ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ಕುಸಿತ ಕಳವಳಕಾರಿ:ಚೇಂಬರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಕುಸಿತ ಕಳವಳಕಾರಿ:ಚೇಂಬರ್
PTI
ಕಳೆದ ಎರಡು ದಶಕಗಳಲ್ಲಿ ಮೊಟ್ಟಮೊದಲ ಬಾರಿಗೆ ಮಾರ್ಚ್ 7ಕ್ಕೆ ವಾರಂತ್ಯಗೊಂಡಂತೆ ಹಣದುಬ್ಬರ ಶೇ.0.44ಕ್ಕೆ ಐತಿಹಾಸಿಕ ಇಳಿಕೆ ಕಂಡಿರುವುದಕ್ಕೆ ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಕಳವಳ ವ್ಯಕ್ತಪಡಿಸಿದೆ.

ಹಣದುಬ್ಬರ ವೇಗವಾಗಿ ಇಳಿಕೆಯಾಗುವುದು ಸಂತೋಷದ ಸಂಗತಿಯಲ್ಲ. ಬಳಕೆಯ ಪ್ರಮಾಣ ಕುಂಠಿತಗೊಂಡಿದ್ದರಿಂದ ಆರ್ಥಿಕತೆಯ ಕುಸಿತದ ಸಂಕೇತವಾಗಿದೆ ಎಂದು ಚೇಂಬರ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

2009ರ ಫೆಬ್ರವರಿ 28ಕ್ಕೆ ವಾರಂತ್ಯಗೊಂಡಂತೆ ಹಣದುಬ್ಬರ ದರ ಶೇ.2.43 ರಷ್ಟು ದಾಖಲಾಗಿದ್ದು, ಕೇವಲ ಒಂದು ವಾರದ ಅವಧಿಯಲ್ಲಿ ಸಗಟು ಸೂಚ್ಯಂಕ ದರ ಶೇ.2 ರಷ್ಟು ಕುಸಿತ ಕಂಡಿದೆ. ಅಗತ್ಯ ವಸ್ತುಗಳು ಹಾಗೂ ಇಂಧನ ದರ ಮತ್ತು ಉತ್ಪಾದಕ ವಸ್ತುಗಳ ದರಗಳು ಇಳಿಕೆಯಾದಲ್ಲಿ, ಹಣದುಬ್ಬರ ಇದೇ ವೇಗದಲ್ಲಿ ಇಳಿಕೆಯತ್ತ ಸಾಗಿ ಮಾಸಾಂತ್ಯದ ವೇಳೆಗೆ ಋಣಾತ್ಮಕ ವಲಯವನ್ನು ಪ್ರವೇಶಿಸಲಿದೆ ಎಂದು ಚೇಂಬರ್ ಆತಂಕ ವ್ಯಕ್ತಪಡಿಸಿದೆ.

ಇಂಧನ ಹಾಗೂ ಅಗತ್ಯ ವಸ್ತುಗಳ ದರ ಕುಸಿತದಿಂದಾಗಿ ಕಾರ್ಪೋರೇಟ್ ವಲಯಕ್ಕೆ ಲಾಭವಾಗಲಿದ್ದು, ಜಾಗತಿಕ ಆರ್ಥಿಕ ಕುಸಿತದಿಂದಾಗಿ ವೆಚ್ಚ ಕಡಿತದತ್ತ ಸಾಗುತ್ತಿರುವ ಕಂಪೆನಿಗಳಿಗೆ ಅನುಕೂಲವಾಗಲಿದೆ ಎಂದು ಚೇಂಬರ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಹಣದುಬ್ಬರ ಕುಸಿತ ಮುಂದುವರಿದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ ಮತ್ತಷ್ಟು ಬಡ್ಡಿ ದರಗಳನ್ನು ಕಡಿತಗೊಳಿಸುವುದರಿಂದ ಸಾಲದ ಸುಳಿಯಲ್ಲಿ ಸಿಲುಕಿರುವ ಉದ್ಯಮಗಳಿಗೆ ತುಂಬಾ ಲಾಭವಾಗುತ್ತದೆ ಎಂದು ಚೇಂಬರ್ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಣದುಬ್ಬರ, ಕುಸಿತ, ಕಳವಳ, ಚೇಂಬರ್
ಮತ್ತಷ್ಟು
ಭಾರತದ ಜವಳಿ ರಫ್ತು ಉದ್ಯಮ ನೀರಸ:ಸಿಂಗ್
ನ್ಯಾನೋ ಪೂರೈಕೆಗೆ ಟಾಟಾ ಭಾರಿ ಹೋರಾಟ
ಐತಿಹಾಸಿಕ ಇಳಿಕೆ ಕಂಡ ಹಣದುಬ್ಬರ
ಕಂಪೆನಿಗಳ ವರದಿ ಆರು ತಿಂಗಳಿಗೊಮ್ಮೆ ಸೂಕ್ತ:ಅಸೋಚಾಮ್
ದೇಶದ ಜಿಡಿಪಿ ದರ ಶೇ.7.1ರಷ್ಟಾಗಲಿದೆ:ಬಾಲಕೃಷ್ಣನ್
ಐಬಿಎಂನಿಂದ ಸನ್ ಮೈಕ್ರೋಸಿಸ್ಟಮ್ಸ್ ಖರೀದಿ