ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 'ಸತ್ಯಂ' ಹಗರಣ ರೂವಾರಿಗಳಿಗೆ ಮಂಪರು ಪರೀಕ್ಷೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಸತ್ಯಂ' ಹಗರಣ ರೂವಾರಿಗಳಿಗೆ ಮಂಪರು ಪರೀಕ್ಷೆ
ಸತ್ಯಂ ಸ್ಥಾಪಕ ಬಿ. ರಾಮಲಿಂಗ ರಾಜು, ಅವರ ಸಹೋದರ ರಾಮ ರಾಜು ಮತ್ತು ಸತ್ಯಂ ಮಾಜಿ ಹಣಕಾಸು ಅಧಿಕಾರಿ ವದ್ಲಮಣಿ ಶ್ರೀನಿವಾಸ್‌ರಿಗೆ ಸುಳ್ಳು ಪತ್ತೆ ಮತ್ತು ಮಂಪರು ಪರೀಕ್ಷೆ ನಡೆಸಲು ಸಿಬಿಐಗೆ ವಿಶೇಷ ನ್ಯಾಯಾಲಯವು ಅನುಮತಿ ನೀಡಿದೆ.

ಹೈದರಾಬಾದ್ ನ್ಯಾಯಾಲಯವು ಬಹುಕೋಟಿ ಸತ್ಯಂ ಹಗರಣದ ರೂವಾರಿಗಳಾದ ರಾಮಲಿಂಗ ರಾಜು ಮತ್ತು ಇತರ ಆರೋಪಿಗಳ ನ್ಯಾಯಾಂಗ ಬಂಧನವನ್ನು ಜುಲೈ 22ರವರೆಗೆ ಬುಧವಾರ ವಿಸ್ತರಿಸಿದೆ.

ಸತ್ಯಂ ಕಂಪ್ಯೂಟರ್ಸ್‌ನ 7,136 ಕೋಟಿ ರೂಪಾಯಿಗಳ ಭ್ರಷ್ಟಾಚಾರವನ್ನು 2009ರ ಜನವರಿ 7ರಂದು ಒಪ್ಪಿಕೊಂಡಿದ್ದ ರಾಮಲಿಂಗ ರಾಜು ಮತ್ತು ಇತರರಿಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಬೇಕೆಂಬ ಕೋರಿಕೆಯನ್ನು ಸಿಬಿಐ ಮಾರ್ಚ್ 24ರಂದು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದೀಗ ಅನುಮತಿ ನೀಡಿರುವ ಸಿಬಿಐ ನ್ಯಾಯಾಲಯ, ಎಂಟು ವಾರಗಳೊಳಗೆ ಪರೀಕ್ಷೆಗಳನ್ನು ಮುಗಿಸಬೇಕು ಎಂದು ಗಡುವು ವಿಧಿಸಿದೆ.

"ಈ ಸುಳ್ಳು ಪತ್ತೆ ಮತ್ತು ಮಂಪರು ಪರೀಕ್ಷೆಗಳನ್ನು ಕಾನೂನು ಪ್ರಕಾರ ಸಾಕ್ಷಿ ಎಂದು ನ್ಯಾಯಾಲಯವು ಪರಿಗಣಿಸುವುದಿಲ್ಲ. ಆದರೆ ನಮಗೆ ತನಿಖೆಗೆ ಅನುಕೂಲವಾಗುವ ದೃಷ್ಟಿಯಿಂದ ಇದು ಉಪಯುಕ್ತ. ವ್ಯಕ್ತಿಯ ಇತರ ನಡವಳಿಕೆಗಳನ್ನು ಕೂಡ ಇದರಿಂದ ತಿಳಿದುಕೊಳ್ಳಬಹುದಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ರಾಮಲಿಂಗ ರಾಜು ತನಿಖಾ ಸಂಸ್ಥೆ ವಿಚಾರಣೆ ನಡೆಸುವಾಗ ಎಲ್ಲಾ ವಿಷಯಗಳನ್ನು ಬಹಿರಂಗಪಡಿಸಲು ಒಪ್ಪುತ್ತಿಲ್ಲ. ಇಲ್ಲಿ ಹೆಚ್ಚಿನ ಸಾಕ್ಷ್ಯಾಧಾರಗಳ ಅಗತ್ಯವಿದೆ. ಅದಕ್ಕಾಗಿ ವಿಧಿ ವಿಜ್ಞಾನ ಪರೀಕ್ಷೆಗೆ ಅವಕಾಶ ನೀಡಬೇಕು ಎಂದು ಸಿಬಿಐ ಮನವಿ ಸಲ್ಲಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇನ್ಫೋಸಿಸ್ ತ್ರೈಮಾಸಿಕ ವರದಿ: ಶೇ.17ರ ಪ್ರಗತಿ
ಸತ್ಯಂ ಹಗರಣ: ಮಂಪರು ಪರೀಕ್ಷೆಗೆ ನ್ಯಾಯಾಲಯ ಸಮ್ಮತಿ
ರೈಲ್ವೇ ನೇಮಕಾತಿಗೆ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ?
ಕಚ್ಚಾ ತೈಲ ಬೆಲೆ ಇಳಿದಲ್ಲಿ ಭಾರತದಲ್ಲೂ ಇಳಿಕೆ
ಗೊಂದಲದಲ್ಲಿ ಬಿಎಂಡಬ್ಲ್ಯೂ
ಬಜಾಜ್ ಡಿಸ್ಕವರ್ ಮಾರುಕಟ್ಟೆಗೆ