ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕರ್ನಾಟಕಕ್ಕೂ ಕಾಲಿಟ್ಟ ಟಾಟಾ ಜಿಎಸ್‌ಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕರ್ನಾಟಕಕ್ಕೂ ಕಾಲಿಟ್ಟ ಟಾಟಾ ಜಿಎಸ್‌ಎಂ
ದಕ್ಷಿಣ ಭಾರತದ ತಮಿಳುನಾಡು, ಕೇರಳ ಮತ್ತು ಒರಿಸ್ಸಾಗಳಲ್ಲಿ ಕಾಲಿಟ್ಟ ಬೆನ್ನಿಗೆ 'ಟಾಟಾ ಡೊಕೊಮೊ' ಇದೀಗ ಕರ್ನಾಟಕಕ್ಕೂ ವ್ಯಾಪಿಸಿದೆ. ಸೆಕುಂಡುಗಳ ಲೆಕ್ಕಾಚಾರದಲ್ಲಿ ಪಾವತಿಸಿ ಎಂದೇ ಪ್ರಸಿದ್ಧಿಗೆ ಬರುತ್ತಿರುವ ಟಾಟಾ ಜಿಎಸ್‌ಎಂ ಗುರುವಾರ ಬೆಂಗಳೂರಿನಲ್ಲಿ ಉದ್ಗಾಟನೆಗೊಂಡಿತು.

ಟಾಟಾ ಟೆಲಿಸರ್ವಿಸಸ್‌ನ ಜಿಎಸ್‌ಎಂ ವಿಭಾಗ 'ಟಾಟಾ ಡೊಕೊಮೊ' ಕರ್ನಾಟಕದಲ್ಲಿ ಕಾರ್ಯಾರಂಭ ಮಾಡಿದ್ದು, ಸೇವೆಗಳನ್ನು ದೇಶದಾದ್ಯಂತ ವಿಸ್ತರಿಸುವ ಸಲುವಾಗಿ 2 ಬಿಲಿಯನ್ ಡಾಲರ್ ವೆಚ್ಚ ಮಾಡುವುದಾಗಿ ಹೇಳಿಕೊಂಡಿದೆ. ವರ್ಷಾಂತ್ಯದೊಳಗೆ ಎಲ್ಲವನ್ನೂ ಮಾಡಿ ಮುಗಿಸುವುದಾಗಿ ಕಂಪನಿ ಭರವಸೆಯನ್ನೂ ನೀಡಿದೆ.

ಇದಕ್ಕಾಗಿ ಕರ್ನಾಟಕದಲ್ಲಿ ಕಂಪನಿಯು 150 ಮಿಲಿಯನ್ ಡಾಲರುಗಳನ್ನು ವ್ಯಯಿಸಲಿದೆ ಎಂದು ಟಾಟಾ ಟೆಲಿಸರ್ವಿಸಸ್‌ನ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಸರ್ದಾನಾ ಪತ್ರಕರ್ತರಿಗೆ ತಿಳಿಸಿದ್ದಾರೆ.

ಮುಂದಿನ ವಾರದಲ್ಲಿ ಇನ್ನಷ್ಟು ರಾಜ್ಯಗಳನ್ನು ಟಾಟಾ ಡೊಕೊಮೊ ವ್ಯಾಪಿಸಲಿದೆ. 'ಬಳಸಿದಕ್ಕಷ್ಟೇ ಪಾವತಿಸಿ' ಎಂಬುದು ಟಾಟಾ ಜಿಎಸ್ಎಂ ಘೋಷ ವಾಕ್ಯ. ಪ್ರತೀ ಸೆಕುಂಡುಗಳನ್ನೂ ಗಣನೆಗೆ ತೆಗೆದುಕೊಳ್ಳುವ ಈ ನೆಟ್‌ವರ್ಕ್ ಸೆಕುಂಡಿಗೆ ಒಂದು ಪೈಸೆಯಂತೆ ದರ ನಿಗದಿಪಡಿಸಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ವಿವರಿಸಿದ್ದಾರೆ.

ಕರ್ನಾಟಕದಲ್ಲಿ ಟಾಟಾ ಜಿಎಸ್‌ಎಂ ಸೇವೆಯು ರೈಲ್ವೇ ವಲಯಗಳು, ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 427 ನಗರಗಳು ಹಾಗೂ 2,642 ಹಳ್ಳಿಗಳಲ್ಲಿ ಪ್ರಸಕ್ತ ಲಭ್ಯವಿದೆ. ಕರ್ನಾಟಕದಿಂದ ಭಾರತದ ಯಾವುದೇ ಮೂಲೆಗೆ ಸೆಕುಂಡಿಗೆ ಕೇವಲ ಒಂದು ಪೈಸೆಯಂತೆ ಕರೆ ಮಾಡುವ ವಿಶೇಷತೆಯನ್ನು ಟಾಟಾ ಡೊಕೊಮೊ ಹೊಂದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇನ್ಫೋಸಿಸ್ ಮೂರ್ತಿಯತ್ತ 'ಏರ್ ಇಂಡಿಯಾ' ಒಲವು
ದೇಶದಲ್ಲಿ ದೆಹಲಿ ದುಬಾರಿ, ಬೆಂಗಳೂರಿಗೆ 3ನೇ ಸ್ಥಾನ
60 ಡಾಲರುಗಳಲ್ಲಿ ಸ್ಥಿರವಾಗಿರುವ ಕಚ್ಚಾ ತೈಲ ಬೆಲೆ
ಶೇಕಡಾ -1.55ಕ್ಕೆ ಕುಸಿದ ಹಣದುಬ್ಬರ ದರ
ಪಿಎಸ್‌ಯು ಶೇರು ವಿಕ್ರಯಕ್ಕೆ ಬದ್ಧ: ಪ್ರಣಬ್
ಬಜೆಟ್ ಪರಿಣಾಮ: ಚಿನ್ನ ಬೆಲೆಯಲ್ಲಿ ಬದಲಾವಣೆಯಿಲ್ಲ