ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪರಿಸ್ಥಿತಿ ಸುಧಾರಿಸದಿದ್ದರೆ ಜಾಬ್ ಕಟ್: ಸತ್ಯಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರಿಸ್ಥಿತಿ ಸುಧಾರಿಸದಿದ್ದರೆ ಜಾಬ್ ಕಟ್: ಸತ್ಯಂ
ಕಂಪನಿಯು ಮುಂದಿನ ಆರು ತಿಂಗಳಲ್ಲಿ ಚೇತರಿಸಿಕೊಳ್ಳದಿದ್ದರೆ ಸತ್ಯಂ ಕಂಪ್ಯೂಟರ್ಸ್ ಲಿಮಿಟೆಟ್‌ನ 8,500 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗುವುದು ಎಂದು ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿನೀತ್ ನಯ್ಯರ್ ತಿಳಿಸಿದ್ದು, ಮತ್ತೆ ನೌಕರರಲ್ಲಿ ಅತಂತ್ರತೆ ಆವರಿಸಿದೆ.

"ಹಾಗೆ ಆಗುವುದಿಲ್ಲ ಎಂಬ ಬಗ್ಗೆ ನಮ್ಮಲ್ಲಿ ಭರವಸೆಯಿದೆ. ಎಲ್ಲವೂ ಸರಿಯಾಗಬಹುದು. ಆದರೆ ಅಂತಹ ಸಾಧ್ಯತೆಯೂ ಇದೆ" ಎಂದು ಕಂಪನಿಯ ಸ್ಥಿತಿಯ ಬಗ್ಗೆ ಸತ್ಯಂನ ಹೊಸ ಮಾಲಕ ಟೆಕ್ ಮಹೀಂದ್ರಾ ಲಿಮಿಟೆಡ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಯ್ಯರ್ ವಿಶ್ಲೇಷಣೆ ನಡೆಸುತ್ತಾ ವಿವರಿಸಿದ್ದಾರೆ.

ಈಗಿರುವ ಗ್ರಾಹಕರನ್ನು ಉಳಿಸಿಕೊಳ್ಳಲು ಸಹಕಾರಿಯೆನಿಸುವ ಮತ್ತು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸುವುದಕ್ಕೋಸ್ಕರ ಕಂಪನಿಯು ಹೊಸ ಮರುಸಂಘಟಿತ ಯೋಜನೆಯೊಂದನ್ನು ಜಾರಿಗೆ ತರಲಿದೆ ಎಂದೂ ಅವರು ತಿಳಿಸಿದ್ದಾರೆ.

ಸತ್ಯಂನ ಸ್ಥಾಪಕ ರಾಮಲಿಂಗರಾಜು ಅವರು ಕೋಟಿಗಟ್ಟಲೆ ಅವ್ಯವಹಾರ ನಡೆಸಿದ್ದು ಜನವರಿಯಲ್ಲಿ ಬಹಿರಂಗವಾದ ನಂತರ ಮಾರುಕಟ್ಟೆಯಲ್ಲಿ ಕಂಪನಿಯ ಸ್ಥಿತಿ ಡೋಲಾಯಮಾನವಾಗಿತ್ತು. ಅದನ್ನು ವೃದ್ಧಿಸುವತ್ತ ಹೊಸ ಮಾಲಕರು ಗಮನ ಕೇಂದ್ರೀಕರಿಸುತ್ತಿದ್ದಾರೆ.

ಟೆಕ್ ಮಹೀಂದ್ರಾವು ಸತ್ಯಂ ಕಂಪನಿಯನ್ನು ಸ್ವಾಧೀನಪಡಿಸುವ ಹೊತ್ತಿನಲ್ಲಿ 48,000 ಉದ್ಯೋಗಿಗಳಿದ್ದರು. ಕಂಪನಿಗೆ ಸಾಕಷ್ಟು ಆರ್ಡರ್‌ಗಳು ಬರುತ್ತಿಲ್ಲವಾದ ಕಾರಣ ಇದೀಗ 8,500 ಉದ್ಯೋಗಿಗಳನ್ನು ಹೆಚ್ಚುವರಿ ಎಂದು ಪರಿಗಣಿಸಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏರ್ ಇಂಡಿಯಾ ಬಿಕ್ಕಟ್ಟಿಗೀಗ ರಾಜಕೀಯ ಬಣ್ಣ..!
ಕರ್ನಾಟಕ ಸರಕಾರದಿಂದ ಸೌರಶಕ್ತಿ ಸ್ಥಾವರ ಯೋಜನೆ
ಹಣದುಬ್ಬರ ದರ ಏರಿಕೆ
'ಟಾಟಾ'ದಿಂದಲೂ ಜಿಎಸ್‌ಎಂ ಮೊಬೈಲ್ ಸೇವೆ
ಎಸ್‌ಬಿಐನಿಂದ ಬಡ್ಡಿ ದರ ಕಡಿತ: ಗೃಹ, ಕಾರು ಸಾಲ ಅಗ್ಗ
ಸರಕಾರಿ ಕಚೇರಿಗಳಲ್ಲಿ ಏರ್‌-ಕಂಡೀಶನರ್‌ ಉಪಯೋಗ ನಿಷೇಧ