ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ದೇಶದಲ್ಲಿ ದೆಹಲಿ ದುಬಾರಿ, ಬೆಂಗಳೂರಿಗೆ 3ನೇ ಸ್ಥಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇಶದಲ್ಲಿ ದೆಹಲಿ ದುಬಾರಿ, ಬೆಂಗಳೂರಿಗೆ 3ನೇ ಸ್ಥಾನ
ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗಿರುವ ಕಾರಣದಿಂದ ವಿಶ್ವದ ಇತರ ನಗರಗಳಿಗೆ ಹೋಲಿಸಿದಾಗ ಭಾರತೀಯ ನಗರಗಳೇ ಅಗ್ಗದ ವಾಸಸ್ಥಾನಗಳು. ಇವುಗಳಲ್ಲಿ ವಿದೇಶಿ ವಲಸಿಗರಿಗೆ ಬದುಕು ಸಾಗಿಸಲು ರಾಜಧಾನಿಯೇ ಹೆಚ್ಚು ದುಬಾರಿ ಎಂದು ಸಮೀಕ್ಷೆಯೊಂದು ತಿಳಿಸಿದೆ. ಈ ಸಮೀಕ್ಷೆಯ ಪ್ರಕಾರ ದೇಶದಲ್ಲೇ ಬೆಂಗಳೂರು ಮೂರನೇ ದುಬಾರಿ ನಗರ.

ವಿಶ್ವ ಮಾನವ ಸಂಪನ್ಮೂಲ ಸಲಹಾ ಸಂಸ್ಥೆ 'ಮರ್ಸರ್' ನಡೆಸಿರುವ ಜಾಗತಿಕ ಜೀವನ ನಿರ್ವಹಣಾ ವೆಚ್ಚ ಸಮೀಕ್ಷೆ 2009ರಲ್ಲಿ ಈ ವಿಚಾರಗಳು ಬಹಿರಂಗಗೊಂಡಿವೆ. ಈ ಸಮೀಕ್ಷೆ ಪ್ರಕಾರ ವಲಸಿಗರಿಗೆ ಭಾರತದಲ್ಲಿ ದೆಹಲಿಯೇ ಅತೀ ಹೆಚ್ಚು ದುಬಾರಿ. ನಂತರ ಸ್ಥಾನಗಳು ಮುಂಬೈ, ಬೆಂಗಳೂರು ಮತ್ತು ಚೆನ್ನೈಗೆ ಸಲ್ಲುತ್ತವೆ.

ವಿಶ್ವಾದ್ಯಂತದ 143 ನಗರಗಳ ಸಮೀಕ್ಷೆಯಲ್ಲಿ ದೆಹಲಿಯು ಭಾರತದ ದುಬಾರಿ ನಗರವೆಂಬ ಸ್ಥಾನವನ್ನು ಪಡೆದಿದ್ದರೂ ಸಹ ಪರಿಸ್ಥಿತಿ ಸುಧಾರಣೆಯಾಗಿರುವುದು ಕಂಡು ಬಂದಿದೆ. ಈ ಹಿಂದಿನ ಸಮೀಕ್ಷೆಯಲ್ಲಿ 55ನೇ ಸ್ಥಾನ ಪಡೆದಿದ್ದ ದೆಹಲಿಯು ಪ್ರಸಕ್ತ 10 ಸ್ಥಾನಗಳ ಕುಸಿತ ಕಂಡು 65ನೇ ಸ್ಥಾನಕ್ಕೆ ತಲುಪಿದೆ.

ಭಾರತದಲ್ಲೇ ಅತಿ ದುಬಾರಿ ನಗರವೆಂಬ ಕುಖ್ಯಾತಿಗೊಳಗಾಗಿದ್ದ ಮುಂಬೈ 48ನೇ ಸ್ಥಾನದಿಂದ 66ನೇ ಸ್ಥಾನಕ್ಕೆ ಕುಸಿದಿದೆ. 2008ರಲ್ಲಿ ಈ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮುಂಬೈ ದೇಶದಲ್ಲೇ ಅಗ್ರ ಸ್ಥಾನ ಪಡೆದುಕೊಂಡಿತ್ತು.

ಕಳೆದ ಬಾರಿಯ ರ‌್ಯಾಂಕಿಂಗ್‌ನಲ್ಲಿ 118ನೇ ಸ್ಥಾನದಲ್ಲಿದ್ದ ಬೆಂಗಳೂರು ಈ ಬಾರಿ 15 ಸ್ಥಾನಗಳ ಸುಧಾರಣೆ ಕಂಡಿದೆ. ಆ ಮೂಲಕ ಈ ಸಲದ ಸರ್ವೇಯಲ್ಲಿ ಕರ್ನಾಟಕದ ರಾಜಧಾನಿಯು 133ನೇ ಸ್ಥಾನವನ್ನು ಪಡೆದುಕೊಂಡಿದೆ.

ಭಾರತದ ಅತೀ ಅಗ್ಗದ ನಗರವೆಂಬ ಹೆಗ್ಗಳಿಕೆ ಚೆನ್ನೈಗೆ ಸಂದಿದೆ. ಕಳೆದ ವರ್ಷ 117ನೇ ಸ್ಥಾನದಲ್ಲಿದ್ದ ತಮಿಳುನಾಡಿನ ರಾಜಧಾನಿ ಈ ಬಾರಿ 135ನೇ ಸ್ಥಾನವನ್ನು ತಲುಪಿದೆ.

"ವಿಶ್ವದ ಪ್ರಮುಖ ಚಲಾವಣೆಯ ಹಣದ ಮೌಲ್ಯದೆದುರು ಭಾರತದ ರೂಪಾಯಿ ಕುಸಿತ ಕಂಡಿರುವ ಕಾರಣ ಇಲ್ಲಿನ ನಗರಗಳು ರ‌್ಯಾಂಕಿಂಗ್‌ನಲ್ಲಿ ಇಳಿಕೆ ಕಂಡಿವೆ. ರೂಪಾಯಿ ಮೌಲ್ಯ ಕುಸಿದಿರುವ ಕಾರಣ ಜಾಗತಿಕ ವ್ಯವಹಾರ ವಲಯವನ್ನು ನವದೆಹಲಿ, ಮುಂಬೈ ಮತ್ತು ಬೆಂಗಳೂರುಗಳು ಸೆಳೆಯಬಹುದು" ಎಂದು ಮರ್ಸರ್ ಸಂಸ್ಥೆಯ ಭಾರತೀಯ ಪ್ರಮುಖ ರೂಪಮ್ ಮಿಶ್ರಾ ತಿಳಿಸಿದ್ದಾರೆ.

ಮರ್ಸರ್ ಪ್ರಕಾರ ವಿಶ್ವದ ಅತೀ ದುಬಾರಿ ನಗರ ಟೋಕಿಯೋ. ಎರಡನೇ ಮತ್ತು ಮೂರನೇ ಸ್ಥಾನವನ್ನು ಕ್ರಮವಾಗಿ ಓಸಾಕಾ ಮತ್ತು ಮಾಸ್ಕೋಗಳು 2009ರ ಸಮೀಕ್ಷೆಯಲ್ಲಿ ಪಡೆದುಕೊಂಡಿವೆ. ವಿಶ್ವದಲ್ಲೇ ಅತೀ ದುಬಾರಿ ಪಟ್ಟಿಯಲ್ಲಿ ಸಿಂಗಾಪುರದ ಸ್ಥಾನ 10ನೇಯದ್ದು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
60 ಡಾಲರುಗಳಲ್ಲಿ ಸ್ಥಿರವಾಗಿರುವ ಕಚ್ಚಾ ತೈಲ ಬೆಲೆ
ಶೇಕಡಾ -1.55ಕ್ಕೆ ಕುಸಿದ ಹಣದುಬ್ಬರ ದರ
ಪಿಎಸ್‌ಯು ಶೇರು ವಿಕ್ರಯಕ್ಕೆ ಬದ್ಧ: ಪ್ರಣಬ್
ಬಜೆಟ್ ಪರಿಣಾಮ: ಚಿನ್ನ ಬೆಲೆಯಲ್ಲಿ ಬದಲಾವಣೆಯಿಲ್ಲ
ಸೇತುವೆಗೆ ರಾಜೀವ್ ಗಾಂಧಿ ಹೆಸರು; 'ಮಹಾ' ಅಸ್ತು
ಯುಎಇಯಿಂದ 1.5 ಲಕ್ಷ ಭಾರತೀಯರು ವಾಪಸ್