ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸಾಲದ ಬಡ್ಡಿದರ ಮತ್ತಷ್ಟು ಅಗ್ಗಗೊಳಿಸಿ: ಪ್ರಣಬ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಲದ ಬಡ್ಡಿದರ ಮತ್ತಷ್ಟು ಅಗ್ಗಗೊಳಿಸಿ: ಪ್ರಣಬ್
ಎರಡನೇ ಬಾರಿ ಅಧಿಕಾರದ ಗದ್ದುಗೆಗೆ ಏರಿರುವ ಯುಪಿಎ ಸರ್ಕಾರ ಆರ್ಥಿಕ ಚೇತರಿಕೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿರುವ ಹಿನ್ನೆಲೆ ಶೀಘ್ರವೇ ದೇಶದ ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳಲ್ಲಿ ಗೃಹ ಸಾಲ ಸೇರಿದಂತೆ ಇನ್ನಿತರ ಸಾಲಗಳಲ್ಲಿನ ಬಡ್ಡಿದರ ಕಡಿತಗೊಳಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿದ್ದು, ಸಾಲದ ಬಡ್ಡಿದರ ಮತ್ತಷ್ಟು ಅಗ್ಗವಾಗುವ ನಿರೀಕ್ಷೆ ಹೊಂದಲಾಗಿದೆ.

ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳಲ್ಲಿ ಸಾಲದ ಬಡ್ಡಿದರವನ್ನು ಮತ್ತಷ್ಟು ಕಡಿತಗೊಳಿಸುವ ಮೂಲಕ ಸಾಲಮೇಳ ಮತ್ತಷ್ಟು ಜನಸ್ನೇಹಿಯಾಗಲಿದೆ ಎಂದು ಎಸ್‌ಬಿಐ ವಿಶ್ವಾಸ ವ್ಯಕ್ತಪಡಿಸಿದೆ.

ಈ ತಿಂಗಳ ಅಂತ್ಯದಲ್ಲಿ ನಮ್ಮ ಬ್ಯಾಂಕ್ ಬಡ್ಡಿದರವನ್ನು ಕಡಿತಗೊಳಿಸುವ ಬಗ್ಗೆ ನಿರ್ಧಾರ ಕೈಗೊಂಡಿರುವುದಾಗಿ ಎಂದು ದೇಶದ ಪ್ರತಿಷ್ಠಿತ ಬ್ಯಾಂಕ್ ಆಗಿರುವ ಎಸ್‌ಬಿಐ ಚೇಯರ್‌ಮನ್ ಓ.ಪಿ.ಭಟ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಅವರು ಪಿಎಸ್‌ಯು ಬ್ಯಾಂಕ್ ವರಿಷ್ಠರು ಮತ್ತು ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರೊಂದಿಗಿನ ಮಾತುಕತೆಯ ಬಳಿಕ ಈ ವಿಷಯವನ್ನು ಪ್ರಸ್ತಾಪಿಸಿದರು.

ದೇಶಿಯ ಬ್ಯಾಂಕ್‌ಗಳು ಸಾಲವನ್ನು ಆದಷ್ಟು ಕಡಿಮೆ ಬಡ್ಡಿದರದಲ್ಲಿ ಒದಗಿಸಬೇಕು ಎಂದು ಪ್ರಣಬ್ ಮುಖರ್ಜಿ ಸಭೆಯಲ್ಲಿ ಹೆಚ್ಚಿನ ಒತ್ತು ನೀಡಿ ಅಭಿಪ್ರಾಯ ವ್ಯಕ್ತಪಡಿಸಿ, ಬ್ಯಾಂಕ್‌ಗಳಿಗೆ ಮನವಿ ಮಾಡಿಕೊಂಡರು. ಇದರಿಂದಾಗಿ ಗ್ರಾಹಕರಿಗೂ ಹಾಗೂ ಬ್ಯಾಂಕ್‌ಗಳ ವಹಿವಾಟಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾರೇಖ್‌ ಹಗರಣದಲ್ಲಿ ಸತ್ಯಂ ಪಾತ್ರ ಕುರಿತು ತನಿಖೆ
ಸ್ಯಾಮ್‌ಸಾಂಗ್‌ನಿಂದ ಸೋಲಾರ್‌ ಫೋನ್ ಬಿಡುಗಡೆ
ಇನ್ಫೋಸಿಸ್‌ಗೆ 355 ಮಿಲಿಯನ್ ಡಾಲರ್ ಗುತ್ತಿಗೆ
ಸತ್ಯಂಗೆ 160 ಕೋಟಿ ರೂಪಾಯಿ ನಿವ್ವಳ ಲಾಭ
2015ರ ವೇಳೆಗೆ ಇ-ವಾಹನಗಳ ಉತ್ಪಾದನೆ:ಬಿಎಂಡಬ್ಲೂ
ಬಡ್ಡಿ ದರ ಕಡಿತ: ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಪ್ರಣಬ್ ಭೇಟಿ