ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮೊಬೈಲ್ ಬಳಕೆದಾರರಿಗೊಂದು ಸಂತಸದ ಸುದ್ದಿ (Cell phone | No charger | Wireless recharging | Digital cameras Laptop computers)
Bookmark and Share Feedback Print
 
PTI
ಮೊಬೈಲ್ ಬಳಕೆದಾರರೆ ಪ್ರವಾಸಕ್ಕೆ ಹೋದಾಗ ಅಥವಾ ಹೊರಗಡೆ ಬಂದಾಗ ಚಾರ್ಜ್ ಮಾಡಲು ಮರೆತು, ಮೊಬೈಲ್‌ನಲ್ಲಿ ಚಾರ್ಜ್ ಇಲ್ಲವೆಂದು ಚಿಂತಿತರಾಗಿದ್ದೀರಾ?

ಚಿಂತೆ ಬೇಡ, ಇದೀಗ ಮೊಬೈಲ್ ಬಳಕೆದಾರರಿಗೆ ವೈರ್‌ಲೆಸ್‌ ಮುಖಾಂತರ ಚಾರ್ಜ್ ಮಾಡುವ ತಂತ್ರಜ್ಞಾನವನ್ನು ಜಪಾನ್‌ ಮೂಲದ ಟೆಲಿಕಾ ಕಂಪೆನಿ ಫ್ಯೂಜಿಸ್ತು, ,ಮೊಬೈಲ್ ಫೋನ್, ಡಿಜಿಟಲ್ ಕ್ಯಾಮರಾ ಮತ್ತು ಲ್ಯಾಪ್‌ಟಾಪ್‌ಗಳನ್ನು ಒಂದೇ ಬಾರಿಗೆ ಚಾರ್ಚ್‌ ಮಾಡುವಂತಹ ವೈರ್‌ಲೆಸ್ ಚಾರ್ಜಿಂಗ್‌ ಸಾಧನವನ್ನು ಅಭಿವೃದ್ಧಿಪಡಿಸಿದೆ.

ಎಲೆಕ್ಟ್ರಿಕ್ ಕಾರುಗಳು ವೈರ್‌ಲೆಸ್ ಮಖಾಂತರ ಚಾರ್ಜ್ ಮಾಡುವಂತಹ ತಂತ್ರಜ್ಞಾನವನ್ನು, ಮೊಬೈಲ್‌‌ಗೆ ಕೂಡಾ ಅನ್ವಯಿಸಲಿದೆ ಎಂದು ಒಸಾಕಾದ ಪ್ರಿಫೆಕ್ಚರ್‌ ವಿಶ್ವವಿದ್ಯಾಲಯದಲ್ಲಿ ನಡೆದ ಇನ್‌‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್, ಇನ್‌ಫಾರ್ಮೇಶನ್ ಆಂಡ್ ಕಮ್ಯೂನಿಕೇಶನ್‌ ಇಂಜಿನಿಯರ್ಸ್ ಕಾನ್ಫೆರೆನ್ಸ್‌ ಸಮ್ಮೇಳನದಲ್ಲಿ, ಫ್ಯೂಜಿತ್ಸು ಕಂಪೆನಿ ಸಾಧನದ ಮಾದರಿಯನ್ನು ಬಿಡುಗಡೆಗೊಳಿಸಿದೆ.

ವಿಶ್ವದಲ್ಲಿ ಪ್ರಪ್ರಥಮವಾಗಿ ಇಂತಹ ತಂತ್ರಜ್ಞಾನ ಹೊಂದಿರುವ ಸಾಧನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿಕೆ ನೀಡಿರುವ ಕಂಪೆನಿ, ಚಾರ್ಜರ್ ಮತ್ತು ಎಲೆಕ್ಟ್ರಾನಿಕ್ ಸಾಧನದ ಮಧ್ಯದಲ್ಲಿರುವ ಆಯಸ್ಕಾಂತ ಕ್ಷೇತ್ರಗಳನ್ನು ಬಳಸಿಕೊಂಡು ವಿದ್ಯುತ್ ವರ್ಗಾಯಿಸುವ ಆಧಾರದಲ್ಲಿ ತಂತ್ರಜ್ಞಾನ ಕಾರ್ಯನಿರ್ವಹಿಸುತ್ತದೆ.

ಇಂತಹ ಸಾಧನದಿಂದ ಕೆಲ ಮೀಟರ್‌ಗಳ ದೂರದವರೆಗೆ ಕೂಡಾ ಚಾರ್ಜ್ ಸೌಲಭ್ಯ ಪಡೆಯಬಹುದಾಗಿದೆ. ಚಾರ್ಜಿಂಗ್ ಸ್ಪಾಟ್‌ಗಳಲ್ಲಿ ಅಳವಡಿಸುವುದರಿಂದ, ಹೆಚ್ಚಿನ ಮೊಬೈಲ್ ಬಳಕೆದಾರರು ಯಾವುದೇ ಸಮಯದಲ್ಲಿ ಚಾರ್ಜಿಂಗ್ ಸೌಲಭ್ಯವನ್ನು ಪಡೆಯಬಹುದಾಗಿದೆ.

ಫ್ಯೂಜಿತ್ಸು ಲ್ಯಾಬರೋಟೋರೀಸ್ ವಿಜ್ಞಾನಿಗಳು ವೈರ್‌ಲೆಸ್ ಚಾರ್ಜಿಂಗ್ ಸಿಸ್ಟಂ ಸಾಧನವನ್ನು, ವಾಣಿಜ್ಯ ವಹಿವಾಟಿಗಾಗಿ 2012ರೊಳಗೆ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಯೋಜನೆಗಳನ್ನು ರೂಪಿಸಿದ್ದು, ವೈರ್‌ಲೆಸ್ ಚಾರ್ಜಿಂಗ್ ಸಾಧನದ ದರ ನಿಗದಿ ಕುರಿತಂತೆ ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ