ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 'ಫಾರ್ಚೂನ್ 500' ಮಹಿಳಾ ಸಿಇಓಗಳಲ್ಲಿ ನೂಯಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಫಾರ್ಚೂನ್ 500' ಮಹಿಳಾ ಸಿಇಓಗಳಲ್ಲಿ ನೂಯಿ
ಅಮೆರಿಕಾದ ನಿಯತಕಾಲಿಕವೊಂದು ಪ್ರಕಟಿಸಿರುವ 'ಫಾರ್ಚೂನ್ 500' ಪಟ್ಟಿಯಲ್ಲಿ ಭಾರತ ಮೂಲದ ಇಂದ್ರಾ ನೂಯಿ ಸೇರಿದಂತೆ 13 ಮಹಿಳಾ ಕಾರ್ಯನಿರ್ವಹಣಾಧಿಕಾರಿಗಳು ಸ್ಥಾನ ಪಡೆದಿದ್ದಾರೆ.

ಪೆಪ್ಸಿಕೋದ ಮುಖ್ಯಸ್ಥೆ ನೂಯಿ ಕಳೆದ ವರ್ಷದ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು. ಪ್ರಸಕ್ತ ವರ್ಷ ಈ ಪಾನೀಯ ಕಂಪನಿಯು ವಾರ್ಷಿಕ ಆದಾಯವನ್ನಾಧರಿಸಿದ ವಾರ್ಷಿಕ ಫಾರ್ಚೂನ್ 500 ಕಂಪನಿಗಳ ಪಟ್ಟಿಯಲ್ಲಿ 175ನೇ ಸ್ಥಾನ ಪಡೆದುಕೊಂಡಿದೆ.

2009ರ ಸಾಲಿನ ಮಹಿಳಾ ಕಾರ್ಯನಿರ್ವಹಣಾಧಿಕಾರಿಗಳ ಪಟ್ಟಿಗೆ ಅಮೆರಿಕಾ ಮೂಲದ 'ಸುನಾಕೋ' ಕಂಪನಿಯ ಲೀನ್ ಎಲ್ಸ್‌ನಾನ್ಸ್ ಸೇರಿಕೊಳ್ಳುವ ಮೂಲಕ ಕಳೆದ ವರ್ಷಕ್ಕಿಂತ ಒಂದು ಹೆಸರು ಹೆಚ್ಚುವರಿ ಸೇರ್ಪಡೆಯಾದಂತಾಗಿದೆ.

ವೆಲ್‌ಪಾಯಿಂಟ್‌ನ ಆಂಜೆಲಾ ಎಫ್ ಬ್ರಾಲಿ, ಡುಪಾಂಟ್‌ನ ಎಲ್ಲೆನ್ ಕುಲ್ಲುಮಾನ್, ಕ್ರಾಫ್ಟ್ ಫುಡ್ಸ್‌ನ ಐರೈನ್ ರೋಸೆನ್‌ಫೆಲ್ಡ್, ಟಿಜೆಎಕ್ಸ್‌ನ ಕರೋಲ್ ಮೆರೋವಿಟ್ಜ್ ಮತ್ತು ವೆಸ್ಟ್ ಪ್ಯಾಕ್ ಬ್ಯಾಂಕಿಂಗ್‌ನ ಗೈಲ್ ಪಿ ಕೆಲ್ಲಿಯವರು ಮಹಿಳಾ ಕಾರ್ಯನಿರ್ವಹಣಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪ್ರಮುಖರು.

ಪತ್ರೀಷಿಯಾ ವೊರ್ಟೆಜ್‌ರ ಕೃಷಿ ಚಟುವಟಿಕಾ ಸಂಸ್ಥೆ 'ಆರ್ಚರ್ ಡೇನಿಯಲ್ಸ್ ಮಿಡ್‌ಲ್ಯಾಂಡ್' ಮಹಿಳೆಯರಿಂದ ನಿರ್ವಹಿಸಲ್ಪಡುತ್ತಿರುವ ಕಂಪನಿಗಳಲ್ಲಿ ಅಗ್ರ ಸಂಸ್ಥೆಯಾಗಿ ಮೂಡಿ ಬಂದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕರ್ನಾಟಕಕ್ಕೂ ಕಾಲಿಟ್ಟ ಟಾಟಾ ಜಿಎಸ್‌ಎಂ
ಇನ್ಫೋಸಿಸ್ ಮೂರ್ತಿಯತ್ತ 'ಏರ್ ಇಂಡಿಯಾ' ಒಲವು
ದೇಶದಲ್ಲಿ ದೆಹಲಿ ದುಬಾರಿ, ಬೆಂಗಳೂರಿಗೆ 3ನೇ ಸ್ಥಾನ
60 ಡಾಲರುಗಳಲ್ಲಿ ಸ್ಥಿರವಾಗಿರುವ ಕಚ್ಚಾ ತೈಲ ಬೆಲೆ
ಶೇಕಡಾ -1.55ಕ್ಕೆ ಕುಸಿದ ಹಣದುಬ್ಬರ ದರ
ಪಿಎಸ್‌ಯು ಶೇರು ವಿಕ್ರಯಕ್ಕೆ ಬದ್ಧ: ಪ್ರಣಬ್