ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಶೇಕಡಾ -1.55ಕ್ಕೆ ಕುಸಿದ ಹಣದುಬ್ಬರ ದರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೇಕಡಾ -1.55ಕ್ಕೆ ಕುಸಿದ ಹಣದುಬ್ಬರ ದರ
ತನ್ನ ಋಣಾತ್ಮಕ ಛಾಯೆಯನ್ನು ಮುಂದುವರಿಸಿರುವ ಭಾರತದಲ್ಲಿನ ಹಣದುಬ್ಬರ ದರವು ಜೂನ್ 27ಕ್ಕೆ ಕೊನೆಗೊಂಡ ವಾರದಲ್ಲಿ ಶೇಕಡಾ (-)1.55ರ ಕುಸಿತ ಕಂಡಿದೆ. ಅದಕ್ಕಿಂತ ಹಿಂದಿನ ವಾರ ಮೈನಸ್ 1.30 ದಾಖಲಾಗಿತ್ತು.

1995ರಲ್ಲಿ ಆರಂಭವಾಗಿದ್ದ ವಾರ್ಷಿಕ ಅಂಶಗಳ ಸಗಟು ಸೂಚ್ಯಂಕ ದರದ ಇತಿಹಾಸದಲ್ಲೇ ಜೂನ್ 6ಕ್ಕೆ ಕೊನೆಗೊಂಡ ವಾರದಲ್ಲಿ ಮೊತ್ತ ಮೊದಲ ಬಾರಿಗೆ ಋಣಾತ್ಮಕ ಹಾದಿ ಹಿಡಿತ್ತು. ಈ ಹಿಂದೆ ಹಣದುಬ್ಬರ ದರ ಋಣಾತ್ಮಕವಾಗಿ ಸಾಗಿದ್ದು 1977ರಲ್ಲಿ.

ಈ ಬಾರಿ ಜೂನ್ 27ಕ್ಕೆ ಕೊನೆಗೊಂಡ ವಾರದಲ್ಲಿ (-)1.55ರ ಕುಸಿತ ಕಂಡಿದ್ದರೆ, ಕಳೆದ ವರ್ಷದ ಇದೇ ತಿಂಗಳ ಈ ವಾರದಲ್ಲಿ ಹಣದುಬ್ಬರ ದರವು ಗರಿಷ್ಠ ಶೇಕಡಾ 12.03ನ್ನು ತಲುಪಿತ್ತು.

ಮೂಲಭೂತ ವಸ್ತುಗಳ ದರದಲ್ಲಿ ಶೇಕಡಾ 0.3ರ ಸೂಚ್ಯಂಕ ದರ ಏರಿಕೆಯಾಗಿದ್ದರೆ, ಇಂಧನ ಮತ್ತು ವಿದ್ಯುತ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಕಳೆದ ವಾರ ಇವುಗಳು 327.9ರ ತಾತ್ಕಾಲಿಕ ಅಂಶಗಳನ್ನು ದಾಖಲಿಸಿದ್ದವು. ಅದೇ ಹೊತ್ತಿಗೆ ಉತ್ಪಾದನಾ ವಸ್ತುಗಳ ಸೂಚ್ಯಂಕ ದರವು ಶೇಕಡಾ 0.1ರ ಕುಸಿತ ಕಂಡಿದೆ.

ಈ ವಾರದಲ್ಲಿ ಕಡಲ ಮೀನು ಶೇಕಡಾ 10ರಷ್ಟು ದುಬಾರಿಯಾಗಿದ್ದರೆ, ಉದ್ದಿನ ಬೇಳೆ, ಹಣ್ಣು ಹಂಪಲುಗಳು ಮತ್ತು ತರಕಾರಿ ಬೆಲೆ ಶೇಕಡಾ 2ರಷ್ಟು ಏರಿಕೆಯಾಗಿತ್ತು. ತೊಗರಿ ಬೇಳೆ, ಹೆಸರು ಬೇಳೆ ದರದಲ್ಲಿ ಶೇಕಡಾ 1ರ ಮೇಲ್ಮುಖ ಕಂಡಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಿಎಸ್‌ಯು ಶೇರು ವಿಕ್ರಯಕ್ಕೆ ಬದ್ಧ: ಪ್ರಣಬ್
ಬಜೆಟ್ ಪರಿಣಾಮ: ಚಿನ್ನ ಬೆಲೆಯಲ್ಲಿ ಬದಲಾವಣೆಯಿಲ್ಲ
ಸೇತುವೆಗೆ ರಾಜೀವ್ ಗಾಂಧಿ ಹೆಸರು; 'ಮಹಾ' ಅಸ್ತು
ಯುಎಇಯಿಂದ 1.5 ಲಕ್ಷ ಭಾರತೀಯರು ವಾಪಸ್
ವಿವಾದದಲ್ಲಿ ಸರಕಾರವು ಪ್ರತಿವಾದಿಯಲ್ಲ: ಆರ್ಎನ್ಆರ್ಎಲ್
ಬರಲಿದೆ ಗೂಗಲ್‌ನಿಂದ ಕ್ರೋಮ್ ಆಪರೇಟಿಂಗ್ ಸಿಸ್ಟಂ