2015ರ ವೇಳೆಗೆ ಭಾರತದಲ್ಲಿ 237 ಬಿಲಿಯನ್ ಇಂಟರ್‌ನೆಟ್ ಬಳಕೆದಾರರು
ಬೊಸ್ಟೊನ್, ಶುಕ್ರವಾರ, 3 ಸೆಪ್ಟೆಂಬರ್ 2010( 11:43 IST )
ಭಾರತದಲ್ಲಿ ಪ್ರಸ್ತುತ 81 ಮಿಲಿಯನ್ ಇಂಟರ್‌ನೆಟ್ ಬಳಕೆದಾರರಿದ್ದು,ಮುಂಬರುವ 2015ರಲ್ಲಿ ಬಳಕೆದಾರರ ಸಂಖ್ಯೆಯಲ್ಲಿ ತ್ರಿಗುಣವಾಗಿ 237 ಮಿಲಿಯನ್‌ಗಳಿಗೆ ತಲುಪುವ ಸಾಧ್ಯತೆಗಳಿವೆ ಎಂದು ಅಧ್ಯಯನ ಸಂಸ್ಥೆಯೊಂದು ವರದಿ ಮಾಡಿದೆ.
'ಇಂಟರ್‌ನೆಟ್ಸ್ ನ್ಯೂ ಬಿಲಿಯನ್' ಎನ್ನುವ ಶಿರೋನಾಮೆಯಡಿ ಅಧ್ಯಯನ ನಡೆಸಿದ ಬೊಸ್ಟೊನ್ ಕನ್ಸಲ್‌ಟಿಂಗ್ ಗ್ರೂಪ್, ಬ್ರೆಜಿಲ್, ರಷ್ಯಾ, ಭಾರತ. ಚೀನಾ ಮತ್ತು ಇಂಡೋನೇಷ್ಯಾ(ಬಿಆರ್‌ಐಸಿಐ)ರಾಷ್ಟ್ರಗಳಲ್ಲಿ ಮುಂಬರುವ 2010ರ ವೇಳೆಗೆ ಇಂಟರ್‌ನೆಟ್ ಬಳಕೆದಾರರ ಸಂಖ್ಯೆಯಲ್ಲಿ1.2 ಬಿಲಿಯನ್‌ಗಳಿಗೆ ತಲುಪುವ ನಿರೀಕ್ಷೆಯಿದೆ ಎಂದು ವರದಿಯಲ್ಲಿ ಬಹಿರಂಗಪಡಿಸಿದೆ.
ಕಳೆದ 2009ರ ಅವಧಿಯಲ್ಲಿ ಬಿಆರ್‌ಐಸಿಐ ರಾಷ್ಟ್ರಗಳಲ್ಲಿ 610 ಮಿಲಿಯನ್ ಇಂಟರ್‌ನೆಟ್ ಬಳಕೆದಾರರಿದ್ದರು ಎಂದು ವರದಿಯಲ್ಲಿ ಮಾಹಿತಿ ನೀಡಿದೆ.
2009-15ರ ಅವಧಿಯಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆಯಲ್ಲಿ ಶೇ.9ರಿಂದ ಶೇ.20ರಷ್ಟು ಚೇತರಿಕೆ ಕಾಣಲಿದೆ. ಇಂಟರ್‌ನೆಟ್ ಬಳಕೆದಾರರಲ್ಲಿ ಯುವಕ ಯುವತಿಯರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಅಧ್ಯಯನ ಸಂಸ್ಥೆ ಪ್ರಕಟಿಸಿದೆ.