ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂಗೆ 160 ಕೋಟಿ ರೂಪಾಯಿ ನಿವ್ವಳ ಲಾಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂಗೆ 160 ಕೋಟಿ ರೂಪಾಯಿ ನಿವ್ವಳ ಲಾಭ
PTI
ವಂಚನೆ ಪೀಡಿತ ಸತ್ಯಂ ಕಂಪ್ಯೂಟರ್,2008ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ 160 ಕೋಟಿ ರೂಪಾಯಿ ನಿವ್ವಳ ಲಾಭವಾಗಿದೆ ಎಂದು ಸತ್ಯಂ ಮೂಲಗಳು ತಿಳಿಸಿವೆ.

ಸತ್ಯಂ ವಹಿವಾಟಿನಲ್ಲಿ ಕುಸಿತವಾಗಿರಬಹುದು. ಆದರೆ ನಿರ್ಗಮಿಸಿಲ್ಲ. ನೂತನ ಮಾಲೀಕತ್ವ ಟೆಕ್ ಮಹೀಂದ್ರಾ ಆಧೀನದಲ್ಲಿ ಬಲವಾಗಿ ಹೊರಹೊಮ್ಮಿ ಮರಳಿ ಖ್ಯಾತಿ ಪಡೆಯುವ ಬಗ್ಗೆ ವಿಶ್ವಾಸ ಮೂಡಿಸಿದೆ ಎಂದು ಸತ್ಯಂ ಮೂಲಗಳು ತಿಳಿಸಿವೆ.

ಸತ್ಯಂ ಸಂಸ್ಥಾಪಕ ರಾಮಲಿಂಗಾರಾಜು ಎಸಗಿದ 10 ಸಾವಿರ ಕೋಟಿ ರೂಪಾಯಿಗಳ ವಂಚನೆಯಿಂದಾಗಿ ಕಂಗಾಲಾಗಿದ್ದ ಸತ್ಯಂ ಸಂಸ್ಥೆ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ 38 ಮಿಲಿಯನ್ ಡಾಲರ್‌ ನಿವ್ವಳ ಲಾಭಗಳಿಸಿದೆ.ಜನೆವರಿಯಲ್ಲಿ ನಾಲ್ಕು ಕೋಟಿ ರೂಪಾಯಿ ಲಾಭಗಳಿಸಿದ ಸತ್ಯಂ, ಫೆಬ್ರವರಿ ತಿಂಗಳಲ್ಲಿ 23 ಪ್ರಮುಖ ಗ್ರಾಹಕರನ್ನು ಕಳೆದುಕೊಂಡ ನಂತರವೂ 52 ಕೋಟಿ ರೂ ಲಾಭಗಳಿಕೆಯನ್ನು ಹೆಚ್ಚಿಸಿಕೊಂಡಿತ್ತು.

ಅಕ್ಟೋಬರ್ -ಡಿಸೆಂಬರ್ 2008ರ ಮೂರು ತಿಂಗಳ ಅವಧಿಯಲ್ಲಿ ಅವನತಿಯ ಅಂಚಿನಲ್ಲಿದ್ದ ಸತ್ಯಂ, ಕ್ರೂಢೀಕೃತ ನಿವ್ವಳ ಲಾಭವನ್ನು 160.50 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿಕೊಂಡು ಒಟ್ಟು ಆದಾಯ 2,327.21 ಕೋಟಿ ರೂಪಾಯಿಗಳಿಗೆ ತಲುಪಿದೆ.

ಮಹೀಂದ್ರಾ ಆಂಡ್ ಮಹೀಂದ್ರಾ ಕಂಪೆನಿಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಟೆಕ್ ಮಹೀಂದ್ರಾ , ಸತ್ಯಂನ 5,800 ಕೋಟಿ ರೂಪಾಯಿಗಳ ಮೌಲ್ಯದ ಶೇರುಗಳನ್ನು ಸ್ವಾಧೀನಪಡಿಸಿಕೊಂಡ ಕೇವಲ ಒಂದು ತಿಂಗಳ ಅವಧಿಯೊಳಗಾಗಿ ಸತ್ಯಂ ಕಂಪ್ಯೂಟರ್ ಸಂಸ್ಥೆ ಲಾಭದತ್ತ ಸಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
2015ರ ವೇಳೆಗೆ ಇ-ವಾಹನಗಳ ಉತ್ಪಾದನೆ:ಬಿಎಂಡಬ್ಲೂ
ಬಡ್ಡಿ ದರ ಕಡಿತ: ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಪ್ರಣಬ್ ಭೇಟಿ
ಭಾರತೀಯ ರೈಲ್ವೆಗೆ ಏಷ್ಯಾ -ಯುರೋಪ್ ರಾಷ್ಟ್ರಗಳ ಸಂಪರ್ಕ
ಏರ್‌ಟೆಲ್‌ಗೆ "ಬೆಸ್ಟ್ ಆಫ್‌ ದಿ ಬೆಸ್ಟ್ " ಪ್ರಶಸ್ತಿ
ಎಸ್‌ಬಿಐನಿಂದ 13 ಸಾವಿರ ನೌಕರರ ನೇಮಕ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ