ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಕ್ಸ್‌ಪ್ಲೋರರ್ ಮೂಲಕ ಹ್ಯಾಕ್ ಮಾಡಬಹುದು: ಮೈಕ್ರೋಸಾಫ್ಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಕ್ಸ್‌ಪ್ಲೋರರ್ ಮೂಲಕ ಹ್ಯಾಕ್ ಮಾಡಬಹುದು: ಮೈಕ್ರೋಸಾಫ್ಟ್
ಇದುವರೆಗೂ ಪರಿಹರಿಸಿರದ ಮತ್ತು ಸುಲಭವಾಗಿ ಇತರರ ಆಕ್ರಮಣಕ್ಕೊಳಗಾಗುವ ದುರ್ಬಲ ಅಂಶವೊಂದು ಕಂಪ್ಯೂಟರ್ ಸೆಕ್ಯುರಿಟಿಯಲ್ಲಿ ಕಂಡು ಬಂದಿದೆ ಎಂದು ಇಂಟರ್ನೆಟ್ ಎಕ್ಸ್‌ಪ್ಲೋರರ್ ಬಳಕೆದಾರರಿಗೆ ಮೈಕ್ರೋಸಾಫ್ಟ್ ಕಾರ್ಪೊರೇಷನ್ ಎಚ್ಚರಿಕೆ ನೀಡಿದೆ.

ತಂತ್ರಾಂಶದಲ್ಲಿರುವ ದೌರ್ಬಲ್ಯವನ್ನು ಮೈಕ್ರೋಸಾಫ್ಟ್‌ ಸೋಮವಾರ ಬಹಿರಂಗಪಡಿಸಿದ್ದು, ವಿಂಡೋಸ್ ಎಕ್ಸ್‌ಪಿ ಅಥವಾ ವಿಂಡೋಸ್ ಸರ್ವರ್ 2003 ಅಪರೇಟಿಂಗ್ ಸಿಸ್ಟಂ ಅನ್ನು ಬಳಸುವವರು ಎಚ್ಚರಿಕೆಯಿಂದರಬೇಕು ಎಂದು ಸೂಚನೆ ರವಾನಿಸಿದೆ.

ಇದು ಸುಲಭವಾಗಿ ಕಂಪ್ಯೂಟರ್‌ನಿಂದ ಮಾಹಿತಿಗಳನ್ನು ಇತರರು ಕದಿಯಲು ಅನುವು ಮಾಡಿಕೊಡುತ್ತದೆ. ಆ ರೀತಿ ಹ್ಯಾಕ್ ಮಾಡಲು ಬಳಕೆದಾರ ಕೇವಲ ಒಂದು ವೆಬ್‌ಸೈಟನ್ನು ವೀಕ್ಷಿಸಿದರಷ್ಟೇ ಸಾಕಾಗುತ್ತದೆ ಎಂದು ಮೈಕ್ರೋಸಾಫ್ಟ್ ವಿವರಿಸಿದೆ.

ಕಳೆದೊಂದು ವಾರದಿಂದ ಕಂಪ್ಯೂಟರ್‌ಗಳ ಮೇಲೆ ದಾಳಿ ಆರಂಭವಾಗಿದೆ. ಸಾವಿರಾರು ವೆಬ್‌ಸೈಟುಗಳನ್ನು ದುಷ್ಕರ್ಮಿಗಳು ತಮ್ಮ ದುರುದ್ದೇಶದ ಸಾಫ್ಟ್‌ವೇರ್ ಬಳಸಿ ಹ್ಯಾಕ್ ಮಾಡುತ್ತಿದ್ದಾರೆ.

ಬಳಕೆದಾರರು ತಮ್ಮ ಇನ್-ಬಾಕ್ಸ್‌ಗೆ ಬಂದ ಸ್ಪಾಮ್ ಇ-ಮೈಲ್‌ಗಳನ್ನು ಕ್ಲಿಕ್ ಮಾಡುವಾಗ ಜಾಗರೂಕತೆ ವಹಿಸಬೇಕು. ಇದರ ಮೂಲಕವೇ ಹ್ಯಾಕ್ ಮಾಡಲಾಗುತ್ತಿದೆ. ಇಂಟರ್ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ನಿರ್ದಿಷ್ಟ ವಿಡಿಯೋ ಲಿಂಕ್‌ವೊಂದಕ್ಕೆ ಕ್ಲಿಕ್ ಮಾಡಿದ ತಕ್ಷಣ ಹ್ಯಾಕ್ ಮಾಡುವವರ ನಿಯಂತ್ರಣಕ್ಕೆ ಕಂಪ್ಯೂಟರ್ ಸಿಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಅದಕ್ಕಾಗಿ ಮೈಕ್ರೋಸಾಫ್ಟ್ ತಾತ್ಕಾಲಿಕ ಪರಿಹಾರ ಕ್ರಮವನ್ನೂ ಕೈಗೊಂಡಿದೆ. ಬಳಕೆದಾರರು ಮೈಕ್ರೋಸಾಫ್ಟ್ ವೆಬ್‌ಸೈಟ್‌ನಿಂದ ತಕ್ಷಣದ ಸುರಕ್ಷಾ ಕ್ರಮಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ. ಮುಂದಿನ ಏಳು ದಿನಗಳಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಮಾರ್ಗವನ್ನು ಕಂಡು ಹುಡುಕಿ ಬಳಕೆದಾರರಿಗೆ ಒದಗಿಸುವುದಾಗಿಯೂ ಮೈಕ್ರೋಸಾಫ್ಟ್ ಹೇಳಿಕೊಂಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇದು ತಮಾಷೆಯಲ್ಲ; ಮೂತ್ರದಿಂದ ಕಾರು ಓಡುತ್ತೆ..!
ಈ ವರ್ಷ ಇನ್ನಷ್ಟು ಉತ್ತೇಜನ ಅನಗತ್ಯ: ಮಾಂಟೆಕ್
ಬರಲಿದೆ 'ಸರಳ್'ನ ಸರಳೀಕೃತ ಅವತಾರ
ರಫ್ತು ಕ್ಷೇತ್ರದ ಸಬ್ಸಿಡಿ ವಿಸ್ತರಣೆ
ಸರಕು ವಹಿವಾಟು ತೆರಿಗೆ ರದ್ದು
ಇನ್ನು ಶ್ರೀಮಂತ ಎನ್ನಲು 30 ಲಕ್ಷ ಬೇಕು..!