ಮಾರ್ಚ್ 28ಕ್ಕೆ ಕೊನೆಗೊಂಡ ವಾರದಲ್ಲಿ ಹಣದುಬ್ಬರ ದರವು ಶೇ.0.26ಕ್ಕೆ ಇಳಿಕೆಗೊಂಡಿದ್ದು, ಇದು ಕಳೆದ ಮೂರು ದಶಕಗಳಲ್ಲೇ ದಾಖಲಾಗಿರುವ ಕನಿಷ್ಠ ದರವಾಗಿದೆ. ಇದರ ಹಿಂದಿನ ವಾರದಲ್ಲಿ ಹಣದುಬ್ಬರವು ಶೇ.0.31ರಷ್ಟು ದಾಖಲಾಗಿತ್ತು. ಈ ದರದಲ್ಲಿ ಶೇ.0.05ರಷ್ಟು ಇಳಿಕೆಯಾಗಿದೆ.
ಖನಿಜ ಉತ್ಪಾದನೆಗಳಲ್ಲಿ ಶೇ. 11.8ರಷ್ಟು, ಕಬ್ಬಿಣದ ಅದಿರಿನಲ್ಲಿ ಶೇ. 14, ಮತ್ತು ಕ್ರೋಮೈಟ್‌ನಲ್ಲಿ ಶೇ.2ರಷ್ಟು ಇಳಿಕೆ ದಾಖಲಾಗಿದೆ.
ಇದೇವೇಳೆ ಚಹದಂತಹ ಆಹಾರ ಪದಾರ್ಥಗಳ ಬೆಲೆಯಲ್ಲೂ ಇಳಿಕೆ ಕಂಡಿದೆ. ಇಂಧನ ಸೂಚ್ಯಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದು ಕಳೆದ ವಾರದ ಮಟ್ಟದಲ್ಲೇ ಇದೆ. |