ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತದ ಜವಳಿ ರಫ್ತು ಉದ್ಯಮ ನೀರಸ:ಸಿಂಗ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದ ಜವಳಿ ರಫ್ತು ಉದ್ಯಮ ನೀರಸ:ಸಿಂಗ್
ಭಾರತದ ಜವಳಿ ರಫ್ತು ವಹಿವಾಟು ಮಾರ್ಚ್ 2009ಕ್ಕೆ ಅಂತ್ಯಗೊಂಡಂತೆ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಸಂಪೂರ್ಣ ನೀರಸವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಜವಳಿ ರಫ್ತು ವಹಿವಾಟು 22-23 ಬಿಲಿಯನ್ ಡಾಲರ್‌ಗಲಾಗಿದ್ದು, ಪ್ರಸಕ್ತ ವರ್ಷ ಕೂಡಾ 22-23 ಬಿಲಿಯನ್ ಡಾಲರ್ ರಫ್ತು ವಹಿವಾಟು ನಡೆಸಲಾಗಿದೆ ಎಂದು ಜವಳಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಜೆ.ಎನ್‌.ಸಿಂಗ್ ಹೇಳಿದ್ದಾರೆ.

ಕೇಂದ್ರ ಸರಕಾರದ ಅಂಕಿ ಅಂಶಗಳ ಪ್ರಕಾರ ಭಾರತದ ಒಟ್ಟು ಜವಳಿ ರಫ್ತು ವಹಿವಾಟು ಮಾರ್ಚ್ 2008ಕ್ಕೆ ಅಂತ್ಯಗೊಂಡಂತೆ 22ಬಿಲಿಯನ್ ಡಾಲರ್‌ಗೆ ದಾಖಲಾಗಿದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ.

ಕಳೆದ ವರ್ಷದ ಅಕ್ಟೋಬರ್-ಡಿಸೆಂಬರ್ ತಿಂಗಳಿಗೆ ಹೋಲಿಸಿದಲ್ಲಿ 3 ಲಕ್ಷ ದಿಂದ ನಾಲ್ಕು ಲಕ್ಷದವರೆಗೆ ಹುದ್ದೆಗಳನ್ನು ಸೃಷ್ಟಿಸಲಾಗಿತ್ತು. ಆದರೆ ಮಾರ್ಚ್2009ರ ಅಂತ್ಯದ ವೇಳೆಗೆ ಶೇ.0.92 ರಷ್ಟು ಉದ್ಯೋಗಿಗಳು ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

ದೇಶದ ಜವಳಿ ಕ್ಷೇತ್ರದ ಉದ್ಯಮದಲ್ಲಿ ಅಂದಾಜು 33 ಮಿಲಿಯನ್ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಜಂಟಿ ಕಾರ್ಯದರ್ಶಿ ಸಿಂಗ್ ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜವಳಿ, ರಫ್ತು ಉದ್ಯಮ, ಸಿಂಗ್
ಮತ್ತಷ್ಟು
ನ್ಯಾನೋ ಪೂರೈಕೆಗೆ ಟಾಟಾ ಭಾರಿ ಹೋರಾಟ
ಐತಿಹಾಸಿಕ ಇಳಿಕೆ ಕಂಡ ಹಣದುಬ್ಬರ
ಕಂಪೆನಿಗಳ ವರದಿ ಆರು ತಿಂಗಳಿಗೊಮ್ಮೆ ಸೂಕ್ತ:ಅಸೋಚಾಮ್
ದೇಶದ ಜಿಡಿಪಿ ದರ ಶೇ.7.1ರಷ್ಟಾಗಲಿದೆ:ಬಾಲಕೃಷ್ಣನ್
ಐಬಿಎಂನಿಂದ ಸನ್ ಮೈಕ್ರೋಸಿಸ್ಟಮ್ಸ್ ಖರೀದಿ
ಫಾರೆಕ್ಸ್ : ರೂಪಾಯಿ ಮೌಲ್ಯ ಏರಿಕೆ