ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇದು ತಮಾಷೆಯಲ್ಲ; ಮೂತ್ರದಿಂದ ಕಾರು ಓಡುತ್ತೆ..!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇದು ತಮಾಷೆಯಲ್ಲ; ಮೂತ್ರದಿಂದ ಕಾರು ಓಡುತ್ತೆ..!
ಕಾರಲ್ಲಿ ಪೆಟ್ರೋಲ್ ಖಾಲಿಯಾದ್ರೆ ಟ್ಯಾಂಕ್‌ಗೆ ಮೂತ್ರ ಮಾಡಯ್ಯ ಎಂದು ತಮಾಷೆ ಮಾಡಿದ್ದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ವಿಜ್ಞಾನಿಗಳ ಪ್ರಕಾರ ಅದು ನಿಜವಾಗಿ ಬಿಡುವ ದಿನಗಳು ಬಹಳ ದೂರವಿಲ್ಲ.

ಹೌದು.. ಜಲಜನಕದಿಂದ ಚಲಿಸುವ ಕಾರುಗಳಲ್ಲಿ ಮೂತ್ರವನ್ನೂ ಬಳಕೆ ಮಾಡುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಮೂತ್ರದಿಂದ ಹೈಡ್ರೋಜನ್ ಉತ್ಪತ್ತಿ ಮಾಡುವ ಮೂಲಕ ಕಾರನ್ನು ಓಡಿಸಬಹುದು ಎಂಬುದೀಗ ವಿಜ್ಞಾನಿಗಳ ವಾದ.

ಸಂಶೋಧನೆಯ ಆರಂಭಿಕ ಹಂತದಲ್ಲಿ ಕೃತಕ ಮೂತ್ರ ಬಳಸಿ ಪ್ರಯೋಗ ಮಾಡಲಾಗಿದೆ. ಇದು ಮಾನವನ ನೈಜ ಮೂತ್ರದಂತೆಯೇ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಅತ್ಯುತ್ತಮ ಫಲಿತಾಂಶ ಪಡೆದಿದ್ದೇವೆ ಎಂದು ಡಾ. ಗೆರಾರ್ಡಿನ್ ಬಾಟ್ ತಿಳಿಸಿದ್ದಾರೆ.

ಈ ರೀತಿ ಮೂತ್ರವನ್ನು ಇಂಧನವಾಗಿ ಪರಿವರ್ತಿಸುವುದರಿಂದ ಕಾರು ಓಡಿಸಲು ಸಾಧ್ಯವಾಗುವುದು ಮಾತ್ರವಲ್ಲ, ಜತೆಗೆ ವಾತಾವರಣ ಕಲುಷಿತಗೊಳ್ಳುವುದು ಕೂಡ ತಪ್ಪಲಿದೆ ಎಂದು ಅಮೆರಿಕಾದ ಓಹಿಯೋ ವಿಶ್ವವಿದ್ಯಾಲಯದ ಬಾಟ್ ಅಭಿಪ್ರಾಯಪಟ್ಟಿದ್ದಾರೆ.

ಬಾಟೆಯವರ ಪ್ರಕಾರ ನೀರಿನಿಂದ ಜಲಜನಕ ಪಡೆಯುವುದಕ್ಕಿಂತ ಮೂತ್ರವನ್ನು ಹೈಡ್ರೋಜನ್ ಆಗಿ ಪರಿವರ್ತಿಸುವುದು ಸುಲಭ ಮತ್ತು ಖರ್ಚು ಕಡಿಮೆ.

ನೀರಿನಿಂದ ಆಮ್ಲಜನಕ ಮತ್ತು ಜಲಜನಕವನ್ನು ಬೇರ್ಪಡಿಸುವ ಕಾರ್ಯವನ್ನು ಎಲೆಕ್ಟ್ರೋಲಿಸಿಸ್ ಎಂದು ಕರೆಯಲಾಗುತ್ತದೆ. ನೀರನ್ನು ಈ ರೀತಿ ವಿಭಾಗಿಸಲು ಬೇಕಾದ ಸಾಮರ್ಥ್ಯ, ವೆಚ್ಚ ಮತ್ತು ವಸ್ತುಗಳು ಹೆಚ್ಚು ಮತ್ತು ದುಬಾರಿ ಎಂಬುವುದು ಇಲ್ಲಿರುವ ಪ್ರಮುಖ ಸಮಸ್ಯೆ.

ಆದರೆ ಮೂತ್ರದಿಂದ ಜಲಜನಕವನ್ನು ಬೇರ್ಪಡಿಸುವುದು ಸುಲಭ. ನೀರಿನಲ್ಲಿರುವ ಹೈಡ್ರೋಜನ್‌ಗಿಂತ ಮೂತ್ರದಲ್ಲಿನ ಹೈಡ್ರೋಜನ್ ಸ್ವತಂತ್ರವಾಗಿರುತ್ತದೆ. ಹಾಗಾಗಿ ಕಡಿಮೆ ಶಕ್ತಿಯ ವ್ಯಯದಿಂದ ಹೈಡ್ರೋಜನ್ ಪಡೆಯಬಹುದು. ನೀರಿನಿಂದ ಜಲಜನಕವನ್ನು ಬೇರ್ಪಡಿಸಲು 1.23 ವೋಲ್ಡ್ ವಿದ್ಯುತ್ ಅಗತ್ಯವಿದ್ದರೆ, ಮೂತ್ರದಲ್ಲಿ ಕೇವಲ 0.37 ವೋಲ್ಟ್ ಸಾಕೆನ್ನುವುದು ಓಹಿಯೋ ಯುನಿವರ್ಸಿಟಿ ಅಧ್ಯಯನಕಾರರ ಅಭಿಪ್ರಾಯ.

ಸಂಶೋಧನೆಯು ಆರಂಭಿಕ ಹಂತದಲ್ಲಿರುವುದರಿಂದ ಸದ್ಯದ ಮಟ್ಟಿಗೆ ಈ ಕಾರುಗಳು ರಸ್ತೆಗೆ ಬರಲಾರವು. ಇನ್ನು ಕೆಲವೇ ವರ್ಷಗಳಲ್ಲಿ ಅದು ಸಾಧ್ಯವೆನ್ನುತ್ತಾರೆ ವಿಜ್ಞಾನಿಗಳು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಈ ವರ್ಷ ಇನ್ನಷ್ಟು ಉತ್ತೇಜನ ಅನಗತ್ಯ: ಮಾಂಟೆಕ್
ಬರಲಿದೆ 'ಸರಳ್'ನ ಸರಳೀಕೃತ ಅವತಾರ
ರಫ್ತು ಕ್ಷೇತ್ರದ ಸಬ್ಸಿಡಿ ವಿಸ್ತರಣೆ
ಸರಕು ವಹಿವಾಟು ತೆರಿಗೆ ರದ್ದು
ಇನ್ನು ಶ್ರೀಮಂತ ಎನ್ನಲು 30 ಲಕ್ಷ ಬೇಕು..!
ಬಜೆಟ್‌: ಕಾರ್ಪೊರೇಟ್ ವಲಯಕ್ಕೆ ಬಹುತೇಕ ನಿರಾಸೆ