ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 60 ಡಾಲರುಗಳಲ್ಲಿ ಸ್ಥಿರವಾಗಿರುವ ಕಚ್ಚಾ ತೈಲ ಬೆಲೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
60 ಡಾಲರುಗಳಲ್ಲಿ ಸ್ಥಿರವಾಗಿರುವ ಕಚ್ಚಾ ತೈಲ ಬೆಲೆ
ಅಮೆರಿಕಾ ಗ್ಯಾಸೊಲಿನ್ ಯಾದಿಯು ಕಚ್ಛಾ ತೈಲ ಬೇಡಿಕೆಯು ದುರ್ಬಲವಾಗಿರಲಿದೆ ಎಂದ ನಂತರ ಶೇಕಡಾ 17ರ ಕುಸಿತ ಕಂಡಿದ್ದ ಮಾರುಕಟ್ಟೆಯು ಗುರುವಾರ ಪ್ರತೀ ಬ್ಯಾರೆಲ್‌ ಕಚ್ಚಾ ತೈಲಕ್ಕೆ 60 ಡಾಲರುಗಳ ಸ್ಥಿರತೆಯನ್ನು ಕಾಯ್ದುಕೊಂಡಿದೆ.

ಸಿಂಗಾಪುರದಲ್ಲಿನ ನ್ಯೂಯಾರ್ಕ್ ಮರ್ಕಂಟೈಲ್ ಎಕ್ಸ್‌ಚೇಂಜ್‌ ಎಲೆಕ್ಟ್ರಾನಿಕ್ ವ್ಯವಹಾರದಲ್ಲಿ ಬೆಂಚ್‌ಮಾರ್ಕ್ ಕಚ್ಚಾ ತೈಲದ ಆಗಸ್ಟ್ ವಿತರಣೆಯಲ್ಲಿ 48 ಸೆಂಟ್‌ಗಳ ಏರಿಕೆ ದಾಖಲಾಗಿದ್ದು, ಪ್ರತೀ ಬ್ಯಾರೆಲ್‌ಗೆ 60.62 ಡಾಲರುಗಳ ಬೆಲೆಗೆ ಬಿಕರಿಯಾಗಿದೆ. ಬುಧವಾರದ ವ್ಯವಹಾರದಲ್ಲಿ ಶೇಕಡಾ ನಾಲ್ಕು ಅಥವಾ 2.79 ಡಾಲರುಗಳ ಕುಸಿತ ಕಂಡು ಪ್ರತೀ ಬ್ಯಾರೆಲ್‌ಗೆ 60.14 ಡಾಲರ್ ದಾಖಲಾಗಿತ್ತು.

ಕಳೆದ ವಾರ ಅಮೆರಿಕಾ ಸ್ವಾತಂತ್ರ್ಯ ದಿನಾಚರಣೆ (ಜುಲೈ 4) ಪ್ರಯುಕ್ತ ಚಾಲಕರು ರಸ್ತೆಯನ್ನು ಆಕ್ರಮಿಸುವ ಮುನ್ಸೂಚನೆಯಿದ್ದ ಕಾರಣ ಜೂನ್ 30ರಂದು ಎಂಟು ತಿಂಗಳ ಗರಿಷ್ಠ 73.38 ಡಾಲರುಗಳಿಂದ ಕೆಳಕ್ಕೆ ಕುಸಿದಿತ್ತು.

ಪ್ರಸಕ್ತ ಪರಿಸ್ಥಿತಿಯನ್ನು ಗಮನಿಸಿದರೆ ಕಚ್ಚಾ ತೈಲ ಬೆಲೆಯು 50 ಡಾಲರುಗಳನ್ನು ತಲುಪಬಹುದು ಎಂದು ಉದ್ಯಮದ ಪ್ರಮುಖರು ತೀರಾ ನಿರಾಸೆಯಿಂದ ಪ್ರತಿಕ್ರಿಯಿಸಿದ್ದಾರೆ.

ಆಗಸ್ಟ್ ತಿಂಗಳಿನ ಗ್ಯಾಸೊಲಿನ್ ವಿತರಣೆಯು 1.4 ಸೆಂಟ್ಸ್‌ಗಳ ಏರಿಕೆ ಕಂಡು ಗ್ಯಾಲನ್‌ಗೆ 1.65 ಡಾಲರ್, ಹೀಟಿಂಗ್ ತೈಲವು ಶೇಕಡಾ 0.94ರ ಏರಿಕೆಯಾಗಿ 1.55 ಡಾಲರ್ ತಲುಪಿದೆ.

ನೈಸರ್ಗಿಕ ಅನಿಲದ ಆಗಸ್ಟ್ ವಿತರಣೆಯು 3.6 ಸೆಂಟ್ಸ್‌ಗಳ ಏರಿಕೆ ದಾಖಲಿಸಿದ್ದು, 1,000 ಕ್ಯೂಬಿಕ್ ಅಡಿಗೆ 3.39 ಡಾಲರುಗಳ ಬೆಲೆ ಹೊಂದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೇಕಡಾ -1.55ಕ್ಕೆ ಕುಸಿದ ಹಣದುಬ್ಬರ ದರ
ಪಿಎಸ್‌ಯು ಶೇರು ವಿಕ್ರಯಕ್ಕೆ ಬದ್ಧ: ಪ್ರಣಬ್
ಬಜೆಟ್ ಪರಿಣಾಮ: ಚಿನ್ನ ಬೆಲೆಯಲ್ಲಿ ಬದಲಾವಣೆಯಿಲ್ಲ
ಸೇತುವೆಗೆ ರಾಜೀವ್ ಗಾಂಧಿ ಹೆಸರು; 'ಮಹಾ' ಅಸ್ತು
ಯುಎಇಯಿಂದ 1.5 ಲಕ್ಷ ಭಾರತೀಯರು ವಾಪಸ್
ವಿವಾದದಲ್ಲಿ ಸರಕಾರವು ಪ್ರತಿವಾದಿಯಲ್ಲ: ಆರ್ಎನ್ಆರ್ಎಲ್