡ್‌ನಲ್ಲಿರುವ ಟಾಟಾ ಮೋಟಾರ್ಸ್‌ ಘಟಕದಿಂದ 2009-10ರ ಸಾಲಿನಲ್ಲಿ 50 ಸಾವಿರದಿಂದ 60 ಸಾವಿರ ಕಾರುಗಳ ತಯಾರಿಕೆ ಮಾತ್ರ ಸಾಧ್ಯವಾಗುತ್ತಿದ್ದು, ಗುಜರಾತ್‌ನ ಸನಂದ್‌‌ನಲ್ಲಿರುವ ಟಾಟಾ ಮೋಟಾರ್ಸ್ ಘಟಕ 2010ರಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿವೆ.

ಮಹಾರಾಷ್ಟ್ರದ ಪುಣೆಯಲ್ಲಿರುವ ಘಟಕದಿಂದ ಮಧ್ಯಂತರ ಸಮಯದಲ್ಲಿ ಹೆಚ್ಚುವರಿ ಅಗತ್ಯತೆಗಳನ್ನು ಮಾತ್ರ ಪೂರೈಸಲು ಸಾಧ್ಯವಾಗುತ್ತದೆ. ಆದರೆ ವಿದೇಶಗಳಿಗೆ ನ್ಯಾನೋ ಕಾರುಗಳನ್ನು ರಫ್ತು ಮಾಡಲು ಸಾಧ್ಯವಾಗದು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಚ್ಚಾ ವಸ್ತುಗಳ ದರಗಳ ತೊಳಲಾಟದ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ ನ್ಯಾನೋ ಕಾರಿಗೆ ಒಂದು ಲಕ್ಷ ದರವನ್ನು ನಿರಂತರ ಕಾಯ್ದುಕೊಂಡು ಬರಲು ಸಾಧ್ಯವಾಗುತ್ತದೆಯೇ? ಎನ್ನುವ ಪ್ರಶ್ನೆ ಉದ್ಯಮಿಗಳನ್ನು ಕಾಡುತ್ತಿದೆ.

ಸುರಕ್ಷೆತೆಯಲ್ಲಿ ರಾಜಿಯಿಲ್ಲದೇ ಸೂಕ್ತ ದರದಲ್ಲಿ ಕಾರು ತಯಾರಿಸಬೇಕಾಗುತ್ತದೆ.ಮುಂಬರುವ ಕೆಲ ವರ್ಷಗಳವರೆಗೆ ನಿರಂತರ ದರದ ಸ್ಥಿರತೆಯನ್ನು ಕಾಪಾಡಿಕೊಂಡು ಬರುವುದು ಕಠಿಣವಾಗಿದೆ ಎಂದು ಬಿಜಿನೆಸ್ ಸ್ಟ್ಯಾಂಡರ್ಡ್ ಸಂಪಾದಕ ಬಿಜೊಯ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನ್ಯಾನೋ, ಟಾಟಾ, ಹೋರಾಟ
ಮತ್ತಷ್ಟು
ಐತಿಹಾಸಿಕ ಇಳಿಕೆ ಕಂಡ ಹಣದುಬ್ಬರ
ಕಂಪೆನಿಗಳ ವರದಿ ಆರು ತಿಂಗಳಿಗೊಮ್ಮೆ ಸೂಕ್ತ:ಅಸೋಚಾಮ್
ದೇಶದ ಜಿಡಿಪಿ ದರ ಶೇ.7.1ರಷ್ಟಾಗಲಿದೆ:ಬಾಲಕೃಷ್ಣನ್
ಐಬಿಎಂನಿಂದ ಸನ್ ಮೈಕ್ರೋಸಿಸ್ಟಮ್ಸ್ ಖರೀದಿ
ಫಾರೆಕ್ಸ್ : ರೂಪಾಯಿ ಮೌಲ್ಯ ಏರಿಕೆ
ದ್ವಿದಳ ಧಾನ್ಯ ರಫ್ತು ನಿಷೇಧ ಮುಂದೂಡಿಕೆ